• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯನ ನೇತೃತ್ವದಲ್ಲಿ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಯಾತ್ರೆ

|
Google Oneindia Kannada News

ಫ್ಲೋರಿಡಾ, ನವೆಂಬರ್ 12: ಭಾರತ ಮೂಲದ ಗಗನಯಾತ್ರಿ ರಾಜ ಚಾರಿ ನೇತೃತ್ವದ ಕ್ರ್ಯೂ 3 ಮಿಷನ್‌ ಅಲ್ಲಿ ಪೈಲಟ್‌ಗಳಾದ ಟಾಮ್ ಮಾಷ್ಬರ್,ಕೈಲಾ ಬ್ಯಾರನ್, ಮಥಿಯಾಸ್ ಮೌರರ್ ಇದ್ದಾರೆ.

ಬಾಹ್ಯಾಕಾಶದಲ್ಲಿ 6 ತಿಂಗಳ ಕಾರ್ಯಾಚರಣೆಗೆ ಈ ನಾಲ್ವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಘ, ಆವಿಷ್ಕಾರದ ಸ್ವಾತಂತ್ರ್ಯ ಪ್ರತೀಕ: ಪ್ರಧಾನಿ ಮೋದಿ ಭಾರತೀಯ ಬಾಹ್ಯಾಕಾಶ ಸಂಘ, ಆವಿಷ್ಕಾರದ ಸ್ವಾತಂತ್ರ್ಯ ಪ್ರತೀಕ: ಪ್ರಧಾನಿ ಮೋದಿ

2022ರ ಏಪ್ರಿಲ್ ಕೊನೆಯವರೆಗೂ ಈ ಗಗನಯಾತ್ರಿಗಳು ಅಲ್ಲೇ ಅಧ್ಯಯನ ನಡೆಸಲಿದ್ದಾರೆ.ನಾಸಾ ಹಾಗೂ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಈ ನಾಲ್ವರು ಗಗನಯಾತ್ರಿಗಳ ಬಾಹ್ಯಾಕಾಶಯಾತ್ರೆ ಮಾಡಿಸುತ್ತಿದೆ.

ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಅಮೆರಿಕದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ರಾತ್ರಿ ಉಡಾವಣೆಯಾಗಿದೆ. ಈ ಯೋಜನೆಯು ಕೊರೊನಾ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು.

ಅಮೆರಿಕದ ಕಾಲಮಾನ ಸಂಜೆ 6.32ರ ಹೊತ್ತಿಗೆ ರಾಜ ಚಾರಿ ನೇತೃತ್ವದ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಬಂದು ತಲುಪಿದ್ದಾರೆ. ಬುಧವಾರ ರಾತ್ರಿ 9 ಗಂಟೆ 3 ನಿಮಿಷಕ್ಕೆ ರಾಕೆಟ್ ಉಡಾವಣೆಯಾಗಿದೆ.

ಸ್ಪೇಸ್‌ಎಕ್ಸ್‌ನ ರಾಕೆಟ್‌ನಲ್ಲಿ ಬಾಹ್ಯಾಕಾಶ ಸಿಬ್ಬಂದಿಯ ಜತೆಗೆ ಸುಮಾರು 180 ಕೆಜಿಯಷ್ಟು ವಸ್ತುಗಳು, ಹಾರ್ಡ್‌ವೇರ್ ಅನ್ನೂ ಕೊಂಡೊಯ್ಯಲಾಗಿದೆ.

ನಾಸಾದ ಚಂದ್ರ ಹಾಗೂ ಮಂಗಳನ ಸಂಶೋಧನೆಗೆ ಪೂರಕವಾಗಿ ಆರು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ನಾಲ್ವರು ಗಗನಯಾತ್ರಿಗಳು ಅಧ್ಯಯನ ನಡೆಸಿ ಪೂರಕ ಸಂಶೋಧನಾ ದಾಖಲೆಗಳನ್ನು ನಾಸಾಗೆ ರವಾನಿಸಲಿದ್ದಾರೆ.

