ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ವಿರುದ್ಧದ ನಿರ್ಬಂಧಕ್ಕೆ ದಕ್ಷಿಣ ಕೊರಿಯಾ ಸಾಥ್

|
Google Oneindia Kannada News

ಸಿಯೋಲ್, ಫೆಬ್ರವರಿ 25:ಉಕ್ರೇನ್‌ ಮೇಲೆ ದಾಳಿ ನಡೆಸಿರುವ ರಷ್ಯಾದ ವಿರುದ್ಧ ಹಲವು ದೇಶಗಳು ನಿರ್ಬಂಧ ವಿಧಿಸಿದ್ದು, ಇದಕ್ಕೆ ದಕ್ಷಿಣ ಕೊರಿಯಾ ಕೂಡ ಸಾಥ್ ನೀಡಿದೆ. ಉಕ್ರೇನ್‌ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಿಯೋಲ್ ನ ಅಧ್ಯಕ್ಷೀಯ ಬ್ಲೂ ಹೌಸ್ ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಹೇಳಿದ್ದಾರೆ.

ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದನ್ನು ಬೆಂಬಲಿಸುವುದಾಗಿ ದಕ್ಷಿಣ ಕೊರಿಯಾ ಹೇಳಿದೆ. ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ರಷ್ಯಾ ವಿರುದ್ಧ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚಿಂತನೆ ನಡೆಸುತ್ತಿವೆ.

Russia-Ukraine War : ಉಕ್ರೇನ್-ರಷ್ಯಾ ಸೇನೆಗಳ ಬಲಾಬಲ ಹೇಗಿದೆ?Russia-Ukraine War : ಉಕ್ರೇನ್-ರಷ್ಯಾ ಸೇನೆಗಳ ಬಲಾಬಲ ಹೇಗಿದೆ?

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದನ್ನು ಸಶಸ್ತ್ರ ಆಕ್ರಮಣ ಎಂದು ಹೇಳಿರುವ ದಕ್ಷಿಣ ಕೊರಿಯಾ, ಆರ್ಥಿಕ ನಿರ್ಬಂಧಗಳೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಕೈಗೊಳ್ಳುತ್ತಿರುವ ಎಲ್ಲಾ ಕ್ರಮಗಳನ್ನೂ ದಕ್ಷಿಣ ಕೊರಿಯಾ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಕಳೆದ ವಾರದಿಂದ ರಷ್ಯಾ ಗಡಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೈನ್ಯವನ್ನು ನಿಯೋಜಿಸಿತ್ತು.

South Korea Says Will Join Sanctions Against Russia

ಪುಟಿನ್‌ರನ್ನು ಉಕ್ರೇನ್ ಮೇಲೆ ದಾಳಿ ನಡೆಸದಂತೆ ತಡೆಯಲು ಅಂತಾರಾಷ್ಟ್ರೀಯ ಸಮುದಾಯ ವಿಫಲಗೊಂಡಿದ್ದು, ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ.

ಉಕ್ರೇನ್​ ಪೂರ್ವಭಾಗದಲ್ಲಿ ಬಂಡುಕೋರರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆದೇಶಿಸಿದ ಬೆನ್ನಲ್ಲೆ ಅಮೆರಿಕ, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.

ಮೊದಲ ಭಾಗವಾಗಿ ಹಲವಾರು ನಿರ್ಬಂಧಗಳನ್ನು ವಿಧಿಸಿದ ಬಗ್ಗೆ ಮಾಹಿತಿ ನೀಡಿದ ಜೋ ಬೈಡನ್​, ರಷ್ಯಾವು ತನ್ನ ಸೇನೆಯನ್ನು ಉಕ್ರೇನ್​ ಪ್ರದೇಶಗಳಿಗೆ ಕಳುಹಿಸಿಕೊಟ್ಟು, ಆ ದೇಶದ ಪ್ರದೇಶವನ್ನು ಆಕ್ರಮಣ ಮಾಡಿಕೊಂಡಿದೆ. ಇದು ಯುದ್ಧಕ್ಕೆ ಸರಿಸಮಾನವಾದುದು ಎಂದು ಆರೋಪಿಸಿದ್ದಾರೆ.

ಉಕ್ರೇನ್​ ಪ್ರದೇಶಗಳಲ್ಲಿ ರಷ್ಯಾ ಸೇನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇದು ರಷ್ಯಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮೀರಿದ್ದರಿಂದ ಆ ದೇಶದ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಷ್ಯಾ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧ ಹೇರಲು ಯುರೋಪ್ ಒಕ್ಕೂಟಗಳು ತೀರ್ಮಾನಿಸಿವೆ. ರಷ್ಯಾ ಸೇನೆಯು ಉಕ್ರೇನ್ ಮೇಲೆ ದಾಳಿ ನಡೆಸಿರುವುದರಿಂದ ಬಲವಾದ ಮತ್ತು ಕಠಿಣ ನಿರ್ಬಂಧಗಳನ್ನು ರಷ್ಯಾ ಮೇಲೆ ಹೇರುವ ನಿರ್ಧಾರವನ್ನು ಯುರೋಪ್ ಒಕ್ಕೂಟ ತೆಗೆದುಕೊಂಡಿದೆ.

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಯುರೋಪ್‌ನಲ್ಲಿ ಸ್ಥಿರತೆ ಮತ್ತು ಅಂತಾರಾಷ್ಟ್ರೀಯವಾಗಿ ಸಂಪೂರ್ಣ ಶಾಂತಿ ಸ್ಥಾಪಿಸುವುದು ಇದರ ಗುರಿ ನಾವು ಇದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಹೇಳಿದೆ.

Recommended Video

Russia ಹೇಳಿದ್ದು ಒಂದು ! ಮಾಡ್ತಿರೋದು ಇನ್ನೊಂದು ! | Oneindia Kannada

ರಷ್ಯಾ ಸೇನಾ ಕಾರ್ಯಾಚರಣೆಯನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖಂಡಿಸಿದ್ದಾರೆ. ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ಪ್ರಾರಂಭಿಸುವ ಮೂಲಕ ಪುಟಿನ್ ರಕ್ತಪಾತ ಮತ್ತು ವಿನಾಶದ ಮಾರ್ಗ ಆರಿಸಿಕೊಂಡಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

English summary
South Korea will join international economic sanctions against Russia over its "armed invasion" of Ukraine, President Moon Jae-in said Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X