ಅದೃಷ್ಟ ಅಂದ್ರೆ ಹೀಗಿರಬೇಕು, ಸ್ವೀಡನ್ ಪಿಎಂ ಮ್ಯಾಗ್ಡಲೀನಾ ರಿಟರ್ನ್ಸ್
ಸ್ವೀಡನ್‌ನ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಎನಿಸಿಕೊಂಡ ಕೆಲ ಹೊತ್ತಿನಲ್ಲೇ ರಾಜೀನಾಮೆ ನೀಡಿದ್ದ ಮ್ಯಾಗ್ಡಲೀನಾ ಆಂಡರ್ಸನ್ ಅವರಿಗೆ ಮತ್ತೆ ಅದೃಷ್ಟ ಒಲಿದಿದೆ. ಕಳೆದ ಬುಧವಾರದಂದು ಮತ ಚಲಾಯಿಸಿ, ಅಧಿಕಾರಕ್ಕೆ ಬಂದು ಪಿಎಂ ಕುರ್ಚಿಯಲ್ಲಿ ಕುಳಿತ ಕೆಲವೇ ಗಂಟೆಗಳ ನಂತರ ಕೆಳಗಿಳಿದ್ದರು. ಆದರೆ, ಸೋಮವಾರದಂದು ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿದ್ದಾರೆ.
ಸೋಷಿಯಲ್ ಡೆಮಾಕ್ರಾಟಿಕ್ ಪಕ್ಷಕ್ಕೆ ಸಂಸದರ ಸೂಕ್ತ ಬೆಂಬಲ ಸಿಕ್ಕಿದೆ. ಸ್ವೀಡನ್‌ನ ಸಂಸತ್ತಿನಲ್ಲಿ ಸೋಮವಾರ ನಡೆದ ಮತದಾನದಲ್ಲಿ, ರಿಕ್ಸ್‌ಡಾಗ್(ಸಂಸತ್), ಅದರ 349 ಸದಸ್ಯರಲ್ಲಿ 101 ಸದಸ್ಯರು ಹೌದು ಎಂದು ಮತ ಹಾಕಿದರು, 75 ಮಂದಿ ಗೈರುಹಾಜರಾದರು ಮತ್ತು 173 ಮಂದಿ ಇಲ್ಲ ಎಂದು ಮತ ಹಾಕಿದರು.
ಆದಾಯ ಖರ್ಚು ವೆಚ್ಚಗಳ ಕುರಿತ ಯೋಜನೆಗಳನ್ನು ದೇಶದ ಸಂಸತ್ತು ತಿರಸ್ಕರಿಸಿದ ಬಳಿಕ ಗ್ರೀನ್ ಪಾರ್ಟಿ ಸರ್ಕಾರವನ್ನು ತೊರೆಯಲು ನಿರ್ಧರಿಸಿತ್ತು. ದೇಶದಲ್ಲಿ ಹೊಸ ಆಡಳಿತಕ್ಕೆ ಬಿಕ್ಕಟ್ಟು ಉಂಟಾಗಿತ್ತು. ಪಿಎಂ ಸ್ಥಾನ ತೊರೆದಿದ್ದ ಮ್ಯಾಗ್ಡಲೀನಾ, ಒಂದೇ ಪಕ್ಷದಿಂದ ಬಹುಮತ ಗಳಿಸಿ ಅಧಿಕಾರ ಗದ್ದುಗೆಗೇರಿ ಆ ಸರ್ಕಾರದ ನಾಯಕಿಯಾಗಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಯತ್ನಿಸುವ ಭರವಸೆ ಇದೆ ಎಂದಿದ್ದರು. ಈ ರೀತಿ ಹೇಳಿಕೆ ನೀಡಿದ ಕೆಲ ದಿನಗಳ ಬಳಿಕ ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಿದ ಸಾಧನೆಯನ್ನು ಮ್ಯಾಗ್ಡಲೀನಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸ್ವೀಡಿಷ್ ಮಹಿಳೆಯರಿಗೆ ಮತಹಕ್ಕು ನೀಡಿದ ನೂರು ವರ್ಷಗಳ ನಂತರ, 54 ವರ್ಷ ವಯಸ್ಸಿನ ಸೋಶಿಯಲ್ ಡೆಮಾಕ್ರಟ್ ಅಧಿನಾಯಕಿಗೆ ಸಂಸತ್ತಿನ ವಿಭಾಗಗಳು ಅಥವಾ ರಿಕ್ಸ್‌ಡಾಗ್‌ನಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದು ಸ್ವಾಗತಿಸಿದರು.
