ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಚುನಾವಣೆ: ಸೊಲೊಪ್ಪಿಕೊಂಡ ರಾಜಪಕ್ಸಾ

By Mahesh
|
Google Oneindia Kannada News

ಕೊಲಂಬೋ, ಆಗಸ್ಟ್ 18: ಶ್ರೀಲಂಕಾ ಸಂಸದೀಯ ಚುನಾವಣೆಯಲ್ಲಿ ಮಾಜಿ ರಾಷ್ಟ್ರಪತಿ ಮಹೀಂದ್ರಾ ರಾಜಪಕ್ಸಾ ಅವರು ಸೋಲೊಪ್ಪಿಕೊಂಡಿದ್ದಾರೆ. 'ಪ್ರಧಾನಿಯಾಗುವ ನನ್ನ ಕನಸು ಮಂಕಾಗಿದೆ' ಎಂದು ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಮಹಿಂದಾ ರಾಜಪಕ್ಸೆ ಅವರು ಶ್ರೀಲಂಕಾದ ಪ್ರಧಾನಿಯಾಗುವ ಹುಮ್ಮಸ್ಸಿನಲ್ಲಿದ್ದರು. ಅದರೆ, ದ್ವೀಪ ರಾಷ್ಟ್ರದ ಸುಮಾರು 1.5 ಕೋಟಿ ಜನ ರಾಜಪಕ್ಸೆ ಪಕ್ಷ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್ (ಯುಪಿಎಫ್ ಎ) ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಸೊಲೊಪ್ಪಿಕೊಂಡಿದೆ. [ಶ್ರೀಲಂಕಾದಲ್ಲಿ ರಾಜಪಕ್ಸೆಗೆ ಸೋಲು, ತಮಿಳರಿಂದ ಹರ್ಷೋದ್ಗಾರ]

Former President Rajapaksa concedes defeat

ಮಂಗಳವಾರ ಪೂರ್ಣ ಪ್ರಮಾಣದ ಫ‌ಲಿತಾಂಶವನ್ನು ಚುನಾವಣಾ ಆಯೋಗದ ಮುಖ್ಯಸ್ಥ ದೇಶಪ್ರಿಯ ಅವರು ಪ್ರಕಟಿಸಲಿದ್ದಾರೆ. 22 ಕ್ಷೇತ್ರಗಳ ಪೈಕಿ ಯುಪಿಎಫ್ ಎ ಕೇವಲ 8 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಪ್ರತಿಸ್ಪರ್ಧಿ ಆಡಳಿತಾರೂಢ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ ಪಿ) 11 ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ನಾವು ಸೋಲನ್ನು ಒಪ್ಪಿಕೊಂಡಿದ್ದೇವೆ ಎಂದು ರಾಜಪಕ್ಸಾ ಹೇಳಿದ್ದಾರೆ. ['ಯುಪಿಎಯ ರಾಮಸೇತು ಯೋಜನೆ ಅಬಾಧಿತ']

225 ಸ್ಥಾನವಿರುವ ಶ್ರೀಲಂಕಾ ಸಂಸತ್ತಿನಲ್ಲಿ 113 ಸ್ಥಾನ ಪಡೆದು ಬಹುಮತ ಸಾಬೀತು ಮಾಡುವ ಪರಿಸ್ಥಿತಿಯಲ್ಲಿ ಯಾವ ಒಂದು ಪಕ್ಷವೂ ಇಲ್ಲ. ಹೀಗಾಗಿ ಮೈತ್ರಿಕೂಟ ರಚನೆ ಅನಿವಾರ್ಯವಾಗಿದೆ.ಕಳೆದ ಜನವರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೈತ್ರಿಪಾಲ ಸಿರಿಸೇನಾ ಅವರು ರಾಜಪಕ್ಸಾ ವಿರುದ್ಧ ಗೆಲುವು ಸಾಧಿಸಿ, ಸಂಸತ್ ಚುನಾವಣೆಯನ್ನು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

English summary
Former Sri Lankan President Mahinda Rajapaksa conceded defeat in parliamentary elections held on Monday, media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X