ಸ್ಪೇಸ್‌ಎಕ್ಸ್ ತನ್ನ ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಕೆಟ್ಟ ಹವಾಮಾನ ಸೇರಿದಂತೆ ವಿವಿಧ ಅಡೆತಡೆಗಳಿಂದಾಗಿ ಮುಂದೂಡಲ್ಪಟ್ಟಿದ್ದ ಕಾರ್ಯಾಚರಣೆ ಬುಧವಾರ ರಾತ್ರಿ ಯಶಸ್ವಿಯಾಗಿ ನಡೆದಿದೆ.

ನಿಧಾನಗತಿಯ ಮಳೆ ಬೀಳುತ್ತಿದ್ದ ಕಾರಣದಿಂದಾಗಿ ನಾಲ್ವರು ಗಗನಯಾತ್ರಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅವರು 6 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇವರೆಲ್ಲ ಕಳೆಯಲಿದ್ದು, ಅವರನ್ನು ಎಲ್ಲ ತರಹದ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಇದಕ್ಕೂ ಎರಡು ದಿನ ಮೊದಲು ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸುದೀರ್ಘ ಸಮಯ ಕಳೆದು ಭೂಮಿಗೆ ವಾಪಸ್​ ಆಗಿದ್ದರು. ನಾಸಾ (NASA) ಗಗನಯಾತ್ರಿಗಳಾದ ಶೇನ್ ಕಿಂಬೆರೊ ಮತ್ತು ಮೇಗನ್ ಮ್ಯಾಕ್‌ ಆರ್ಥರ್, ಜಪಾನ್‌ನ ಅಕಿಹಿಟೊ ಹೊಶೈಡ್ ಮತ್ತು ಫ್ರಾನ್ಸ್‌ನ ಥಾಮಸ್ ಪೆಸ್ಕ್ವೆಟ್ ಎರಡು ದಿನಗಳ ಹಿಂದೆ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ನಿಂದ ಭೂಮಿಗೆ ಮರಳಿದರು. ಬಾಹ್ಯಾಕಾಶ ಕೇಂದ್ರದಲ್ಲಿ 200 ದಿನಗಳನ್ನು ಕಳೆದ ನಂತರ ಅವರು ಹಿಂತಿರುಗಿದ್ದರು. ಅವರ ಯಶಸ್ವಿ ಆಗಮನದ ಬಳಿಕ ನಾಲ್ವರು ಹೊಸ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗಿದೆ.

ಸ್ಪೇಸ್​ ಎಕ್ಸ್​ ಫಾಲ್ಕನ್-9 ಕ್ರ್ಯೂವ್ 3 (Falcon Crew-3) ಹೆಸರಿನ ಈ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದೆ. ಇರದಲ್ಲಿ ರಾಜಾ ಚಾರಿ (Raja Chari), ಯುಎಸ್ ಏರ್ ಫೋರ್ಸ್ ಯುದ್ಧ ವಿಮಾನ ಮತ್ತು ಪರೀಕ್ಷಾ ಪೈಲಟ್ ಮಿಷನ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಮಿಷನ್ ಸ್ಪೆಷಲಿಸ್ಟ್ ಕೈಲಾ ಬ್ಯಾರನ್ , ಯುಎಸ್ ನೌಕಾಪಡೆಯ ಜಲಾಂತರ್ಗಾಮಿ ಅಧಿಕಾರಿ ಮತ್ತು ಪರಮಾಣು ಇಂಜಿನಿಯರ್ ಆಗಿದ್ದಾರೆ. ತಂಡದ ಪೈಲಟ್ ಮತ್ತು ಎರಡನೇ - ಕಮಾಂಡ್ ಅನುಭವಿ ಗಗನಯಾತ್ರಿ ಟಾಮ್ ಮಾರ್ಷ್‌ಬರ್ನ್ , ವೈದ್ಯ ಮತ್ತು ನಾಸಾದ ಮಾಜಿ ಫ್ಲೈಟ್ ಸರ್ಜನ್ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಅನುಭವವಿದೆ.

ಇವರ ಜೊತೆ ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಗಗನಯಾತ್ರಿ ಮಥಿಯಾಸ್ ಮೌರೆರ್ ಸಹ ಬಾಹ್ಯಾಕಾಶ ನಿಲ್ದಾಣಕ್ಕೆ ಜಿಗಿದಿದ್ದಾರೆ.

