• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explainer: ಶ್ರೀಲಂಕಾದಲ್ಲಿ ಅಧ್ಯಕ್ಷರ ಮನೆಗೆ ಜನರು ನುಗ್ಗುವ ಮೊದಲು ಆಗಿದ್ದೇನು?

|
Google Oneindia Kannada News

ಕೊಲಂಬೋ, ಜುಲೈ 9: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ನಿವಾರಣೆ ಮತ್ತು ಇಂಧನ ಕೊರತೆಯ ನಿರ್ವಹಣೆಗಾಗಿ ರಾಜಪಕ್ಸೆ ಸರ್ಕಾರಕ್ಕೆ ಪ್ರತಿಪಕ್ಷಗಳು ನೀಡಿದ ಗಡುವು ಮುಕ್ತಾಯವಾಗಿದೆ. ಇಂಧನ ಕೊರತೆ ನೀಗಿಸುವಲ್ಲಿ ಸರ್ಕಾರ ವೈಫಲ್ಯ ಅನುಭವಿಸುತ್ತಿದ್ದಂತೆ ಇಡೀ ರಾಷ್ಟ್ರ ರಾಜಧಾನಿಯಲ್ಲಿ ಚಿತ್ರಣವೇ ಬದಲಾಗಿದೆ ಹೋಗಿದೆ.

ದ್ವೀಪ ರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇಂಧನ ಕೊರತೆಯನ್ನು ನೀಗಿಸಲು ಜುಲೈ 6 ರಿಂದ 7ರ ಗಡುವು ನೀಡಲಾಗುತ್ತು. ಈ ಅವಧಿಯಲ್ಲೇ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದ ಸರ್ಕಾರವು ಕರ್ಫ್ಯೂ ಹಾದಿಯಲ್ಲಿ ಸಾಗಿತು.

ಶ್ರೀಲಂಕಾ ಬಿಕ್ಕಟ್ಟು: ಸರ್ಕಾರಿ ವಿರೋಧಿ ರ್‍ಯಾಲಿಗೂ ಮುನ್ನ ಕರ್ಫ್ಯೂಶ್ರೀಲಂಕಾ ಬಿಕ್ಕಟ್ಟು: ಸರ್ಕಾರಿ ವಿರೋಧಿ ರ್‍ಯಾಲಿಗೂ ಮುನ್ನ ಕರ್ಫ್ಯೂ

ಶುಕ್ರವಾರ ಕೊಲಂಬೋದಲ್ಲಿ ಕರ್ಫ್ಯೂ ಅನ್ನು ಜಾರಿಗೊಳಿಸಿದ್ದು, ಶನಿವಾರದ ಬೆಳಗ್ಗೆ 8 ಗಂಟೆಯ ವೇಳೆಗೆ ಕರ್ಫ್ಯೂ ಅವಧಿ ಮುಗಿಯಿತು. ಶುಕ್ರವಾರ ರಾತ್ರಿಯೇ ಕೊಲಂಬೋದತ್ತ ಪ್ರತಿಪಕ್ಷದ ನಾಯಕರು ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ಬರುವುದಕ್ಕೆ ಶುರು ಮಾಡಿದರು. ಶನಿವಾರ ಬೆಳಗ್ಗೆ 8 ಗಂಟೆಯ ನಂತರ ಪರಿಸ್ಥಿತಿಯ ಉದ್ವಿಗ್ನತೆಯು ಇನ್ನೊಂದು ಹಂತಕ್ಕೆ ತಲುಪಿತು. ಈ ದಿನ ಬೆಳಗ್ಗೆಯಿಂದ ಇದುವರೆಗೂ ದ್ವೀಪರಾಷ್ಟ್ರದಲ್ಲಿ ಪರಿಸ್ಥಿತಿ ಹೇಗೆಲ್ಲಾ ಉದ್ವಿಗ್ನವಾಗುತ್ತಾ ಹೋಯಿತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸಂಸತ್ ಕರೆಯುವಂತೆ ಮನವಿ ಮಾಡಿದ ಪ್ರಧಾನಮಂತ್ರಿ

