• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

11 ಮಂದಿ ಶಂಕಿತ ಐಎಸ್‌ಐಎಸ್ ಉಗ್ರರನ್ನು ಬಂಧಿಸಿದ ತಾಲಿಬಾನಿಗಳು

|
Google Oneindia Kannada News

ಕಾಬೂಲ್, ನವೆಂಬರ್ 16: ಅಫ್ಘಾನಿಸ್ತಾನದಲ್ಲಿ ಶಂಕಿತ ಐಎಸ್‌ಐಎಸ್ ಉಗ್ರರನ್ನು ತಾಲಿಬಾನಿಗಳು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಯೋತ್ಪಾದಕ ಸಂಘಟನೆಯ ಉಗ್ರರು ಅಫ್ಘಾನಿಸ್ತಾನದಲ್ಲಿ ಆಗಾಗ ದಾಳಿಗಳನ್ನು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾಲಿಬಾನ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸುಮಾರು 11 ಮಂದಿ ಐಸಿಸ್-ಕೆ ಶಂಕಿತ ಉಗ್ರರನ್ನು (ISIS-K Terrorists) ಬಂಧಿಸಿದ್ದಾರೆ.

ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಪರೇಡ್ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಪರೇಡ್

ಕಾರ್ಯಾಚರಣೆಯಲ್ಲಿ ಕೆಲವು ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಅಧಿಕಾರಿಗಳೂ ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕಂದಾಹಾರ್ ಪ್ರಾಂತ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದ ತಾಲಿಬಾನಿಗಳು ಐಸಿಸ್-ಕೆ ಸಂಘಟನೆಯ ಹಲವು ಉಗ್ರರನ್ನು ಬಂಧಿಸಿ, ಮೂವರನ್ನು ಕೊಂದಿದ್ದರು.

ಕಂದಾಹಾರ್​ ಪ್ರಾಂತ್ಯದಲ್ಲಿ ಐಸಿಸ್ - ಕೆ ಸಂಘಟನೆಯ ನಾಲ್ಕು ಅಡಗುದಾಣಗಳನ್ನು ನಾಶಪಡಿಸಲಾಗಿದೆ ಎಂದು ತಾಲಿಬಾನ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ-ಖೊರಾಸನ್ ಪ್ರಸ್ತುತವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಇರುವ ಏಕೈಕ ಭಯೋತ್ಪಾದಕ ಸಂಘಟನೆಯಾಗಿದೆ.

ಸೆಂಟ್ರಲ್​​ ಡೈಕುಂಡಿ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಶಂಕಿತ ಉಗ್ರರನ್ನು ಬಂಧಿಸಿದ್ದು, ಅವರು ಹೆಲ್ಮಂಡ್, ಘಜ್ನಿ ಮತ್ತು ಉರೊಜ್ಗಾನ್ ಪ್ರಾಂತ್ಯಗಳಿಂದ ಬಂದವರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ಈವರೆಗೆ ಹಲವು ದಾಳಿಗಳು ನಡೆದಿವೆ, ಇತ್ತೀಚೆಗಷ್ಟೇ ಅಫ್ಘಾನಿಸ್ತಾನದ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದರು.

ಅಫ್ಘಾನಿಸ್ತಾನದ ನಂಗರ್​ಹಾರ್​ ಪ್ರಾಂತ್ಯದಲ್ಲಿರುವ ಸ್ಪಿನ್​ ಘರ್ ಪ್ರದೇಶದಲ್ಲಿರುವ ಮಸೀದಿಯಲ್ಲಿ ಇಂದು ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸ್ಥಳೀಯ ಮುಲ್ಲಾ ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 1.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಆ ಪ್ರದೇಶದ ನಿವಾಸಿ ಅಟಲ್ ಶಿನ್ವಾರಿ ಹೇಳಿದ್ದಾರೆ. ಮಸೀದಿಯ ಒಳಭಾಗದಲ್ಲಿ ಸ್ಫೋಟಕಗಳು ಸ್ಫೋಟಿಸಿದ್ದರಿಂದ ಈ ಘಟನೆ ನಡೆದಿದೆ.

