ಕ್ರೈಸ್ಟ್ ಚರ್ಚ್ ನ ಮಸೀದಿ ದಾಳಿಯ ಪ್ರತೀಕಾರವೇ ಶ್ರೀಲಂಕಾದ ಚರ್ಚ್ ದಾಳಿ

ಕೊಲಂಬೋ (ಶ್ರೀಲಂಕಾ), ಏಪ್ರಿಲ್ 23: ಮುನ್ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾದ ಶ್ರೀಲಂಕಾದ ಆತ್ಮಹತ್ಯಾ ದಾಳಿಯ ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಮಸೀದಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಈಸ್ಟರ್ ಭಾನುವಾರದಂದು ಕೊಲಂಬೋ ಸೇರಿದಂತೆ ಸುತ್ತಮುತ್ತಲ ಚರ್ಚ್ ಗಳು ಹಾಗೂ ಫೈವ್ ಸ್ಟಾರ್ ಹೋಟೆಲ್ ಗಳ ಮೇಲೆ ಉಗ್ರ್ ದಾಳಿ ನಡೆದಿದೆ.

ಈ ಬಗ್ಗೆ ಶ್ರೀಲಂಕಾದ ಉಪ ರಕ್ಷಣಾ ಸಚಿವರು ಮಂಗಳವಾರ ತಿಳಿಸಿದ್ದಾರೆ. "ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ಮುಸ್ಲಿಮರ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಭಾನುವಾರ ಶ್ರೀಲಂಕಾದಲ್ಲಿ ದಾಳಿ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ" ಎಂದು ರುವಾನ್ ವಿಜೆವರ್ಧನೆ ಸಂಸತ್ ನಲ್ಲಿ ತಿಳಿಸಿದ್ದಾರೆ.

Sri Lanka attacks were retaliation for Christchurch mosque shooting, says minister

ಮಾರ್ಚ್ ಹದಿನೈದನೇ ತಾರೀಕು ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿರುವ ಎರಡು ಮಸೀದಿಗಳ ಮೇಲೆ ನಡೆದ ದಾಳಿ ವೇಳೆ ಐವತ್ತು ಮಂದಿ ಸಾವನ್ನಪ್ಪಿದ್ದರು. ಆಗ ನಡೆದ ದಾಳಿಗೆ ಪ್ರತ್ಯುತ್ತರ ಹೇಳುವ ಸಲುವಾಗಿಯೇ ಉಗ್ರಗಾಮಿಗಳು ಬಹುತೇಕ ಕ್ರಿಶ್ಚಿಯನ್ನರನ್ನೇ ಗುರಿ ಮಾಡಿಕೊಂಡು ಕೊಲಂಬೋದಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+