ಕಿಕಾಸ್ ಟೊರೆಂಟ್ ಬಂದ್, ಪೈರಸಿ ಕೊಂದ ಕಬಾಲಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 21: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರ ಬಿಡುಗಡೆಗೂ ಮುನ್ನ ಹಿಡಿದಿದ್ದ ಪೈರಸಿ ಭೂತ ಭೂಗತವಾಗಿದೆ.

ಕಾಕತಾಳೀಯವೆಂಬಂತೆ ಪೈರಸಿಗಳ ಮಹಾನ್ ಅಡ್ಡ ಆಗಿದ್ದ ಕಿಕಾಸ್ ಟೊರೆಂಟ್ ತಾಣ ಬಂದ್ ಆಗಿದೆ. ಸಂಸ್ಥೆಯ ಒಡೆಯ ಆರ್ಟಂ ವಾಲಿನ್ ರನ್ನು ಪೋಲೆಂಡ್ ನಲ್ಲಿ ಬಂಧಿಸಿರುವ ಸುದ್ದಿಯನ್ನು ಪಿಟಿಐ ಸುದ್ದಿ ಸಂಸ್ಥೆ ಕೊಟ್ಟಿದೆ. ಅಲ್ಲಿ ಪೈರಸಿಯನ್ನು ಕಬಾಲಿ ಕೊಂದ ಎನ್ನಬಹುದು.[ಕಬಾಲಿ ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ!]

ನೂರಾರು ವೆಬ್ ತಾಣಗಳಲ್ಲಿ, ಟೊರೆಂಟ್ ತಾಣಗಳಲ್ಲಿ ಕಬಾಲಿ ಲೀಕ್ ಆಗಿದೆ ಎಂಬ ಸುದ್ದಿ ಬಂದಿತ್ತು. ಆದರೆ, ಯಾವುದೇ ಡೌನ್ ಲೋಡ್ ಲಿಂಕ್ ವರ್ಕ್ ಆಗುತ್ತಿರಲಿಲ್ಲ. ಜೊತೆಗೆ ಸೈಬರ್ ಪೊಲೀಸರು ಅನೇಕ ವೆಬ್ ಸೈಟ್ ಗಳನ್ನು ಬಂದ್ ಮಾಡುವಲ್ಲಿ ಯಶಸ್ವಿಯಾಗಿದ್ದರು.[ಕಬಾಲಿ ಲೀಕ್ ಆದ್ರೆ, ಬಾಕ್ಸಾಫೀಸ್ ಗಳಿಕೆ ಗತಿ?]

ಆದರೆ, ಗುರುವಾರ ಬೆಳಗ್ಗೆಯಿಂದ ಹಿಂದಿ ವರ್ಷನ್ ಕಬಾಲಿಯ ಎಂಪಿ4 ಫೈಲ್ ಡೌನ್ ಲೋಡ್ ಗೆ ಲಭ್ಯವಿತ್ತು. ಆದರೆ, ಅದು ನಕಲಿ ವಿಡಿಯೋ ಎಂಬುದು ಕ್ಷಣಾರ್ಧದಲ್ಲೆ ತಿಳಿದು ಬಿಟ್ಟಿತು.[ಉಡ್ತಾ ಪಂಜಾಬ್ 700ಪ್ಲಸ್ ವೆಬ್ ಸೈಟ್ ಗಳಲ್ಲಿ ರನ್ನಿಂಗ್]

ಇದೇ ವೇಳೆ ಇಂಥ ಲಕ್ಷಾಂತರ ನಕಲಿ ವಿಡಿಯೋ, ಮ್ಯೂಸಿಕ್, ಮೂವಿಗಳ ಖಜಾನೆ ಎನಿಸಿದ್ದ ಕಿಕಾಸ್ ಟೊರೆಂಟ್(KAT) ತಾಣ ಬಂದ್ ಆಗಿದ್ದು, ಉಕ್ರೇನ್ ಮೂಲದ ವಾಲಿನ್(30) ಬಂಧಿಸಿರುವ ಸುದ್ದಿ ಬಂದಿದೆ.

