
2022ರ ಬೂಕರ್ ಪ್ರಶಸ್ತಿ ಪಡೆದ ಶ್ರೀಲಂಕಾದ ಬರಹಗಾರ ಶೆಹನ್ ಕರುಣಾತಿಲಕ
ಕೋಲಂಬೋ ಅ.18: ಶ್ರೀಲಂಕಾದ ಬರಹಗಾರ ಶೆಹನ್ ಕರುಣಾತಿಲಕ ಅವರಿಗೆ 2022ರ ಬೂಕರ್ ಪ್ರಶಸ್ತಿ ದೊರೆತಿದೆ. ಅವರ ಎರಡನೇ ಕಾದಂಬರಿ "ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ"ಗೆ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮರಣಾನಂತರದ ಜೀವನದಲ್ಲಿ ಮಿಷನ್‌ನಲ್ಲಿ ಸತ್ತ ಯುದ್ಧ ಛಾಯಾಗ್ರಾಹಕ.
ದೇಶದಲ್ಲಿನ ಕಲಹದ ನಡುವೆ ಕೊಲೆಯಾದ ಪತ್ರಕರ್ತನ ಪಯಣದ ಕುರಿತಾದ ಕಾದಂಬರಿ "ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ".
'ಟಾಂಬ್ ಆಫ್ ಸ್ಯಾಂಡ್' ಮೊದಲ ಹಿಂದಿ ಪುಸ್ತಕಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ
2019 ರ ನಂತರ ಮೊದಲ ಬಾರಿಗೆ ಭೌತಿಕವಾಗಿ ನಡೆದ ಇಂಗ್ಲಿಷ್ ಭಾಷಾ ಸಾಹಿತ್ಯ ಪ್ರಶಸ್ತಿಯನ್ನು ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರಿಂದ ಶೆಹನ್ ಕರುಣಾತಿಲಕ ಪಡೆದಿದ್ದಾರೆ. ಪ್ರಶಸ್ತಿ ಜೊತೆಗೆ ಅವರು 50,000 ಪೌಂಡ್ (ಭಾರತೀಯ ರೂಪಾಯಿಯಲ್ಲಿ ಸುಮಾರು 46 ಕೋಟಿ) ಬಹುಮಾನವನ್ನು ಸಹ ಪಡೆಯುತ್ತಾರೆ.
ಈ ಪುಸ್ತಕವು 1980 ರ ದಶಕದ ಅಂತ್ಯದಲ್ಲಿ ಕೊಲಂಬೊವನ್ನು ನಾಶಪಡಿಸಿದ ಅಂತರ್ಯುದ್ಧದ ಸಂಕಷ್ಟಗಳನ್ನು ಹೊರಗಿಡುತ್ತದೆ. ಕಥಾನಾಯಕ ಸಲಿಂಗಕಾಮಿ ಮಾಲಿ ಅಲ್ಮೇಡಾ ಒಬ್ಬ ಛಾಯಾಗ್ರಾಹಕ ಮತ್ತು ಜೂಜುಕೋರ ಎನಿಸಿಕೊಂಡಿರುತ್ತಾನೆ. ಆತ ಯುದ್ಧದಲ್ಲಿ ಕೊಲೆಯಾಗುತ್ತಾರೆ. ಬಳಿಕ ಎಚ್ಚರಗೊಳ್ಳುತ್ತಾರೆ ಎಂಬುದರಿಂದ ಕಥೆ ಆರಂಭವಾಗುತ್ತದೆ.

ಸೆವೆನ್ ಮೂನ್ಸ್ ಪುಸ್ತಕದ ಅಂಗಡಿಯ ಫ್ಯಾಂಟಸಿ ವಿಭಾಗದಲ್ಲಿದೆ!
