ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಚರ್ಚ್‌ನಲ್ಲಿ ಉಡುಗೊರೆಗೆ ಮುಗಿಬಿದ್ದ ಜನರು, ಕಾಲ್ತುಳಿತಕ್ಕೆ 31 ಸಾವು

|
Google Oneindia Kannada News

ಲಾಗೋಸ್, ಮೇ 28: ಆಫ್ರಿಕಾದ ನೈಜೀರಿಯಾ ದೇಶದಲ್ಲಿ ಕಾಲ್ತುಳಿತ ಘಟನೆಯೊಂದು ಸಂಭವಿಸಿ 31ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಚರ್ಚ್‌ನಲ್ಲಿ ಕೊಡುತ್ತಿದ್ದ ಆಹಾರವಸ್ತುಗಳಿರುವ ಗಿಫ್ಟ್ ಬಾಕ್ಸ್ ಪಡೆಯಲು ಜನರು ಮುಗಿಬಿದ್ದರಿಂದ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಿಂದ ಈ ದುರಂತವಾಗಿದೆ. ನೈಜೀರಿಯಾದ ಪೋರ್ಟ್ ಹಾರ್‌ಕೋರ್ಟ್ ಎಂಬಲ್ಲಿ ಈ ಘಟನೆ ನಡೆದಿದೆ. ಈ ದುರಂತದಲ್ಲಿ ಮಡಿದವರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ಧಾರೆನ್ನಲಾಗಿದೆ.

ಕಿಂಗ್ಸ್ ಅಸೆಂಬ್ಲಿ ಚರ್ಚ್‌ನವರು ಸ್ಥಳೀಯ ಪೋಲೋ ಕ್ಲಬ್‌ನಲ್ಲಿ ಗಿಫ್ಟ್ ಡೊನೇಶನ್ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ನೂರಾರು ಜನರು ಸ್ಥಳಕ್ಕೆ ಜಮಾಯಿಸಿ ಉಡುಗೊರೆಗಳನ್ನು ಪಡೆಯಲು ಮುಗಿಬಿದ್ದಿದ್ದಾರೆ. ಗೇಟ್ ಹಾಕಿದ್ದರೂ ಲೆಕ್ಕಿಸದೆ ಒಳ ನುಗ್ಗಿದ್ದಾರೆ. ಆಗ ನೂಕುನುಗ್ಗಲಿಂದಾಗಿ ಕಾಲ್ತುಳಿತ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ಧಾರೆ.

Stampede in Nigeria Kills 31 People

ಅಧಿಕೃತವಾಗಿ 31 ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಏಳು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನೈಜೀರಿಯಾದಲ್ಲಿ ಚಿನ್ನದ ಗಣಿ ಕುಸಿತ: 18 ಜನ ದಾರುಣ ಸಾವುನೈಜೀರಿಯಾದಲ್ಲಿ ಚಿನ್ನದ ಗಣಿ ಕುಸಿತ: 18 ಜನ ದಾರುಣ ಸಾವು

(ಒನ್ಇಂಡಿಯಾ ಸುದ್ದಿ)

English summary
More than 31 people is said to have died after stampede incident at a church in Nigeria. Most of the dead were children, it is reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X