ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್ ಏರಿಕೆ ಆಗುವ ಸಾಧ್ಯತೆ, ಕಾರಣ ಇಲ್ಲಿದೆ... Strait Of Hormuz
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು, ಬೆಳ್ಳಿ ಬೆಲೆ ಮುಗಿಲು ಮುಟ್ಟಿದ್ದಕ್ಕೆ ಕಳೆದ ಕೆಲವು ದಿನಗಳಿಂದ ಜನರು ಚಿಂತೆ ಮಾಡುವಂತೆ ಆಗಿತ್ತು. ಆದರೆ ಇದೀಗ ಚಿನ್ನ & ಬೆಳ್ಳಿ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿದು ಬೀಳುತ್ತಿದೆ. ಇದಕ್ಕೆಲ್ಲಾ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಭೀತಿ ಕಾರಣ ಎನ್ನಲಾಗಿತ್ತು, ಹೀಗಿದ್ದಾಗ ಎಲ್ಲಾ ಸರಿ ಹೋಯ್ತು ಅಂತಾ ಜಗತ್ತು ನಿಟ್ಟುಸಿರುವ ಬಿಡುವ ಸಮಯದಲ್ಲೇ ಮತ್ತೊಂದು ತಲೆನೋವು ಶುರುವಾಗಿದೆ. ಇರಾನ್ ಇದೀಗ ಅಮೆರಿಕದ ಮೇಲೆ ಇರುವ ಕಿಚ್ಚಿಗೆ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ದೊಡ್ಡ ಪರಿಣಾಮ ಬೀರುವ ಭೀತಿ ಹುಟ್ಟುಹಾಕಿದೆ. ಹೇಗೆ ಗೊತ್ತಾ?
ಪರಮಾಣು ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕೆಂಬ ಒತ್ತಡ ಹೆಚ್ಚಾಗಿದ್ದು, ಹೀಗಾಗಿ ಈಗ ಜಿನೇವಾದಲ್ಲಿ ಮಾತುಕತೆ ನಡೆಯುತ್ತಿದೆ. ಒಂದೆಕಡೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ ಕ್ಷಿಪಣಿ ಪ್ರಯೋಗ ಮಾಡಿ ತಲ್ಲಣ ಎಬ್ಬಿಸಿದೆ ಇರಾನ್, ನೇರವಾಗಿ ಇರಾನ್ ಸೇನೆ ಹಾರ್ಮುಜ್ ಜಲಸಂಧಿಯ ಕಡೆಗೆ ಕ್ಷಿಪಣಿಗಳನ್ನು ಹಾರಿಸಿ ಭೀತಿ ಹುಟ್ಟಿಸಿದೆ. ಅಲ್ಲದೆ ಇರಾನ್ ಕ್ಷಿಪಣಿ ಪ್ರಯೋಗದ ನಂತರ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು ಜಾಗತಿಕ ಮಟ್ಟದಲ್ಲಿ ಮತ್ತೊಂದು ಆರ್ಥಿಕ ಪತನದ ಭೀತಿ ಹುಟ್ಟುಹಾಕಿದೆ. ಪ್ರಮುಖವಾಗಿ ತೈಲ ಕ್ಷೇತ್ರದಲ್ಲಿ ಇದು ತಲ್ಲಣ ಎಬ್ಬಿಸಿದೆ, ಕಾರಣ ಏನು ಅನ್ನೋದನ್ನ ತಿಳಿಯೋಣ ಬನ್ನಿ.

ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ?
ಅಮೆರಿಕ ಹಾಗೂ ಇರಾನ್ ನಡುವೆ ಕೋಳಿ ಜಗಳ ನಡೆಯುತ್ತಿದೆ ಅಂತಾ ಇಷ್ಟುದಿನ ಇಡೀ ಪ್ರಪಂಚ ಭಾವಿಸಿತ್ತು. ಆದರೆ ಅಮೆರಿಕ ಹಾಗೂ ಇರಾನ್ ನಡುವೆ ಪೂರ್ಣ ಪ್ರಮಾಣದಲ್ಲಿ ಯುದ್ಧ ಶುರುವಾದರೆ ಅದು ಎಷ್ಟು ವಿನಾಶಕಾರಿ ಆಗಿರಲಿದೆ? ಎಂಬುದನ್ನ ಹಾರ್ಮುಜ್ ಜಲಸಂಧಿ ಮೇಲಿನ ಕ್ಷಿಪಣಿ ದಾಳಿ ಬಹಿರಂಗಪಡಿಸಿದೆ. ಯಾಕೆ ಹಾರ್ಮುಜ್ ಜಲಸಂಧಿ ಮುಖ್ಯ ಅಂದ್ರೆ ಇಡೀ ಜಗತ್ತಿನ ಶೇಕಡಾ 20 ರಷ್ಟು ಕಚ್ಚಾತೈಲ ಇದೇ ಜಲಸಂಧಿಯ ಮೂಲಕ ಸರಬರಾಜು ಮಾಡಲಾಗುತ್ತದೆ. ಆದರೆ ಇದೀಗ ಇರಾನ್ ಸೇನೆ ನಡೆಸಿದ ದಾಳಿ ಪರಿಣಾಮ ಭೀತಿ ಸೃಷ್ಟಿಯಾಗಿ, ಹಾರ್ಮುಜ್ ಜಲಸಂಧಿ ಚಟುವಟಿಕೆ ಬಂದ್ ಆಗಿದೆ. ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್ ಏರಿಕೆ ಆಗುವ ಸಾಧ್ಯತೆ ಕೂಡ ಎದುರಾಗಿದೆ.
ಒಮಾನ್ ನೇತೃತ್ವದಲ್ಲಿ 2ನೇ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಇರಾನ್ & ಅಮೆರಿಕ ಶೀಘ್ರ ಒಂದು ಮಹತ್ವದ ತೀರ್ಮಾನಕ್ಕೆ ಬರುವ ನಿರೀಕ್ಷೆ ಇತ್ತು. ಪ್ರಮುಖವಾಗಿ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಈಗ ನಡೆಯುತ್ತಿರುವ ಇರಾನ್ ಮತ್ತು ಅಮೆರಿಕ ಅಧಿಕಾರಿಗಳ ಮಹತ್ವದ ಚರ್ಚೆ ನಿರ್ಣಾಯಕ ಎನ್ನಲಾಗುತ್ತಿದೆ ಇದೀಗ. ಇಬ್ಬರ ನಡುವೆ ತಿಕ್ಕಾಟವನ್ನ ನಿಲ್ಲಿಸಲು ಈ ಸಭೆ ಅರ್ಥಪೂರ್ಣವಾಗಿ ಯಶಸ್ಸು ಕಾಣಬೇಕಿದೆ, ಇಲ್ಲವಾದರೆ ಅಮೆರಿಕ ಸೇನೆ ನೇರವಾಗಿ ಇರಾನ್ ಒಳಗೆ ನುಗ್ಗಲು ಸಜ್ಜಾಗಿ ಗಡಿಯಲ್ಲೇ ಕೂತಿದೆ.












Click it and Unblock the Notifications