ನಾಲ್ವರು ಗಗನಯಾತ್ರಿಗಳನ್ನು ಹೊತ್ತ SpaceX ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಇನ್ನು ಇವರು ವಸಂತ ಕಾಲದವರೆಗೂ ಆಕಾಶದಲ್ಲಿ ತೆಲಾಡುತ್ತಾ ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ತೆಲಾಡಲಿದ್ದಾರೆ.

ಹೀಗಾಗಿ ಸದ್ಯಕ್ಕೆ ಈ ನಾಲ್ವರು ಗಗನಯಾನಿಗಳ ಅದ್ಭುತ ತಾಣವೇ ಆಗಲಿದೆ. ನಿನ್ನೆ ನಾಸಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ್ದ ಸ್ಪೇಸ್​ ಎಕ್ಸ್​ ಕ್ಯಾಪ್ಸುಲ್​, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲು ಸುಮಾರು 21 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ಕ್ಯಾಪ್ಸುಲ್​ ಯಶಸ್ವಿಯಾನದ ಬಗ್ಗೆ ಈ ಯಾನದ ಕಮಾಂಡರ್​​​ ಆಗಿರುವ ರಾಜಾ ಚಾರಿ ಮಾತನಾಡಿ, ಒಬ್ಬರು ಜರ್ಮನ್ ಮತ್ತು ಮೂವರು ಅಮೆರಿಕ ಗಗನಯಾತ್ರಿಗಳನ್ನ ಹೊತ್ತ ಡ್ರ್ಯಾಗನ್​ ಕ್ಯಾಪ್ಸುಲ್​ 20 ಮೈಲಿ (30 ಕಿಲೋಮೀಟರ್) ದೂರದಲ್ಲಿರುವ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ಸಂದರ್ಭ ಈ ನಾಲ್ವರು ಗಗನಯಾನಿಗಳ ಬದುಕಲ್ಲಿ ಒಂದು ಭಾವನಾತ್ಮಕ ಕ್ಷಣವನ್ನೇ ಸೃಷ್ಟಿ ಮಾಡಿತ ಎಂದಿದ್ದಾರೆ.

"ಬಾಹ್ಯಾಕಾಶದಲ್ಲಿ ತೇಲುತ್ತಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಜ್ರದಂತೆ ಹೊಳೆಯುತ್ತಿದೆ" ಎಂದು ಜರ್ಮನ್ ಗಗನಯಾತ್ರಿ ಮಥಿಯಾಸ್ ಮೌರೆರ್ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ ನಾವು ಈ ಯಾತ್ರೆಯಿಂದ ತುಂಬಾ ಸಂತುಲಿತರಾಗಿದ್ದೇವೆ ಹಾಗೂ ಅಷ್ಟೇ ಉತ್ಸುಕತೆಯಿಂದ ಇದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಡ್ರ್ಯಾಗನ್‌ನ ಹಾರಾಟವು ಸಂಪೂರ್ಣ ಸ್ವಯಂಚಾಲಿತವಾಗಿದೆ. ಅಂದ ಹಾಗೆ ಈ ಬಾಹ್ಯಾಕಾಶಯಾನದ ನೌಕೆಯನ್ನ ಚಾರಿ ಮತ್ತು ಪೈಲಟ್ ಟಾಮ್ ಮಾರ್ಷ್‌ಬರ್ನ್ ನಿರ್ವಹಿಸುತ್ತಿದ್ದು, ಕ್ಯಾಪ್ಸುಲ್ ಸಿಸ್ಟಮ್‌ಗಳನ್ನು ಇವರೇ ಮೇಲ್ವಿಚಾರಣೆ ಮಾಡುತ್ತಾರೆ. ಅಗತ್ಯ ಇದ್ದರೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇವರು ಸಿದ್ಧರಾಗಿದ್ದಾರೆ.

   ಚಪ್ಪಾಳೆ ತಟ್ಟಿ ಪಾಕ್ ಗೆ ಬೆಂಬಲಿಸಿದ Sania Mirzaಗೆ ಭಾರತೀಯರು ಹೇಳಿದ್ದೇನು? | Oneindia Kannada
   English summary
   A SpaceX capsule carrying four astronauts pulled up Thursday at the International Space Station, their new home until spring.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X