ಶ್ರೀನಿವಾಸ್ ಕುಚಿಭೋತ್ಲಾ ಹತ್ಯೆ ಮಾಡಿದವನಿಗೆ ಜೀವಾವಧಿ ಶಿಕ್ಷೆ
ವಾಷಿಂಗ್ಟನ್, ಮೇ 05: ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಭೋತ್ಲಾ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಅಮೆರಿಕದ ನೌಕಾನೆಲೆಯ ಹಿರಿಯ ಅಧಿಕಾರಿ ಆಡಮ್ ಪುರಿಂಟಾನ್(52) ಎಂಬುವವನಿಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಫೆಬ್ರವರಿ 22ರಂದು ಅಮೆರಿಕದ ಕನ್ಸಾಸ್ ನಲ್ಲಿ ಜನಾಂಗೀಯ ನಿಂದನೆಗೊಳಗಾಗಿ, ಆಡಮ್ ಪುರಿಂಟಾನ್ ಎಂಬುವವನಿಂದ ಗುಂಡೇಟು ತಿಂದು ಶ್ರೀನಿವಾಸ್ ಹತ್ಯೆಗೊಳಗಾಗಿದ್ದರು. ಟೆಕ್ಕಿಯಾಗಿದ್ದ ಶ್ರೀನಿವಾಸ್ ಕೊಲೆ ಇಡೀ ಜಗತ್ತಿನಾದ್ಯಂತ ತಲ್ಲಣವನ್ನುಂಟುಮಾಡಿತ್ತು.

ಕಾನ್ಸಾಸ್ ಸಿಟಿಯಲ್ಲಿ ಬಾರ್ ನಲ್ಲಿ ಶ್ರೀನಿವಾಸ್ ತಮ್ಮ ಸ್ನೇಹಿತರೊಂದಿಗೆ ಕುಳಿತಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅವರ ಸ್ನೇಹಿತರೂ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ನಂತರ ತಾನೇ ಈ ಕೊಲೆ ಮಾಡಿದ್ದಾಗಿ ಆಡಮ್ ತಪ್ಪೊಪ್ಪಿಕೊಂಡಿದ್ದ.












Click it and Unblock the Notifications