• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದಲ್ಲಿ ವಿಚಿತ್ರ ಜೀವಿಯ ವಿಡಿಯೋ ವೈರಲ್; ನಿಜವೋ ಓಳೋ ಚರ್ಚೆ

|

ಅಮೆರಿಕದಲ್ಲಿ ಮನೆಯ ಭದ್ರತಾ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬರಿಗೆ ವಿಚಿತ್ರ ಜೀವಿಯೊಂದು ಕಡುಬಂದಿದೆ. ಇದೀಗ ಆ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ವಿಡಿಯೋ ಸೆರೆ ಆಗಿರುವುದು ವಿವಿಯನ್ ಗೊಮೆಜ್ ಅವರ ಭದ್ರತಾ ಕ್ಯಾಮೆರಾದಲ್ಲಿ. "ನಾನು ಭಾನುವಾರ ಬೆಳಗ್ಗೆ ಎದ್ದೆ. ನಂತರ ಇದನ್ನು ಕ್ಯಾಮೆರಾದಲ್ಲಿ ನೋಡಿದೆ ಮತ್ತು ಇದೇನು ಎಂದು ಪತ್ತೆ ಮಾಡುವುದಕ್ಕೆ ಪ್ರಯತ್ನಿಸಿದೆ" ಎಂದು ಗೊಮೆಜ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮೊದಲಿಗೆ ನನ್ನ ಮನೆಯ ಮುಂದಿನ ಬಾಗಿಲಿಂದ ನೆರಳು ನಡೆದು ಬರುತ್ತಿರುವುದು ನೊಡಿದೆ. ಬೇರೆ ಯಾರಾದರೂ ಕ್ಯಾಮೆರಾದಲ್ಲಿ ನೋಡಿದಿರಾ?? ಎಂದು ಕೇಳಿದ್ದಾರೆ. ಆದರೆ ಮನೆಯಲ್ಲಿರುವ ಇತರ ಎರಡು ಭದ್ರತಾ ಕ್ಯಾಮೆರಾದಲ್ಲಿ "ಯಾವುದೋ ಕಾರಣಕ್ಕೆ ಈ ದೃಶ್ಯಗಳು ಸೆರೆಯಾಗಿಲ್ಲ" ಎಂದು ಬರೆದುಕೊಂಡಿದ್ದಾರೆ.

19 ವರ್ಷ ಹಳೆಯ ವಿಡಿಯೋ ವಿಶ್ವದಾದ್ಯಂತ ಟ್ರೆಂಡಿಂಗ್: ಯಾರೀ ನೇಸಮಣಿ?

ಆನ್ ಲೈನ್ ನಲ್ಲಿ ಗೊಮೆಜ್ ಷೇರ್ ಮಾಡಿದ ವಿಡಿಯೋದಲ್ಲಿ ಸೆರೆ ಆಗಿರುವ ದೃಶ್ಯ ಹೀಗಿದೆ: ಜೀವಿಯ ಆಕೃತಿಯೊಂದು ಕಾರು ನಿಲ್ಲಿಸಿದ ಜಾಗದಲ್ಲಿ ನಡೆದು ಬಂದಿದೆ. ಈ ಜೀವಿಯು ಅದನ್ನು ಹೋಲುತ್ತದೆ, ಇದನ್ನು ಹೋಲುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹ್ಯಾರಿ ಪಾಟರ್ ನಲ್ಲಿ ಬರುವ ಯಕ್ಷಿಣಿ ಮನೆಯಲ್ಲಿ ಕಂಡುಬರುವ ಜೀವಿಯಂತೆ ಇದೆ ಎಂದಿದ್ದಾರೆ.

ಆನ್ ಲೈನ್ ನಲ್ಲಿ ವಿಡಿಯೋ ಷೇರ್ ಮಾಡಿದ ಮೇಲೆ ತೊಂಬತ್ತು ಲಕ್ಷಕ್ಕೂ ಹೆಚ್ಚು ಸಲ ವೀಕ್ಷಣೆ ಆಗಿದೆ. ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಮೇಲೆ ಹತ್ತಿರ ಹತ್ತಿರ ಮೂವತ್ತು ಮಿಲಿಯನ್ ಸಲ ವೀಕ್ಷಣೆ ಆಗಿದೆ. ಕೆಲವರಂತೂ ಈ ವಿಡಿಯೋ ಮಾಡಿರುವುದೇ ತಮಾಷೆಗೆ ಇದ್ದಂತೆ ಇದೆ ಎಂದಿದ್ದಾರೆ.

ಇದು ಫೋಟೋಶಾಪ್ ಮಾಡಿದ ಫೇಕ್ ವಿಡಿಯೋ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಗೊಮೆಜ್, ಇದು ಅಂಥ ಚಿತ್ರ, ವಿಡಿಯೋ ಅಲ್ಲ ಎಂದಿದ್ದಾರೆ.

English summary
Strange thing caught in security camera; video viral in social media. Vivian Gomez posted video in facebook, got more than nine million views.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X