Earthquake: ಭಯಾನಕ ಭೂಕಂಪಕ್ಕೆ 250ಕ್ಕೂ ಹೆಚ್ಚು ಜನರು ಸಾವು, 500ಕ್ಕೂ ಅಧಿಕ ಮಂದಿಗೆ ಗಾಯ
Earthquake: ಭೂಮಿಯ ಕೆಳಭಾಗದಲ್ಲಿ ಒತ್ತಡ ಹೆಚ್ಚಾದ ವೇಳೆ ಭೂಕಂಪನಗಳು ಸಂಭವಿಸುತ್ತಲಿರುತ್ತವೆ. ಹಾಗೆಯೇ ಇದೀಗ ಭಾರತದ ನೆರೆ ರಾಷ್ಟ್ರ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು (ಸೆಪ್ಟೆಂಬರ್ 1) ಬೆಳ್ಳಂಬೆಳಗ್ಗೆಯೇ ಅಫ್ಘಾನಿಸ್ತಾನದಲ್ಲಿ 6.3ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಲ್ಲದೆ, ಪಾಕಿಸ್ತಾನದ ಕೆಲವು ಭಾಗಗಳಲ್ಲೂ ಭೂಕಂಪನದ ಅನುಭವ ಆಗಿದೆ. ಇದರಿಂದ ಸುಮಾರು 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 500ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳೂ ಇವೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪ 00:47:41 ISTಕ್ಕೆ ಸಂಭವಿಸಿದೆ. ಇದರ ಕೇಂದ್ರಬಿಂದುವು 34.50°N ಅಕ್ಷಾಂಶ ಮತ್ತು 70.81°E ರೇಖಾಂಶದಲ್ಲಿ, 160 ಕಿಲೋ ಮೀಟರ್ ಆಳದಲ್ಲಿ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಭಾಗದವಾಗ ಟ್ವಿಟರ್‌ನಲ್ಲಿ ಎನ್‌ಸಿಎಸ್ ಮಾಹಿತಿ ಹಂಚಿಕೊಂಡಿದೆ. ಮೊದಲು 6.3 ತೀವ್ರತೆಯ ಭೂಕಂಪ ಸಂಭವಿಸಿ, ನಂತರ 4-5ರ ನಡುವಿನ ತೀವ್ರತೆಯ ಕಂಪನಗಳು ಸಂಭವಿಸಿವೆ. ಈ ಪೈಕಿ 4.7 ತೀವ್ರತೆಯ ಭೂಕಂಪವು ಸುಮಾರು 140 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 1ರ ಬೆಳಗ್ಗೆ 1:08:13ಕ್ಕೆ IST, ಅಕ್ಷಾಂಶ: 34.62 N, ರೇಖಾಂಶ: 70.92 E, ಆಳ: 140 ಕಿ.ಮೀ., ಸ್ಥಳ: ಅಫ್ಘಾನಿಸ್ತಾನ, 4.7 ತೀವ್ರತೆ ಇದೆ ಎಂದು ಎನ್ಸಿಎಸ್ ಮಾಹಿತಿಯನ್ನು ಹಂಚಿಕೊಂಡಿದೆ. ಬಳಿಕ ಕ್ರಮವಾಗಿ 140 ಕಿ.ಮೀ. ಮತ್ತು 40 ಕಿ.ಮೀ. ಆಳದಲ್ಲಿ 4.3 ಮತ್ತು 5.0 ತೀವ್ರತೆಯ ಮತ್ತಷ್ಟು ಭೂಕಂಪಗಳು ಸಂಭವಿಸಿವೆ ಅಂತಲೂ ತಿಳಿಸಿದೆ.
4.3 ತೀವ್ರತೆಯ ಭೂಕಂಪನದ ಸಮಯ 01:59:44 IST, ಅಕ್ಷಾಂಶ: 34.58 N, ರೇಖಾಂಶ: 70.78 E, ಆಳ: 140 ಕಿಲೋ ಮೀಟರ್ ಮತ್ತು 5.0 ತೀವ್ರತೆಯ ಭೂಕಂಪನದಲ್ಲಿ ಸಮಯ 03:03:25 IST, ಅಕ್ಷಾಂಶ: 34.55 N, ರೇಖಾಂಶ: 70.81 E, ಆಳ: 40 ಕಿಲೋ ಮೀಟರ್, ಅಫ್ಘಾನಿಸ್ತಾನ ಎಂದು ಮತ್ತೊಂದು ಪೋಸ್ಟ್‌ನಲ್ಲೊ ಮಾಹಿತಿ ಹಂಚಿಕೊಂಡಿದೆ.
ಭೂಮಿಯ ಮೇಲ್ಮೈಗೆ ಹತ್ತಿರ ಅಥವಾ ಮಧ್ಯಮ ಆಳದ ಭೂಕಂಪಗಳು ಆಳವಾದ ಭೂಕಂಪಗಳಿಗಿಂತ ಸಾಮಾನ್ಯವಾಗಿ ಹೆಚ್ಚು ಅಪಾಯಕಾರಿ. ಯಾಕೆಂದ್ರೆ, ಇವುಗಳ ಕಂಪನ ತರಂಗಗಳು ಮೇಲ್ಮೈಗೆ ತಲುಪಲು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತವೆ. ಇದರಿಂದ ಭಮಿಯ ಒಳಗಡೆ ಕಂಪನಗಳು ಹೆಚ್ಚು ತೀವ್ರವಾಗಿರುತ್ತವೆ. ಇದರಿಂದ ಕಟ್ಟಡಗಳಿಗೆ ಹೆಚ್ಚು ಹಾನಿಯಾಗುವುದಲ್ಲದೆ, ಸಾವು-ನೋವುಗಳಿಗೆ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಕುನಾರ್ ಪ್ರಾಂತ್ಯದ ನೂರ್ ಗಲ್, ಸಾವ್ಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪನದಿಂದ ಸಾವು-ನೋವುಗಳು ಸಂಭವಿಸಿವೆ ಎಂದು ವರದಿಯಾಗಿವೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಬಸವುಲ್‌ನಿಂದ ಉತ್ತರಕ್ಕೆ 36 ಕಿಲೋ ಮೀಟರ್ ದೂರದಲ್ಲಿತ್ತು ಮತ್ತು ಇದು 10 ಕಿಲೋ ಮೀಟರ್ (6.2 ಮೈಲಿ) ಆಳದಲ್ಲಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.












Click it and Unblock the Notifications