ಅಲ್ಪಮತ ಸರ್ಕಾರದ ನೇತೃತ್ವ ವಹಿಸಿದ್ದ ಆಕೆಯ ಆಯ್ಕೆಯು ಕೊನೆ ಅವಧಿಯಲ್ಲಿ ವಿರೋಧ ಪಕ್ಷವಾದ ಎಡ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿಯಿಂದ ಸಾಧ್ಯವಾಗಿತ್ತು. ಮೈತ್ರಿಯೊಂದಿಗೆ ಗ್ರೀನ್ಸ್ ಮತ್ತು ಸೆಂಟರ್ ಪಕ್ಷ ಅಧಿಕಾರಕ್ಕೇರಲು ಸಾಧ್ಯವಾಗಿತ್ತು. ಸಂಸತ್ (ರಿಕ್ಸ್‌ಡಾಗ್‌ನ)ನ 349 ಸದಸ್ಯರಲ್ಲಿ 174 ಜನರು ಆಂಡರ್ಸನ್ ವಿರುದ್ಧ ಮತ ಚಲಾಯಿಸಿದರು. ಆದರೆ ಆಂಡರ್ಸನ್‌ಗೆ ಬೆಂಬಲ ನೀಡಿದ 117 ಸಂಸದರ ಮತ, ಇನ್ನೂ 57 ಮಂದಿ ಗೈರುಹಾಜರಾದವರ ಲೆಕ್ಕ ತಾಳೆ ಹಾಕಿದ ಬಳಿಕ ಅಂತಿಮವಾಗಿ ಒಂದೇ ಒಂದು ಮತದಿಂದ ರೋಚಕ ಜಯ ದಾಖಲಿಸಿದ್ದರು.
Andersson 'eager' to start work after becoming prime minister, again https://t.co/GLEqAuwWOk
— Radio Sweden (@radiosweden) November 29, 2021
ವಿಶ್ವವಿದ್ಯಾನಿಲಯದ ನಗರವಾದ ಉಪ್ಸಲಾ ಮೂಲದವರಾದ ಆಂಡರ್ಸನ್ ಅವರು ಜೂನಿಯರ್ ಈಜು ಚಾಂಪಿಯನ್ ಆಗಿದ್ದವರು. 1996 ರಲ್ಲಿ ಆಗಿನ ಪ್ರಧಾನ ಮಂತ್ರಿ ಗೋರಾನ್ ಪರ್ಸನ್ ಅವರ ರಾಜಕೀಯ ಸಲಹೆಗಾರರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕಳೆದ ಏಳು ವರ್ಷಗಳಿಂದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಸಂಸದರು ಬೆಂಬಲಿಸಿ, ಪ್ರಧಾನಿ ಪಟ್ಟಕ್ಕೇರುವಂತೆ ಮಾಡುವ ಮೊದಲು,ನಾರ್ಡಿಕ್ ರಾಜ್ಯಗಳ ಪೈಕಿ ಸ್ವೀಡನ್ ಮಾತ್ರ ಮಹಿಳೆಯನ್ನು ಪ್ರಧಾನಿಯಾಗಿ ಹೊಂದಿಲ್ಲದ ದೇಶವಾಗಿತ್ತು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications