Taliban Fight: ತಾಲಿಬಾನ್ & ಪಾಕಿಸ್ತಾನ ತಿಕ್ಕಾಟ ಬೂದಿ ಮುಚ್ಚಿದ ಕೆಂಡ, ಭವಿಷ್ಯದ ಕಥೆ ಏನು?
ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ಭೀಕರ ಬಡಿದಾಟ ನಿಂತಿದ್ದರೂ, ಸ್ಥಳೀಯರಲ್ಲಿ ಆತಂಕ ಈಗಲೂ ಕಡಿಮೆ ಆಗಿಲ್ಲ. ಯಾಕಂದ್ರೆ ಈ ಇಬ್ಬರು ತಿಕ್ಕಲುಗಳ ನಡುವೆ ಯಾವಾಗ ಮತ್ತೆ ಜಗಳ ಶುರುವಾಗುತ್ತೋ? ಆ ಮೂಲಕ ಮತ್ತೆ ಇನ್ನೆಷ್ಟು ಜನರ ಜೀವ ಹೋಗುತ್ತೋ? ಅನ್ನೋ ಚಿಂತೆ ಶುರುವಾಗಿದೆ. ಹೀಗಾಗಿಯೇ ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಎರಡೂ ಕಡೆ ದ್ವೇಷದ ಬೆಂಕಿ ಕೊತ ಕೊತ ಕುದಿಯುತ್ತಿದೆ. ಪಾಪಿ ಪಾಕಿಸ್ತಾನ ಈ ಪರಿಸ್ಥಿತಿಯ ಲಾಭ ಪಡೆಯಲು ರಣಹದ್ದಿನ ರೀತಿ ಕಾಯುತ್ತಾ ಕುಳಿತಿದೆ...
ಪಾಪಿ ಪಾಕಿಸ್ತಾನ ಮಾಡುವ ಕೆಲಸವೇ ಹಿಂಗೆ ಇರುತ್ತೆ, ಯಾಕಂದ್ರೆ ಸುಮ್ಮನೆ ಇರದೆ ಇರುವೆ ಬಿಟ್ಟು ಆಟ ನೋಡುವ ಕೆಟ್ಟ ಗುಣ ಪಾಪಿ ಪಾಕಿಸ್ತಾನಕ್ಕೆ ಇದೆ. ಹೀಗಾಗಿಯೇ ಇವತ್ತಿಗೂ ಪಾಕ್ ಉದ್ಧಾರ ಆಗಿಲ್ಲ. ಈ ನಡುವೆ ತಾಲಿಬಾನ್ & ಪಾಕಿಸ್ತಾನ ನಡುವೆ ನಡೆಯುತ್ತಿರುವ ಜಗಳ ಜೋರಾಗುತ್ತಿದ್ದು, ಯಾವುದೇ ಸಮಯಕ್ಕೆ ಇಬ್ಬರ ನಡುವೆ ಘೋರವಾದ ಯುದ್ಧ ಮತ್ತೆ ಶುರುವಾಗುವ ಸಾಧ್ಯತೆ ಇದೆ. ಇದೀಗ ಶಾಂತಿ ಮಾತುಕತೆ ಆರಂಭ ಆಗಿದ್ದರೂ ವರ್ಕೌಟ್ ಆಗುತ್ತೆ ಅನ್ನೋ ನಂಬಿಕೆ ಇಲ್ಲ. ಇಷ್ಟೆಲ್ಲದರ ನಡುವೆಯೇ ತಾಲಿಬಾನ್ ಮತ್ತೊಂದು ವಾರ್ನಿಂಗ್ ಕೊಟ್ಟಿದೆ.

ಪಾಪಿ ಪಾಕಿಸ್ತಾನದ ಅಸಲಿ ಬಣ್ಣ...
ಕಾಬೂಲ್ ವಸತಿ ಪ್ರದೇಶದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ ಪಾಪಿ ಪಾಕಿಸ್ತಾನ, ಕಂದಹಾರ್ ಬಳಿ ಮೊದಲು ಕಿರಿಕ್ ಶುರು ಮಾಡಿತ್ತು. ಆ ನಂತರ ತಾಲಿಬಾನ್ ಜೊತೆ ಗುದ್ದಾಡಲು ಬಂದು ದಿಢೀರ್ ಸೋತು ಸುಣ್ಣವಾಗಿ ಓಡಿ ಹೋಗಿತ್ತು. ಮತ್ತೊಂದು ಕಡೆ ಈ ಬೆಳವಣಿಗೆ ಬೆನ್ನಲ್ಲೇ ಎರಡೂ ದೇಶಗಳ ಅಕ್ಕಪಕ್ಕದ ಗಡಿಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು, ಇಷ್ಟಾದರೂ ಪಾಕಿಸ್ತಾನ ಸೇನೆ ಮಾತ್ರ ಅಫ್ಘಾನಿಸ್ತಾನದ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಿಢೀರ್ ಮತ್ತೊಂದು ಖಡಕ್ ವಾರ್ನಿಂಗ್ ಕೊಟ್ಟಿದೆ ತಾಲಿಬಾನ್.











Click it and Unblock the Notifications