ಸಂಸತ್ ಕರೆಯುವಂತೆ ಮನವಿ ಮಾಡಿದ ಪ್ರಧಾನಮಂತ್ರಿ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಪ್ರತಿಭಟನಾಕಾರರು ಅಧ್ಯಕ್ಷ ಗೋಟಬಯ ರಾಜಪಕ್ಸೆ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ಮಧ್ಯೆ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ರಾಜಕೀಯ ಪಕ್ಷದ ನಾಯಕರ ತುರ್ತು ಸಭೆ ಕರೆದಿದ್ದಾರೆ. ಇದರ ಜೊತೆಗೆ ಸಂಸತ್ ಸಭೆ ಕರೆಯುವಂತೆ ಸ್ಪೀಕರ್‌ಗೆ ರಾನಿಲ್ ವಿಕ್ರಮಸಿಂಘೆ ಮನವಿ ಮಾಡಿದ್ದಾರೆ. ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕರೆದಿರುವ ಸರ್ವ ಪಕ್ಷದ ನಾಯಕರ ಸಭೆಗೆ ತಾವು ಅಥವಾ ತಮ್ಮ ಪಕ್ಷದ ನಾಯಕರು ಭಾಗವಹಿಸುವುದಿಲ್ಲ ಎಂದು ಪ್ರತಿಪಕ್ಷ ಮತ್ತು ಎಸ್‌ಜೆಬಿ ನಾಯಕ ಸಜಿತ್ ಪ್ರೇಮದಾಸ ಹೇಳಿದ್ದಾರೆ.

ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರ ಗುಂಪು

ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರ ಗುಂಪು

ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿರುದ್ಧ ಸಾರ್ವಜನಿಕರು ಕೆರಳಿ ಕೆಂಡವಾಗಿದ್ದು, ಅವರ ರಾಜೀನಾಮೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಬೀದಿಗೆ ಇಳಿದಿದ್ದಾರೆ. ಶನಿವಾರ ಮಧ್ಯ ಕೊಲಂಬೊದ ಹೈ-ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿರುವ ಬ್ಯಾರಿಕೇಡ್‌ಗಳನ್ನು ಮುರಿದ ಪ್ರತಿಭಟನಾಕಾರರು ರಾಜಪಕ್ಸೆಯವರ ಅಧಿಕೃತ ನಿವಾಸಕ್ಕೆ ನುಗ್ಗಿದರು. ಅಧ್ಯಕ್ಷರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಮನೆಯಲ್ಲಿದ್ದ ವಸ್ತುಗಳನ್ನು ಆಕ್ರೋಶದಿಂದ ಒಡೆದು ಹಾಕಿದರು. ಆ ಮೂಲಕ ಗೋಟಬಯ ರಾಜಪಕ್ಸೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿದರು.

ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಾಪತ್ತೆ?

ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಾಪತ್ತೆ?

ದೇಶದ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಎಲ್ಲಿದ್ದಾರೆ ಎಂಬುದೇ ತಿಳಿದು ಬಂದಿಲ್ಲ. ಕೊಲಂಬೊದ ಅವರ ಅಧಿಕೃತ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗುವ ಮುನ್ನ ಅಲ್ಲಿಂದ ರಾಜಪಕ್ಸೆಯನ್ನು ಸ್ಥಳಾಂತರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಕಳೆದ ಮಾರ್ಚ್‌ನಿಂದ ಗೋಟಬಯಾ ರಾಜಪಕ್ಸೆ ರಾಜೀನಾಮೆ ಕೂಗು ಕೇಳಿ ಬರುತ್ತಿದೆ. ಈ ಹಿಂದೆ ಏಪ್ರಿಲ್ ಆರಂಭದಲ್ಲಿ ಪ್ರತಿಭಟನಾಕಾರರು ಕಚೇರಿಯ ಪ್ರವೇಶದ್ವಾರದಲ್ಲಿ ಅಡ್ಡ ಹಾಕುವುದಕ್ಕೆ ಪ್ರಯತ್ನಿಸಿದ್ದು, ಅಂದಿನಿಂದ ಅಧ್ಯಕ್ಷವು ತಮ್ಮ ನಿವಾಸವನ್ನೇ ಕಚೇರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಸರ್ಕಾರದ ವಿರುದ್ಧ ಕೆರಳಿರುವ ಪ್ರತಿಭಟನಾಕಾರರು ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.

