ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪುರಸ್ಕೃತ ದಕ್ಷಿಣ ಆಫ್ರಿಕಾದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ನಿಧನ

|
Google Oneindia Kannada News

ಜೋಹಾನ್ಸ್ ಬರ್ಗ್, ಡಿಸೆಂಬರ್ 26: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಕ್ಷಿಣ ಆಫ್ರಿಕಾದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರು ಇಂದು ನಿಧನರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿ ವಿರುದ್ಧ ಹೋರಾಟ ಮಾಡಿದವರಲ್ಲಿ ಟುಟು ಅಗ್ರಗಣ್ಯರಾಗಿದ್ದರು. 90ನೇ ವಯಸ್ಸಿನಲ್ಲಿ ಕೇಪ್ ಟೌನ್ ನಿವಾಸದಲ್ಲಿ ನಿಧನರಾದರು ಎಂದು ಅಧ್ಯಕ್ಷ ಸಿರಿಲ್ ರಮಾಫೋಸಾ ಹೇಳಿದ್ದಾರೆ.

ಸಾಮಾಜಿಕ ಹೋರಾಟ, ಕಪ್ಪುವರ್ಣೀಯರ ಮೇಲೆ ಸವರ್ಣೀಯರ ದಬ್ಬಾಳಿಕೆಯನ್ನು ಎದುರಿಸಿ ಟುಟು ನಡೆಸಿದ ಹೋರಾಟವನ್ನು ಮನ್ನಿಸಿ ಅವರಿಗೆ 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ದೊರೆತಿದೆ. ವರ್ಣಭೇದ ನೀತಿ ಅಂತ್ಯವಾದರೂ ದಕ್ಷಿಣ ಆಫ್ರಿಕಾದಲ್ಲಿ ಆಡಳಿತದಲ್ಲಿನ ಅಸಮಾನತೆ, ಅನ್ಯಾಯಗಳನ್ನು ಕಟು ವಾಗಿ ಟುಟು ಟೀಕಿಸಿದ್ದರು.

Tutu was one of the harshest critics of South Africas apartheid

ನೆಲ್ಸನ್ ಮಂಡೇಲಾ ಅವರ ಜೊತೆಗೂಡಿ ಅಲ್ಪಸಂಖ್ಯಾತ ಬಿಳಿಯರಿಂದ ಆಗುತ್ತಿದ್ದ ಅನ್ಯಾಯದ ವಿರುದ್ಧ ದನಿಯೆತ್ತಿದ್ದರು. ಆಂಗ್ಲ ಮೂಲದ ದಕ್ಷಿಣ ಆಫ್ರಿಕಾದ ಮೊದಲ ಕಪ್ಪುವರ್ಣೀಯ ಆರ್ಚ್ ಬಿಷಪ್ ಎಂದೆನಿಸಿಕೊಂಡಿದ್ದ ಟುಟು ಅವರು ದೇಶಭಕ್ತರಾಗಿ ಸಮಾನ ಹಕ್ಕು ಹೋರಾಟಗಾರರಾಗಿ ಸದಾ ಸ್ಮರಣೀಯ ಎಂದು ಅಧ್ಯಕ್ಷ ರಮಾಫೋಸಾ ಸ್ಮರಿಸಿದ್ದಾರೆ.

"ಆರ್ಚ್‌ಬಿಷಪ್ ಎಮೆರಿಟಸ್ ಡೆಸ್ಮಂಡ್ ಟುಟು ಅವರ ನಿಧನವು ನಮ್ಮ ರಾಷ್ಟ್ರದ ವಿದಾಯದಲ್ಲಿ ಮತ್ತೊಂದು ಅಧ್ಯಾಯವಾಗಿದ್ದು, ವಿಮೋಚನೆಗೊಂಡ ದಕ್ಷಿಣ ಆಫ್ರಿಕಾವನ್ನು ನಮಗೆ ನೀಡಿದ ಅತ್ಯುತ್ತಮ ದಕ್ಷಿಣ ಆಫ್ರಿಕನ್ನರ ಪೀಳಿಗೆಗೆ ವಿದಾಯ ಹೇಳುತ್ತದೆ" ಎಂದು ಅಧ್ಯಕ್ಷ ಸಿರಿಲ್ ರಾಮಾಫೋಸಾ ಹೇಳಿದರು.

ಟುಟುಗೆ 1990 ರ ದಶಕದ ಉತ್ತರಾರ್ಧದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಹಲವಾರು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

Recommended Video

2021ರಲ್ಲಿ ಟ್ವೀಟ್ ಮೂಲಕ ಹೆಚ್ಚು ಸದ್ದು ಮಾಡಿದ ಟ್ವೀಟ್ ಗಳಿವು | Oneindia Kannada

"ಅಂತಿಮವಾಗಿ, 90 ನೇ ವಯಸ್ಸಿನಲ್ಲಿ, ಅವರು ಇಂದು ಬೆಳಿಗ್ಗೆ ಕೇಪ್ ಟೌನ್‌ನಲ್ಲಿರುವ ಓಯಸಿಸ್ ಫ್ರೈಲ್ ಕೇರ್ ಸೆಂಟರ್‌ನಲ್ಲಿ ಶಾಂತಿಯುತವಾಗಿ ನಿಧನರಾದರು" ಎಂದು ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಐಪಿ ಟ್ರಸ್ಟ್‌ನ ಹಂಗಾಮಿ ಅಧ್ಯಕ್ಷೆ ಮತ್ತು ಆರ್ಚ್‌ಬಿಷಪ್ ಕಚೇರಿಯ ಸಂಯೋಜಕ ಡಾ. ಟುಟು ಕುಟುಂಬದ ಪರವಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

English summary
Anglican Archbishop Desmond Tutu was a key ally to Nelson Mandela in their fight against apartheid in South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X