Sunita Williams: ಭೂಮಿ ಕಡೆಗೆ ಪ್ರಯಾಣ ಆರಂಭಿಸಿದ ಸುನಿತಾ ವಿಲಿಯಮ್ಸ್
ಭಾರತ ಮೂಲದ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ ಇದೀಗ ತಮ್ಮ ಮಹತ್ವದ ಪ್ರಯಾಣ ಆರಂಭಿಸಿದ್ದಾರೆ. ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಭೂಮಿಗೆ ಬಂದು ಇಳಿಯಲು ಇದೀಗ ಕ್ಷಣಗಣನೆ ಆರಂಭವಾಗಿದ್ದು, ನಾಸಾ ಸಂಸ್ಥೆ ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಸತತ 9 ತಿಂಗಳ ಕಾಲ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲಿ ಸಿಲುಕಿ ಒದ್ದಾಡಿದ್ದರು. ಆದರೆ ಇದೀಗ ಅವರ ಬಾಹ್ಯಾಕಾಶ ವಾಸ ಮುಗಿದು ಭೂಮಿಗೆ ಇಳಿಯಲು ಕೌಂಟ್‌ಡೌನ್ ಶುರುವಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹೊರಟು, ಸ್ಪೇಸ್‌ಎಕ್ಸ್ ಕ್ರ್ಯೂ-9 ನೌಕೆ ಮೂಲಕ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಹಲವಾರು ಪ್ರಯೋಗಗಳ ನಂತರ, ಪರಿಸ್ಥಿತಿ ಅಳೆದು & ತೂಗಿ ನಾಸಾ ಸಂಸ್ಥೆ ವಿಜ್ಞಾನಿಗಳನ್ನು ಭೂಮಿಗೆ ಕರೆಸಿಕೊಳ್ಳುತ್ತಿದೆ. ಸುನಿತಾ ವಿಲಿಯಮ್ಸ್ ನಾಸಾ ಸಂಸ್ಥೆಯ ಅತ್ಯಂತ ಹಿರಿಯ ವಿಜ್ಞಾನಿಯೂ ಆಗಿದ್ದು, ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸುದ್ದಿ ಸಿಕ್ಕಾಪಟ್ಟೆ ಭಯ ಹುಟ್ಟಿಸಿತ್ತು. ಆದರೆ ಇದೀಗ ಬಾಹ್ಯಾಕಾಶದ ವಾತಾವರಣ ಕೂಡ ವಿಜ್ಞಾನಿಗಳ ಎಂಟ್ರಿಗೆ ಪೂರಕವಾಗಿದ್ದು, ಪ್ರಯಾಣ ಆರಂಭಿಸಿದ್ದಾರೆ.

ಭೂಮಿಯಲ್ಲಿ ಕಾಯುತ್ತಿರುವ ಸ್ನೇಹಿತರು!
ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಭೂಮಿಗೆ ಬರುತ್ತಿರುವ ಸುದ್ದಿ ಕೇಳುತ್ತಿದ್ದಂತೆಯೇ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅಮೆರಿಕದಲ್ಲಿ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಸ್ವಾಗತಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ವಿಜ್ಞಾನಿಗಳು. ಅಲ್ಲದೆ ಸುನಿತಾ ವಿಲಿಯಮ್ಸ್ ಅವರ ಸ್ನೇಹಿತರು ಉಸಿರು ಬಿಗಿ ಹಿಡಿದುಕೊಂಡು ಕಾಯುತ್ತಿದ್ದಾರೆ. ಆ ಮೂಲಕ ಬರೋಬ್ಬರಿ ಮುಕ್ಕಾಲು ವರ್ಷಗಳ ನಂತರ, ಅಂದರೆ 9 ತಿಂಗಳ ನಂತರ ಸುನಿತಾ ವಿಲಿಯಮ್ಸ್ ಅವರ ಕುಟುಂಬ ಮತ್ತು ಸ್ನೇಹಿತರು ಭೂಮಿ ಮೇಲೆ ಅವರನ್ನು ಭೇಟಿ ಮಾಡ್ತಾ ಇದ್ದಾರೆ.
ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಯುಗ!
ಅಮೆರಿಕದ ನಾಸಾ ಸಂಸ್ಥೆ ಇದೀಗ ಕೈಗೊಂಡಿರುವ ಪ್ರಯೋಗವು ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಯುಗ ಎಂದು ಬಣ್ಣಿಸಲಾಗುತ್ತಿದೆ. ಏಕೆಂದರೆ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸಹಾಯ ಪಡೆದು ಈ ರೀತಿ ವಿಜ್ಞಾನಿಗಳನ್ನು ರಕ್ಷಣೆ ಮಾಡುತ್ತಿರುವುದು ಗಮನ ಸೆಳೆದಿದೆ. ಹೀಗಿದ್ದಾಗ ಭವಿಷ್ಯದಲ್ಲಿ ಇದು ಬಾಹ್ಯಾಕಾಶದ ಅಧ್ಯಯನಕ್ಕೆ ಇನ್ನಷ್ಟು ಸಹಾಯ ಮಾಡುವ ಬಗ್ಗೆಯೂ ನಿರೀಕ್ಷೆ ಹುಟ್ಟುಹಾಕಿದೆ. ಭಾರತ ಮೂಲದ ನಂಟು ಹೊಂದಿದ ಸುನಿತಾ ವಿಲಿಯಮ್ಸ್ ಅವರು ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು. ಅಲ್ಲದೆ ತಾಜ್‌ಮಹಲ್ ಎದುರಲ್ಲೇ ಕೂತು ಫೋಟೋ ತೆಗೆಸಿಕೊಂಡು ಗಮನ ಸೆಳೆದಿದ್ದರು.












Click it and Unblock the Notifications