ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ನಿಂದ ಬಿಡುವು ತಗೊಂಡರೆ ಮನಸಿಗೆ ಮುದವಂತೆ!

|
Google Oneindia Kannada News

ಲಂಡನ್, ಡಿಸೆಂಬರ್ 22: ನೀವು ಫೇಸ್ ಬುಕ್ ಗೆ ವಿಪರೀತ ಅಂಟಿಕೊಂಡಿದ್ದೀರಾ? ಅದನ್ನು ನೋಡಲಾರದೆ ನನ್ನಿಂದ ಇರೋದಿಕ್ಕೆ ಸಾಧ್ಯವೇ ಇಲ್ಲ ಅನ್ನಿಸಿದೆಯಾ? ಈ ಎರಡಕ್ಕೂ ನಿಮ್ಮ ಉತ್ತರ ಹೌದು ಅಂತಾದರೆ ಒಂದೋ ಮುಂದೆ ಓದಬೇಡಿ ಅಥವಾ ನಿಮಗಿದು ಅಷ್ಟು ಇಷ್ಟವಾಗದ ಲೇಖನ ಅನ್ನೋದನ್ನು ಮುಂಚೆಯೇ ಹೇಳಿಬಿಡ್ತೀವಿ.

ಸದಾ ಫೇಸ್ ಬುಕ್ ಉಪಯೋಗಿಸುತ್ತಿದ್ದರೆ ಅದು ನಿಮ್ಮ ಭಾವನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದಂತೆ. ಅಷ್ಟೇ ಅಲ್ಲ, ಜೀವನದ ಬಗ್ಗೆ ತೃಪ್ತಿಯಿರಬೇಕಲ್ವ? ಅದರ ಮೇಲೂ ನಕಾರಾತ್ಮಕ ಪರಿಣಾಮ ಆಗುತ್ತಂತೆ. ಇದನ್ನು ಹೇಳುತ್ತಿರೋರು ವಿಜ್ಞಾನಿಗಳು. ಜತೆಗೆ ಅವರ ಸಲಹೆಯೂ ಇದೆ.[ಬದುಕಿದವರಿಗೆ 'ಶ್ರದ್ಧಾಂಜಲಿ' ಅರ್ಪಿಸಿದ ಫೇಸ್ ಬುಕ್!]

ಸಾಮಾಜಿಕ ಜಾಲತಾಣದಿಂದ ಆಗಾಗ ಬ್ರೇಕ್ ತಗೊಳ್ಳಿ. ಆ ಮೂಲಕ ನಿಮ್ಮ ಜೀವನೋತ್ಸಾಹ ಹೆಚ್ಚಿಸಿಕೊಳ್ಳಿ ಅಂತಾರೆ ವಿಜ್ಞಾನಿಗಳು. ಇದೊಂದು ಅಧ್ಯಯನ. ಆಗಿರೋದು ಡೆನ್ಮಾರ್ಕ್ ನ ಕೋಪನ್ ಹೇಗನ್ ವಿಶ್ವವಿದ್ಯಾಲಯದಲ್ಲಿ. ಸಾವಿರ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.

Taking a break from Facebook may lift your mood: Study

ನಿರಂತರವಾಗಿ ಫೇಸ್ ಬುಕ್ ಬಳಸುವಂಥವರು ಮತ್ತು ಒಂದು ವಾರ ಫೇಸ್ ಬುಕ್ ಬಳಸದಂತೆ ಸೂಚಿಸಿ ಅಂತಹವರ ಮನಸ್ಥಿತಿಯನ್ನೂ ಅಧ್ಯಯನ ಮಾಡಲಾಯಿತು. ಆ ನಂತರ ಜೀವನದ ಬಗ್ಗೆ ಇರುವ ತೃಪ್ತಿ ಹಾಗೂ ಭಾವನೆಗಳ ಬಗ್ಗೆ ಫೇಸ್ ಬುಕ್ ಮಾಡಿರುವ ನಕಾರಾತ್ಮಕ ಪರಿಣಾಮಗಳನ್ನು ತಮ್ಮ ವರದಿಯಲ್ಲಿ ತಿಳಿಸಿದರು.[ಇದೇನ ಫೇಸಬುಕ್ಕೋ, ಹಳೆ ಬಸ್ ಸ್ಟ್ಯಾಂಡ್ ಗ್ವಾಡಿನೋ?]

ಫೇಸ್ ಬುಕ್ ಬಳಸದೆ ಒಂದು ವಾರ ಕಳೆದ ತಂಡವು ತುಂಬ ಚೆನ್ನಾಗಿರುವಂಥ ಭಾವನೆ ಹೊರಹಾಕಿತು. ಅವರಲ್ಲಿ ತುಂಬ ಸಕಾರಾತ್ಮಕ ಬದಲಾವಣೆ ಕಂಡು ಬಂತು. ಫೇಸ್ ಬುಕ್ ಬಳಕೆ ಸಂದರ್ಭದಲ್ಲೇ ಅವರಿಗೆ ಬೇರೆಯವರ ಬಗೆಗೊಂದು ಶತ್ರುತ್ವ ಬೆಳೆಯುತ್ತಿತ್ತು. ಅಂದಹಾಗೆ ಈ ಅಧ್ಯಯನದ ಫಲಿತಾಂಶವನ್ನು ನಡವಳಿಕೆ ಹಾಗೂ ಸಾಮಾಜಿಕ ಜಾಲತಾಣಗಳು ಹೆಸರಿನಲ್ಲಿ ಸೈಬರ್ ಸೈಕಾಲಜಿ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

English summary
Regular Facebook use can negatively affect our emotional well-being and satisfaction with life, say scientists who suggest that taking occasional breaks from the social networking site may lift our spirits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X