ಪೈರಸಿ ಕಿಂಗ್ ಬಂಧನ ಸದ್ಯಕ್ಕೆ ಕಬಾಲಿ ಲೀಕ್ ಆಗಲ್ಲ

ಪೈರಸಿ ಕಿಂಗ್ ಬಂಧನ ಸದ್ಯಕ್ಕೆ ಕಬಾಲಿ ಲೀಕ್ ಆಗಲ್ಲ

ಪೈರಸಿ ಕಿಂಗ್ ಆರ್ಟಂ ವಾಲಿನ್ ಮೇಲೆ ಪೈರಸಿ ವಿಡಿಯೋಗಳನ್ನು ಇಡೀ ವಿಶ್ವಕ್ಕೆ ಹಂಚಿದ ಆರೋಪವಿದೆ. ಮನಿಲಾಂಡ್ರಿಂಗ್, ಕಾಪಿರೈಟ್ ಉಲ್ಲಂಘನೆ ಇನ್ನೂ ಅನೇಕ ಕೇಸ್ ಗಳನ್ನು ಅಮೆರಿಕದ ಪೊಲೀಸರು ಹಾಕಿದ್ದಾರೆ. ಈ ಮೂಲಕ ಕಬಾಲಿ ಸದ್ಯಕ್ಕೆ ಲೀಕ್ ಆಗುವುದಿಲ್ಲ ಎಂಬ ಸಂತಸ ಸುದ್ದಿ ಸಿಕ್ಕಿದೆ. ದೊಡ್ಡ ತಿಮಿಂಗಲ ಬೇಟೆಯಾಗಿದೆ. ಮಿಕ್ಕ ಸಣ್ಣ ಪುಟ್ಟ ತಾಣಗಳನ್ನು ಬ್ಲಾಕ್ ಮಾಡಲಾಗಿದೆ.

ಕಿಕಾಸ್ ಟೊರೆಂಟ್ ಪೈರಸಿಯ ಕಿಂಗ್ ವೆಬ್ ತಾಣ

ಕಿಕಾಸ್ ಟೊರೆಂಟ್ ಪೈರಸಿಯ ಕಿಂಗ್ ವೆಬ್ ತಾಣ

ಪೈರಸಿ ದಂಧೆಯಲ್ಲಿ pirate bay, bittorrent ಮ್ಯೂಟೊರೆಂಟ್ ಗಳನ್ನು ಹಿಂದಿಕ್ಕಿ ಕಿಕಾಸ್ ಮೇಲಕ್ಕೇರಿತ್ತು. ಸರಿ ಸುಮಾರು 28 ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಚಿತ್ರಗಳು ಬಿಡುಗಡೆಗೆ ಮುನ್ನವೇ ಟೊರೆಂಟ್ ನಲ್ಲಿ ಲಭ್ಯವಿರುತ್ತಿತ್ತು ಅದು ಎಚ್ ಡಿ ಪ್ರಿಂಟ್ ನಲ್ಲಿ ಎಂದರೆ ಪೈರಸಿ ಪ್ರಿಯರಿಗೆ ಪುಕ್ಕಟೆ ಸಿನಿಮಾ ನೋಡುವ ಖುಷಿ ಕೊಡುತ್ತಿತ್ತು. ಕಿಕಾಸ್ ಟೊರೆಂಟ್ ಪೈರಸಿಯ ಕಿಂಗ್ ವೆಬ್ ತಾಣವಾಗಿತ್ತು.

ಪೈರೆಟೆಡ್ ಕಾಪಿ ಸದ್ಯಕ್ಕೆ ಹೊರ ಬರುವುದಿಲ್ಲ

ಪೈರೆಟೆಡ್ ಕಾಪಿ ಸದ್ಯಕ್ಕೆ ಹೊರ ಬರುವುದಿಲ್ಲ

225ಕ್ಕೂ ಅಧಿಕ ವೆಬ್ ಸೈಟ್ ಗಳಲ್ಲಿ ಲೆಕ್ಕವಿರದಷ್ಟು ಟೊರೆಂಟ್ ತಾಣಗಳಲ್ಲಿ ಕಬಾಲಿ ಫುಲ್ ಸಿನಿಮಾ ಓಡುತ್ತಿದೆ ಎಂಬ ಸುದ್ದಿ ಬಂದಿದೆ. ಆದರೆ, ನಿರ್ಮಾಪಕರಾಗಲಿ, ವಿತರಕರಾಗಲಿ ಅಷ್ಟಾಗಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಏಕೆ? ಕಿಕಾಸ್ ಬಾಸ್ ಅರೆಸ್ಟ್, ಸೈಬರ್ ಪೊಲೀಸರಿಂದ ಮಿಕ್ಕ ಟೊರೆಂಟ್, ತಾಣಗಳು ಬ್ಲಾಕ್ ಆಗಿವೆ.