"ನನ್ನ ಪುಸ್ತಕ ಸೆವೆನ್ ಮೂನ್ಸ್ ನನಗಿರುವ ಭವಿಷ್ಯದ ಭರವಸೆ. ಭ್ರಷ್ಟಾಚಾರ, ಜನಾಂಗೀಯ ಹತ್ಯೆ ಮತ್ತು ಕುಟುಂಬ ರಾಜಕಾರಣದ ಆಲೋಚನೆಗಳು ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಅರ್ಥ ಮಾಡಿಕೊಂಡ ಶ್ರೀಲಂಕಾದಲ್ಲಿ ನನ್ನ ಪುಸ್ತಕ ಓದಲ್ಪಡುತ್ತದೆ" ಎಂದು ಬಹುಮಾನ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ ಶೆಹನ್ ಕರುಣಾತಿಲಕ ಹೇಳಿದ್ದಾರೆ.
'ನನ್ನ ಕಾದಂಬರಿ ಸೆವೆನ್ ಮೂನ್ಸ್ ಶ್ರೀಲಂಕಾದ ಪುಸ್ತಕ ಅಂಗಡಿಗಳಲ್ಲಿ ಡ್ರ್ಯಾಗನ್‌ಗಳ ಪಕ್ಕದಲ್ಲಿನ ಫ್ಯಾಂಟಸಿ ವಿಭಾಗದಲ್ಲಿ ಮಾರಲಾಗುತ್ತದೆ. ಇದನ್ನು ವಾಸ್ತವ ಅಥವಾ ರಾಜಕೀಯ ವಿಡಂಬನೆ ವಿಭಾಗದಲ್ಲಿ ಪರಿಗಣಿಸುವುದಿಲ್ಲ ಎಂದು ನಂಬಿದ್ದೇನೆ' ಎಂದಿದ್ದಾರೆ.

1992 ರಲ್ಲಿ ಮೈಕೆಲ್ ಒಂಡಾಟ್ಜೆ ಗೆ ಒಲಿದಿದ್ದ ಬೂಕರ್
47 ವರ್ಷದ ಕರುಣಾತಿಲಕ ಈ ಬಾರಿ ಬೂಕರ್ ಪ್ರಶಸ್ತಿ ಪಡೆಯುವುದಕ್ಕೂ ಮುನ್ನ ಮತ್ತೊಬ್ಬ ಶ್ರೀಲಂಕಾದ ಬರಹಗಾರರು 1992 ರಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದರು.
1992 ರಲ್ಲಿ "ದಿ ಇಂಗ್ಲಿಷ್ ಪೇಷಂಟ್" ಗಾಗಿ ಮೈಕೆಲ್ ಒಂಡಾಟ್ಜೆ ಅವರು ಬೂಕರ್ ಪ್ರಶಸ್ತಿ ಪಡೆದಿದ್ದರು. ಹೀಗಾಗಿ ಈ ಪ್ರಶಸ್ತಿ ಪಡೆದ ಎರಡನೇ ಶ್ರೀಲಂಕಾದ ಬರಹಗಾರ ಶೆಹನ್ ಕರುಣಾತಿಲಕ. .
ಪ್ರಶಸ್ತಿಯ 50,000 ಪೌಂಡ್ ಪಡೆಯುವುದು ಬದೊಗಿಟ್ಟರೂ, ಈ ಬೂಕರ್ ಗೆಲ್ಲುವುದು ಒಬ್ಬ ಬರಹಗಾರನ ಪುಸ್ತಕಗಳ ಮಾರಾಟ ಮತ್ತು ಆತನ ವೃತ್ತಿಜೀವನವನ್ನು ಬದಲಾಯಿಸುವ ಪ್ರಮುಖ ಹಂತವಾಗಿದೆ.

2019ರ ನಂತರದ ಮೊದಲ ಬೌತಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕರುಣಾತಿಲಕ ಅವರ ಚೊಚ್ಚಲ ಕಾದಂಬರಿ ಚೈನಾಮನ್ (2011) ಕಾಮನ್‌ವೆಲ್ತ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಳೆದ ವರ್ಷ ಬಿಬಿಸಿ ಮತ್ತು ದಿ ರೀಡಿಂಗ್ ಏಜೆನ್ಸಿಯ ಬಿಗ್ ಜುಬಿಲಿ ರೀಡ್‌ಗೆ ಈ ಪುಸ್ತಕ ಆಯ್ಕೆಯಾಗಿತ್ತು..
ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭವು 2019 ರ ನಂತರ ನಡೆದ ಮೊದಲ ಭೌತಿಕ ಕಾರ್ಯಕ್ರಮವಾಗಿದೆ.
ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಸಮಾರಂಭದಲ್ಲಿ ಬಹುಮಾನವನ್ನು ನೀಡಿದ್ದಾರೆ. ಕಳೆದ ತಿಂಗಳು ಅವರ ಪತಿ ಕಿಂಗ್ ಚಾರ್ಲ್ಸ್ III ಸಿಂಹಾಸನವನ್ನು ಏರಿದಾಗಿನಿಂದ ಅವರು ಕಾಣಿಸಿಕೊಂಡ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದೆ.
"ಅರ್ಥವಿಲ್ಲದೆ, ಈ ಭವ್ಯವಾದ ಕಿರುಪಟ್ಟಿಯ ಭಾಗವಾಗಿರುವುದರಿಂದ ನಾವೆಲ್ಲರೂ ವಿಜೇತರಾಗಿದ್ದೇವೆ, ಆದರೂ, ಅದು ಸರಿಯಿದ್ದರೆ ನಾನು ಹೆಚ್ಚುವರಿ ಹಣವನ್ನು ಪಾಕೆಟ್ ಮಾಡಬಹುದೇ?" ಕರುಣಾತಿಲಕ ಅವರು ಪ್ರಶಸ್ತಿ ಕೈಗೆತ್ತಿಕೊಳ್ಳುತ್ತಿದ್ದಂತೆ ಹಾಸ್ಯ ಚಟಾಕಿ ಹಾರಿಸಿದರು.

1969 ರಲ್ಲಿ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಘೋಷಣೆ
ಶಾರ್ಟ್‌ಲಿಸ್ಟ್ ಮಾಡಿದ ಆರು ಲೇಖಕರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಈ ವರ್ಷದ ಬುಕರ್ ಪ್ರಶಸ್ತಿ ಸ್ಪರ್ಧಿಗಳ ಕಿರುಪಟ್ಟಿಯಲ್ಲಿ ಬ್ರಿಟಿಷ್ ಲೇಖಕ ಅಲನ್ ಗಾರ್ನರ್ ಅವರ "ಟ್ರೇಕಲ್ ವಾಕರ್", ಜಿಂಬಾಬ್ವೆ ಲೇಖಕಿ ನೊವೈಲೆಟ್ ಬುಲವಾಯೊ ಅವರ "ಗ್ಲೋರಿ", ಐರಿಶ್ ಬರಹಗಾರ ಕ್ಲೇರ್ ಕೀಗನ್ ಅವರ "ಸ್ಮಾಲ್ ಥಿಂಗ್ಸ್ ಲೈಕ್ ದೀಸ್", ಯು.ಎಸ್ ಲೇಖಕ ಪರ್ಸಿವಲ್ ಎವೆರೆಟ್ ಅವರ "ದಿ ಓ ಟ್ರೀಸ್" ಮತ್ತು ಯುಎಸ್ ಲೇಖಕಿ ಎಲಿಜಬೆತ್ ಸ್ಟ್ರೌಟ್ ಅವರ "ಓ ಟ್ರೀಸ್" ಸೇರಿದೆ.
1969 ರಲ್ಲಿ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಘೋಷಿಸಲಾಗಿತ್ತು. ಬೂಕರ್ ಪ್ರಶಸ್ತಿ ವಿಜೇತರಲ್ಲಿ ಮಾರ್ಗರೆಟ್ ಅಟ್ವುಡ್, ಸಲ್ಮಾನ್ ರಶ್ದಿ ಮತ್ತು ಯಾನ್ ಮಾರ್ಟೆಲ್ ಸೇರಿದ್ದಾರೆ.