ಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆ

Subscribe to Oneindia Kannada

ವಾಷಿಂಗ್ಟನ್, ನವೆಂಬರ್ 25: ಸೌರ ಮಂಡಲದೊಳಗೆ ಹೊಸ ಅತಿಥಿಯ ಆಗಮನವಾಗಿದೆ. ಆತನಿಗೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- 'ನಾಸಾ'ದ ವಿಜ್ಞಾನಿಗಳು ಇಟ್ಟ ಹೆಸರು ಕ್ಷುದ್ರಗ್ರಹ 1I/2017 U1 ಅಥವಾ 'Oumuamua (ಒಮುಮಾಮುವಾ). ಒಮುಮಾಮುವಾ ಅಂದರೆ ಹವಾಯಿ ಭಾಷೆಯಲ್ಲಿ 'ಬಲು ದೂರದಿಂದ ಬಂದ ಚೊಚ್ಚಲ ಸಂದೇಶ.'

ಈತನ ವಿಶೇಷ ಏನು ಗೊತ್ತಾ, ಈತ ವಿಜ್ಞಾನಿಗಳಿಗೆ ಗೊತ್ತಿರುವ ಹಾಗೆ ನಮ್ಮ ಸೌರ ಮಂಡಲದೊಳಕ್ಕೆ ಬೇರೆ ಸೌರ ಮಂಡಲದಿಂದ ಬಂದ ಮೊದಲ ಅತಿಥಿ. ಈ ಕಾರಣಕ್ಕೆ ವಿಜ್ಞಾನಿಗಳ ಅಚ್ಚರಿಯ ಕಣ್ಣಿಗೆ ಈತ ಆಹಾರವಾಗಿದ್ದಾನೆ.

ನಾಸಾ ಉಪಗ್ರಹ ಸೆರೆ ಹಿಡಿದ ದೆಹಲಿ ವಾಯು ಮಾಲಿನ್ಯದ ಭೀಕರ ಚಿತ್ರಗಳು

ಅಕ್ಟೋಬರ್ 19ರಂದು ಈತನನ್ನು ಹವಾಯಿಯಲ್ಲಿರುವ PAN STARRS1 ದೂರದರ್ಶಕದ ಮೂಲಕ ಪತ್ತೆ ಹಚ್ಚಲಾಯಿತು. ಅಲ್ಲಿಂದ ವಿಜ್ಞಾನಿಗಳು ಈತನ ಬಗ್ಗೆ ತುಂಬಾ ಅಧ್ಯಯನಗಳನ್ನು ನಡೆಸಿದ್ದಾರೆ. ಇನ್ನೂ ನಡೆಸುತ್ತಲೇ ಇದ್ದಾರೆ.

ಮಹತ್ವದ ಸಂಶೋಧನೆ

ಮಹತ್ವದ ಸಂಶೋಧನೆ

ಈತ ನಡೆದು ಬಂದ ದಾರಿ, ವೇಗ ನೋಡಿ ವಿಜ್ಞಾನಿಗಳು ಹೊರಗಿನ ಸೌರ ಮಂಡಲದಿಂದ ಈತ ನಮ್ಮ ಸೌರ ಮಂಡಲದೊಳಕ್ಕೆ ಗಡಿ ದಾಟಿ ಬಂದಿದ್ದಾನೆ ಎಂದು ವಿಶ್ಲೇಷಿಸಿದ್ದಾರೆ. ಹಾ.. ಅಷ್ಟೇ ಅಲ್ಲ ವೈಜ್ಞಾನಿಕವಾಗಿ ಇದೊಂದು ಮಹತ್ವದ ಸಂಶೋಧನೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ವಿಚಿತ್ರ ಆಕಾರ

ವಿಚಿತ್ರ ಆಕಾರ

ಬೇರೆ ಸೌರ ಮಂಡಲದಿಂದ ಪ್ರತ್ಯೇಕಗೊಂಡು, ಸಾವಿರಾರು ವರ್ಷ ಕ್ರಮಿಸಿ ಈತ ನಮ್ಮ ಸೌರ ಮಂಡಲದೊಳಗೆ ಬಂದಿದ್ದಾನೆ. 400 ಮೀಟರ್ ಉದ್ದ, 40 ಮೀಟರ್ ನಷ್ಟು ಅಗಲವಾಗಿರುವ ವಸ್ತು ಈತನಾಗಿದ್ದು, ವಿಚಿತ್ರ ಆಕಾರದಲ್ಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಗಿಲ್ಲ ಸಮಸ್ಯೆ

ಭೂಮಿಗಿಲ್ಲ ಸಮಸ್ಯೆ

ನಮ್ಮ ಸೌರ ಮಂಡಲದಲ್ಲಿರುವ ಕ್ಷುದ್ರ ಗ್ರಹಗಳಿಗಿಂತ ಈತ ಭಿನ್ನನಾಗಿದ್ದು, ಈತನಿಂದ ಭೂಮಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವಿಜ್ಞಾನಿಗಳ ಹೇಳಿಕೆ.

ಈತ ಕೆಂಪು ಬಣ್ಣದಲ್ಲಿದ್ದಾನೆ. ದೀರ್ಘ ಕಾಲ ಸೌರ ಮಂಡಲದಲ್ಲಿದ್ದು, ಬಹುಶಃ ನಮ್ಮ ಸೂರ್ಯ ಮತ್ತು ಬೇರೆ ಸೌರ ಮಂಡಲದ ಸೂರ್ಯನ ಬೆಳಕಿನಿಂದ ಹಾಗಾಗಿರಬಹುದು ಎನ್ನುವುದು ವಿಜ್ಞಾನಿಗಳ ಅಂಬೋಣ. ಆದರೆ ಈತನ ಗಾತ್ರದ ಬಗ್ಗೆ ವಿಜ್ಞಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು ಈ ಗಾತ್ರ ಹೇಗೆ ಬಂತು ಎಂದು ಅಧ್ಯಯನ ನಡೆಸುತ್ತಿದ್ದಾರೆ.

ಮುಂದುವರಿದ ಅಧ್ಯಯನ

ಸ್ಪಿಟ್ಜರ್, ಹಬಲ್ ಸ್ಪೇಸ್ ಟೆಲಿಸ್ಪೋಪ್ ಮೊದಲಾದುವನ್ನು ಆತನತ್ತ ತಿರುಗಿಸಿ ಗಾತ್ರ, ರಚನೆಯ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದಾರೆ.

ಸದ್ಯಕ್ಕಿಷ್ಟು ಮಾಹಿತಿಗಳು ಸಿಕ್ಕಿವೆ. ಮುಂದೆ ಯಾವ ಮಾಹಿತಿಗಳು ಸಿಗುತ್ತವೆ ನೋಡೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Astronomers recently scrambled to observe an intriguing asteroid that zipped through the solar system on a steep trajectory from interstellar space—the first confirmed object from another star.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