ಕಿಕಾಸ್ ಮೌಲ್ಯ, ಅದರಿಂದ ಆಗುತ್ತಿರುವ ನಷ್ಟ ಅಬ್ಬಾ!

ಕಿಕಾಸ್ ಮೌಲ್ಯ, ಅದರಿಂದ ಆಗುತ್ತಿರುವ ನಷ್ಟ ಅಬ್ಬಾ!

KAT ನ ಮೌಲ್ಯ ಸರಿ ಸುಮಾರು 54 ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದರೆ, ಮನರಂಜನಾ ಉದ್ಯಮಕ್ಕೆ ಈ ಟೊರೆಂಟ್ ತಾಣದಿಂದ 1 ಬಿಲಿಯನ್ ಯುಎಸ್ ಡಾಲರ್ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ವಿಶ್ವದೆಲ್ಲೆಡೆ ಕಿಕಾಸ್ ತನ್ನ ಸರ್ವರ್ ಹೊಂದಿದೆ

ವಿಶ್ವದೆಲ್ಲೆಡೆ ಕಿಕಾಸ್ ತನ್ನ ಸರ್ವರ್ ಹೊಂದಿದೆ

ಬ್ರಿಟನ್, ಐರ್ಲೆಂಡ್, ಡೆನ್ಮಾರ್ಕ್, ಇಟಲಿ, ಬೆಲ್ಜಿಯಂ ಹಾಗೂ ಮಲೇಶಿಯಾದಲ್ಲಿ ಕಿಕಾಸ್ ಟೊರೆಂಟ್ ಗೆ ಶಾಶ್ವತವಾಗಿ ಬಾಗಿಲು ಮುಚ್ಚಲಾಗಿದೆ. ಶಿಕಾಗೋ ಸೇರಿದಂತೆ ವಿಶ್ವದೆಲ್ಲೆಡೆ ಕಿಕಾಸ್ ತನ್ನ ಸರ್ವರ್ ಹೊಂದಿದೆ.

ನಾಯಿಕೊಡೆಗಳಂತೆ ನಿರ್ಮೂಲನೆ ಅಷ್ಟು ಸುಲಭವಲ್ಲ

ನಾಯಿಕೊಡೆಗಳಂತೆ ನಿರ್ಮೂಲನೆ ಅಷ್ಟು ಸುಲಭವಲ್ಲ

ಇತ್ತೀಚಿನ ಹಿಂದಿ ಸಿನಿಮಾಗಳಾದ ಸುಲ್ತಾನ್, ಉಡ್ತಾ ಪಂಜಾಬ್, ಗ್ರೇಟ್ ಗ್ರ್ಯಾಂಡ್ ಮಸ್ತಿ, ಇಂಗ್ಲೀಷ್ ಸಿನಿಮಾಗಳಾದ ಕ್ಯಾಪ್ಟನ್ ಅಮೆರಿಕ, ನೌ ಯೂ ಸೀ ಮೀ 2 ಕಿಕಾಸ್ ನಲ್ಲಿ ಲಭ್ಯವಿತ್ತು. ಅಲ್ಲದೆ, ಕಬಾಲಿ ಕೂಡಾ ಡೌನ್ ಲೋಡ್ ಕ್ಯೂ ನಲ್ಲಿತ್ತು. ಈಗ ಕಿಕಾಸ್ ಟೊರೆಂಟ್ ಬಂದ್ ಆಗಿರಬಹುದು. ಆದರೆ, ಇವೆಲ್ಲ ಮಳೆಗಾಲದಲ್ಲಿ ಏಳುವ ನಾಯಿಕೊಡೆಗಳಂತೆ ನಿರ್ಮೂಲನೆ ಅಷ್ಟು ಸುಲಭವಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ukrainian national Artem Vaulin (30), the alleged owner of owner of the most-visited illegal file-sharing website Kickass Torrents or KAT, was arrested in Poland over charges of conspiracy to commit money laundering, criminal copyright infringement and unlawful distribution of copyright materials on the website. With this news one can say Kabali pirated video are all fake.
Please Wait while comments are loading...