ನವೆಂಬರ್ 2ರಂದು ಅಫ್ಘಾನಿಸ್ತಾನದ ಕಾಬೂಲ್​ನ ಅತಿದೊಡ್ಡ ಮಿಲಿಟರಿ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅಫ್ಘಾನ್​ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಆಗಸ್ಟ್​ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ರೀತಿಯ ದಾಳಿಗಳು ಹೆಚ್ಚಾಗುತ್ತಿವೆ. ಇಂದು ನಡೆದ ಮಸೀದಿಯ ಸ್ಫೋಟದ ಬಗ್ಗೆ ತಾಲಿಬಾನ್​ ನಾಯಕರು ಕೂಡ ಖಚಿತಪಡಿಸಿದ್ದು, ಸ್ಪಿನ್ ಘರ್ ಜಿಲ್ಲೆಯ ಮಸೀದಿಯಲ್ಲಿ ನಮಾಜ್ ವೇಳೆ ನಡೆದ ಸ್ಫೋಟದಿಂದ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಇದುವರೆಗೂ ಮೂವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಎಎಫ್​ಪಿಗೆ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದಕರ ಸುರಕ್ಷಿತ ತಾಣ ಅಥವಾ ಸ್ವರ್ಗವಾಗಿ ಮಾಡಬಾರದು ಎಂದು ಭಾರತ ಮತ್ತು ಅಮೆರಿಕ ತಾಲಿಬಾನ್‌ಗೆ ಒತ್ತಾಯಿಸಿತ್ತು. ಅಮೆರಿಕ-ಭಾರತ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಅಡಿಯಲ್ಲಿ ಭಯೋತ್ಪಾದನಾ ನಿಗ್ರಹದ ಕುರಿತು ಜಂಟಿ ಸಂವಾದ ನಡೆಸಿತ್ತು.

ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ದಾಳಿ ಮಾಡಲು, ಆಶ್ರಯ ನೀಡಲು, ಭಯೋತ್ಪಾದಕರಿಗೆ ತರಬೇತಿ ನೀಡಲು, ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಅಥವಾ ಹಣಕಾಸು ಒದಗಿಸಲು ಎಂದಿಗೂ ಬಳಸಬಾರದು ಎಂದು ತಾಲಿಬಾನ್​ಗೆ ಭಾರತ ಹಾಗೂ ಅಮೆರಿಕ ಕರೆ ನೀಡಿದೆ.

ಕಾನೂನು ಜಾರಿ, ಮಾಹಿತಿ ಹಂಚಿಕೆ, ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಭಯೋತ್ಪಾದನಾ ನಿಗ್ರಹ ಸವಾಲುಗಳ ಮೇಲೆ ಕಾರ್ಯತಂತ್ರದ ಒಮ್ಮುಖದ ಮೇಲೆ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಅಮೆರಿಕ ಮತ್ತು ಭಾರತ ಮುಂದಾಗಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜನರು ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲಲು ನಾವು ಬದ್ಧರಿದ್ದೇವೆ ಎಂದು ಅಮೆರಿಕ ತಿಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಲ್-ಖೈದಾ, ಐಸಿಸ್, ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಮತ್ತು ಜೈಷ್-ಎ-ಮೊಹಮ್ಮದ್ (ಜೆಮ್) ಸೇರಿದಂತೆ ಎಲ್ಲಾ ಭಯೋತ್ಪಾದನಾ ಗುಂಪುಗಳ ವಿರುದ್ಧ ಸಂಘಟಿತ ಕ್ರಮಕ್ಕೆ ಕರೆ ನೀಡಲಾಗಿದೆ.

ತಾಲಿಬಾನ್ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ನೆಲೆ ಒದಗಿಸುವುದಿಲ್ಲ ಎಂಬುದನ್ನು ಖಚಿತ ಪಡಿಸಬೇಕು ಎಂದು ಅಮೆರಿಕಾ ಮತ್ತು ಭಾರತ ಒತ್ತಾಯಿಸಿವೆ. ಪ್ರಮುಖವಾಗಿ ತಾಲಿಬಾನ್ ತನ್ನ ನೆಲವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿ ಮಾಡಬಾರದು, ಅಲ್ಲಿಂದ ಬೇರೆ ಯಾವುದೇ ದೇಶದ ಮೇಲಿನ ದಾಳಿಗೆ ವೇದಿಕೆ ಕಲ್ಪಿಸಬಾರದು. ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಮತ್ತು ಅಕ್ರಮ ಶಸ್ತ್ರಾಸ್ತ್ರ ಒದಗಿಸಬಾರದು ಎಂದು ಭಾರತ ಮತ್ತು ಅಮೆರಿಕ ಜಂಟಿಯಾಗಿ ಒತ್ತಾಯಿಸಿವೆ.

English summary
Provincial officials in central Daikundi province said that their intelligence personnel arrested 11 people who are suspected to be ISIS-K affiliates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X