ಶ್ರೀಲಂಕಾ ವಿವಾದ: ಪ್ರಧಾನಿ ಹುದ್ದೆ ತ್ಯಜಿಸಲಿರುವ ಮಹಿಂದಾ ರಾಜಪಕ್ಸ
ಕೊಲಂಬೋ, ಡಿಸೆಂಬರ್ 14: ಶ್ರೀಲಂಕಾದ ವಿವಾದಾತ್ಮಕ ಪ್ರಧಾನಿ ಮಹಿಂದಾ ರಾಜಪಕ್ಸ ತಮ್ಮ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ ಎಮದು ಅವರ ಮಗ ತಿಳಿಸಿದ್ದಾರೆ.
ರಾಜಪಕ್ಸ ಅವರು ಶನಿವಾರ ಪ್ರಧಾನಿ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ಅವರ ಮಗ, ಸಂಸದ ನಮಲ್ ರಾಜಪಕ್ಸ ಹೇಳಿದ್ದಾರೆ. 'ದೇಶದ ಸ್ಥಿರತೆ ದೃಷ್ಟಿಯಿಂದ ಅವರು ರಾಜೀನಾಮೆ ನೀಡಲಿದ್ದಾರೆ' ಎಂದು ತಿಳಿಸಿದ್ದಾರೆ.
ಅಕ್ಟೋಬರ್ 26ರಂದು ಪ್ರಧಾನಿ ಹುದ್ದೆಗೆ ಏರಿದ್ದ ರಾಜಪಕ್ಸ ಅವರು ಪ್ರಧಾನಿ ಕಚೇರಿಯಿಂದ ಅಧಿಕಾರ ಚಲಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಆದೇಶ ನೀಡಿತ್ತು.

ಸಂಸತ್ ವಿಸರ್ಜನೆ ಮಾಡುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನಿರ್ಧಾರವು ಸಂವಿಧಾನಬಾಹಿರ ಎಂದು ಕೋರ್ಟ್ ಹೇಳಿತ್ತು.
ರಾಜಪಕ್ಸ ಅವರ ನಿರ್ಧಾರವು ಏಳು ವಾರಗಳ ವಿವಾದಾತ್ಮಕ ಅಧಿಕಾರಾವಧಿಯ ಗೊಂದಲ ಅಂತ್ಯಗೊಳಿಸಲಿದೆ ಎಂಬ ನಿರೀಕ್ಷೆ ಮೂಡಿದೆ.












Click it and Unblock the Notifications