ಅಮೆರಿಕದಲ್ಲಿ ಮತ್ತೆ ಶೂಟೌಟ್: ಶಂಕಿತ ಶೂಟರ್ ಸಾವು
ಟಲ್ಸಾ, ಡಿಸೆಂಬರ್ 20: ಅಮೆರಿಕದ ಟಲ್ಸಾದ ವಾಲ್ ಗ್ರೀನ್ಸ್ ನಲ್ಲಿ ನಡೆದ ಶೂಟೌಟ್ ವೊಂದರಲ್ಲಿ ಶಂಕಿತ ಶೂಟರ್ ಮೃತನಾಗಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ಸಂಜೆ ಶಾಪ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ 52 ವರ್ಷ ವಯಸ್ಸಿನ ಗನ್ ಮ್ಯಾನ್ ಮೃತನಾಗಿದ್ದಾನೆ. ಮಾತಿನ ಚಕಮಕಿಯೇ ವಿಪರೀತಕ್ಕೆ ತಿರುಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಅಮೆರಿಕದ ಮಟ್ಟಿಗೆ ಇಂಥ ಶೂಟೌಟ್ ಗಳು ಹೊಸತಲ್ಲ. ಇತ್ತೀಚೆಗಷ್ಟೇ ಅಮೆರಿಕದ ಈಶಾನ್ಯ ಇಂಡಿಯಾನಾದ ಮನೆಯೊಂದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು.

ನವೆಂಬರ್ 8 ರಂದು ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್ ನಗರದ ಮ್ಯೂಸಿಕ್ ಬಾರೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 13 ಜನರು ಸಾವಿಗೀಡಾಗಿದ್ದರು.
ಫೆಬ್ರವರಿ 15 ರಂದು ಅಮೆರಿಕದ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಪ್ರೌಢಶಾಲೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ 17 ಮಂದಿ ಸಾವಿಗೀಡಾಗಿದ್ದರು.












Click it and Unblock the Notifications