ಇದರ ಮಧ್ಯೆಯಲ್ಲಿ ಪಕ್ಷದ ನಾಯಕರ ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ತಾವು ಗೌರವಿಸುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಯು ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮರ್ಯಾದೆ ಉಳಿಸಿಕೊಳ್ಳಲು ರಾಜೀನಾಮೆ ನೀಡಿ ಎಂದ ಸನತ್ ಜಯಸೂರ್ಯ

ಮರ್ಯಾದೆ ಉಳಿಸಿಕೊಳ್ಳಲು ರಾಜೀನಾಮೆ ನೀಡಿ ಎಂದ ಸನತ್ ಜಯಸೂರ್ಯ

ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಸರಣಿ ಟ್ವೀಟ್ ಮೂಲಕ ಪ್ರತಿಭಟನಾನಿರತ ಜೊತೆಗೆ ತಾವು ಯಾವಾಗಲೂ ಇರುವುದಾಗಿ ಕ್ರಿಕೆಟಿಗ ಸನತ್ ಜಯಸೂರ್ಯ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,"ನಾನು ಯಾವಾಗಲೂ ಶ್ರೀಲಂಕಾದ ಜನರೊಂದಿಗೆ ನಿಲ್ಲುತ್ತೇನೆ. ಶೀಘ್ರದಲ್ಲೇ ವಿಜಯದ ಸಂಭ್ರಮವನ್ನು ಆಚರಿಸುತ್ತೇನೆ. ಇದು ಯಾವುದೇ ಉಲ್ಲಂಘನೆಯಿಲ್ಲದೆ ಮುಂದುವರಿಯಬೇಕು," ಎಂದು ಬರೆದುಕೊಂಡಿದ್ದಾರೆ.

ಶ್ರೀಲಂಕಾದ ಅಧ್ಯಕ್ಷ ಗೋತಬಯಾ ರಾಜಪಕ್ಸೆ ಅನ್ನು ಉಲ್ಲೇಖಿಸಿ ಬರೆದಿರುವ ಮತ್ತೊಂದು ಟ್ವೀಟ್ ಸಂದೇಶದಲ್ಲಿ "ನಿಮ್ಮ ಮನೆಗೆ ಮುತ್ತಿಗೆ ಹಾಕಿರುವುದು ಆಗಿದೆ. ನಿಮ್ಮ ಭದ್ರಕೋಟೆ ಕುಸಿದಿದೆ. ಅರಗಾಲಯ ಮತ್ತು ಜನಶಕ್ತಿ ಗೆದ್ದಿದೆ. ದಯವಿಟ್ಟು ಈಗ ರಾಜೀನಾಮೆ ನೀಡಿ ಘನತೆ ಉಳಿಸಿಕೊಳ್ಳಿರಿ," ಎಂದು ತಿಳಿಸಿದ್ದಾರೆ.

ಗೋಟಬಯ ರಾಜಪಕ್ಸೆ ರಾಜೀನಾಮೆಗೆ ಹೆಚ್ಚಿದ ಒತ್ತಡ

ಗೋಟಬಯ ರಾಜಪಕ್ಸೆ ರಾಜೀನಾಮೆಗೆ ಹೆಚ್ಚಿದ ಒತ್ತಡ

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಸರ್ಕಾರವನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆ ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಪ್ರಧಾನಮಂತ್ರಿ ಕಚೇರಿಯ ಎದುರು ಸಾವಿರಾರು ಸಂಖ್ಯೆಯಲ್ಲಿ ಜನರು ಮೊಕ್ಕಾಂ ಹೂಡಿದ್ದರೆ, ಇನ್ನಷ್ಟು ಮಂದಿ ಈ ಕಡೆ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಈ ಮಧ್ಯೆ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಭದ್ರತಾ ಸಿಬ್ಬಂದಿಯು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀಲಂಕಾ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ವ್ಯಾಪಕ ಬೆಂಬಲವೂ ವ್ಯಕ್ತವಾಗುತ್ತಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ನಂತರ ಇದೀಗ ಮತ್ತೊಬ್ಬ ಕ್ರಿಕೆಟಿಗ ಕುಮಾರ ಸಂಗಕ್ಕರ ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಲಂಬೊ ಸಂಸದ ಹರ್ಷ ಡಿ ಸಿಲ್ವಾ ಕುಟುಂಬದವರು ಕೂಡಾ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದ್ದಾರೆ.

Recommended Video

   Modi ಆಪ್ತ ಗುಂಡೇಟಿಗೆ ಬಲಿಯಾಗಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಚೀನಾ | *World | OneIndia Kannada
   English summary
   Sri Lanka Protests : President Gotabaya Rajapaksa flees official residence; Protesters clash with police. Check what is happening in Sri Lanka on July 9
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X