ಜಪಾನ್, ಅಮೆರಿಕ & ತೈವಾನ್ ವಿರುದ್ಧ ಚೀನಾ ‘ಬ್ರಹ್ಮಾಸ್ತ್ರ’?

ವಾಷಿಂಗ್ಟನ್: ತೈವಾನ್ ವಿಚಾರದಲ್ಲಿ ಚೀನಾ ರೊಚ್ಚಿಗೇಳುವಂತೆ ಅಮೆರಿಕ ಸೇನೆ ಪ್ರಚೋದಿಸುತ್ತಿದೆ. ಈ ನಡುವೆ ತನ್ನ ಸಮಾನ ಶತ್ರುಗಳ ವಿರುದ್ಧ ಚೀನಾ 'ಬ್ರಹ್ಮಾಸ್ತ್ರ' ಸಿದ್ಧಗೊಳಿಸಿದೆ ಎಂದು ಅಮೆರಿಕದ ಗುಪ್ತಚರ ವರದಿ ತಿಳಿಸಿದೆ. ಈ ಮಾಹಿತಿ ಲೀಕ್ ಆಗಿರುವ ಹಿನ್ನೆಲೆ ಚೀನಾ ರಣತಂತ್ರ ಬಯಲಾಗಿದೆ. ಸೂಪರ್ ಸಾನಿಕ್ ಡ್ರೋನ್‌ ಮೂಲಕ ಅಮೆರಿಕಗೆ ಶಾಕ್ ಕೊಡಲು ಚೀನಾ ಸಜ್ಜಾಗಿದೆಯಂತೆ.

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನು ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಈ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿತ್ತು. ಈಗ ದೊಡ್ಡಣ್ಣನ ಎದೆ ನಡುಗುವಂತಹ ಅಸ್ತ್ರ ತಯಾರಿಸಿದೆಯಂತೆ ಚೀನಾ. ಈ ಮಾತನ್ನ ಸ್ವತಃ ಸೋರಿಕೆಯಾದ ಅಮೆರಿಕದ ಗುಪ್ತಚರ ದಾಖಲೆಗಳೇ ತಿಳಿಸಿವೆ ಎಂದು ವರದಿಯಾಗಿದೆ.

Taiwan, Japan and USA worried about WZ-8 supersonic drones

ಶಬ್ಧದ ವೇಗದ ಅಸ್ತ್ರ ಸಿದ್ಧ!

ಚೀನಾ ತಯಾರಿಸಿರುವ WZ-8 ಸೂಪರ್ ಸಾನಿಕ್ ಡ್ರೋನ್‌ ಮೂಲಕ ಜಪಾನ್, ಅಮೆರಿಕ & ತೈವಾನ್ ಎದೆ ನಡುಗಿಸಿದೆ ಡ್ರ್ಯಾಗನ್. ಈ 3 ರಾಷ್ಟ್ರಗಳು ಚೀನಾ ಶತ್ರುಗಳು ಹೀಗಾಗಿ ಇವರ ವಿರುದ್ಧ ಡ್ರ್ಯಾಗನ್ ರಣತಂತ್ರ ರೂಪಿಸಿದಂತೆ ಕಾಣ್ತಿದೆ. ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳ ವಾಯು ಸೇನೆಯ ಚಟುವಟಿಕೆ ಮೇಲೆ ಕಣ್ಣು ಇಡಲು ಹಾಗೂ ಅಕ್ಕಪಕ್ಕದ ಶತ್ರು ರಾಷ್ಟ್ರಗಳ ಮೇಲಿನ ದಾಳಿಗೆ WZ-8 ಸೂಪರ್ ಸಾನಿಕ್ ಡ್ರೋನ್‌ಗಳು ಸಹಾಯಕವಾಗಲಿದೆ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ದಾಳಿ ನಡೆಯುವುದಕ್ಕೂ ಮೊದಲು ಚೀನಾ ವಾಯು ಸೇನೆಗೆ ಮಾಹಿತಿ ನೀಡಲಿದೆಯಂತೆ WZ-8 ಡ್ರೋನ್.

ಉ.ಕೊರಿಯಾ ಜೊತೆ ಸೇರಿ ದಾಳಿ?

ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ಇಷ್ಟೆಲ್ಲದರ ಮಧ್ಯೆ ಅಮೆರಿಕ ದಕ್ಷಿಣ ಚೀನಾ ಸಮುದ್ರದ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಮೇಲಿಂದ ಮೇಲೆ ಜಂಟಿ ಸಮರಭ್ಯಾಸವನ್ನ ಆಯೋಜಿಸುತ್ತಿದೆ. ಇದರ ಪರಿಣಾಮ ಚೀನಾ ತನ್ನಲ್ಲಿರುವ ವಿನಾಶಕಾರಿ ಅಸ್ತ್ರಗಳನ್ನೆಲ್ಲಾ ಸಮರಕ್ಕೆ ಸಜ್ಜುಗೊಳಿಸುತ್ತಿದೆ.

Taiwan, Japan and USA worried about WZ-8 supersonic drones

3ನೇ ಮಹಾಯುದ್ಧಕ್ಕೆ ಮುನ್ನುಡಿ?

ಅಮೆರಿಕ ತನ್ನ ಸುತ್ತಮುತ್ತಲೂ ಏನೆಲ್ಲಾ ಆಟ ಆಡುತ್ತಿದೆ ಎಂಬುದು ಚೀನಾಗೆ ಸರಿಯಾಗಿ ಗೊತ್ತಾಗಿದೆ. ಹೀಗಾಗಿಯೇ ಅಮೆರಿಕ ತನ್ನ ಸುತ್ತಮುತ್ತಲ ಯಾವುದೇ ದೇಶಕ್ಕೆ ಎಂಟ್ರಿ ಕೊಟ್ಟರೂ ಖಡಕ್ ಎಚ್ಚರಿಕೆ ನೀಡುತ್ತಿದೆ ಚೀನಾ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದ ಆಸುಪಾಸಿನಲ್ಲಿ ಅಮೆರಿಕ ಕಂಡುಬಂದರೆ ಸರಿಯಾಗಿ ಪ್ರತ್ಯುತ್ತರ ನೀಡುತ್ತಿದೆ ಡ್ರ್ಯಾಗನ್. ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ಹೊಸ ವಿನಾಶಕಾರಿ ಅಸ್ತ್ರ ಪ್ರಯೋಗದಲ್ಲಿ ಚೀನಾ ಸೇನೆ ಬ್ಯುಸಿಯಾಗುತ್ತಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ದಕ್ಷಿಣ ಚೀನಾ ಸಮುದ್ರಲ್ಲೇ ಮುನ್ನುಡಿ ಪಕ್ಕಾ ಆದರೂ ಅಚ್ಚರಿ ಪಡಬೇಕಿಲ್ಲ.

ಈಗಿನ ಎಲ್ಲಾ ಬೆಳವಣಿಗೆಗಳಿಂದ ಲಾಭ ಪಡೆಯಲು ಒಂದು ಕಡೆ ಅಮೆರಿಕ ಯತ್ನಿಸುತ್ತಿದ್ದರೆ, ಮತ್ತೊಂದು ಕಡೆ ಚೀನಾ ತನ್ನ ಉಳಿವಿಗಾಗಿ ಏನು ಬೇಕೋ ಅದೆಲ್ಲವನ್ನೂ ಸಿದ್ಧಮಾಡಿಕೊಳ್ಳುತ್ತಿದೆ. ತಿಕ್ಕಾಟದ ಪರಿಣಾಮ ಮುಂಬರುವ ದಿನಗಳಲ್ಲಿ ದಕ್ಷಿಣ ಚೀನಾ ಸಮುದ್ರದ ಆಸುಪಾಸಿನ ಪ್ರದೇಶ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ. ಆದರೆ ಚೀನಾಗೆ ಹೇಗಾದರೂ ಪಾಠ ಕಲಿಸಬೇಕು ಅಂತಾ ಅಮೆರಿಕ ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ ಚೀನಾ ಕೂಡ ಉತ್ತರ ಕೊರಿಯಾ ಹಾಗೂ ರಷ್ಯಾದ ಜೊತೆ ಸೇರಿ ಶತ್ರುಗಳ ವಿರುದ್ಧ ಗುಡುಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+