ರಾಹುಲ್ ಸೊಂಟ ಬಳಸಿರುವ ಈ ಸುರಸುಂದರಿ ಯಾರು?

ಬೆಂಗಳೂರು, ಸೆ. 21: ಇಟಲಿಯಲ್ಲಿರುವ ಅಜ್ಜಿ ನೋಡಲು ವಿದೇಶಕ್ಕೆ ಹಾರಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಗೆ ಯುಎಸ್ ಪ್ರವಾಸ ಕೈಗೊಂಡಿದ್ದು ಭಾರಿ ಚರ್ಚೆಯಾಗುತ್ತಿದೆ. ಯುಎಸ್ ನಲ್ಲಿ ರಾಹುಲ್ ಭಾಷಣದ ಜತೆಗೆ ನಟಿಯೊಬ್ಬರೊಂದಿಗಿನ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳ ಟ್ರೆಂಡಿಂಗ್ ಚರ್ಚೆ ವಿಷಯ.

ಎರಡು ವಾರ ಕಾಲ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರು ಸ್ಪಾನೀಷ್ ನಟಿ ನಥಾಲಿಯಾ ರಮೋಸ್ ಜತೆ ಇರುವ ಫೋಟೋ ಈಗ ವೈರಲ್ ಆಗಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಥಾಲಿಯಾ ಅಪ್​ಲೋಡ್​ ಮಾಡಿದ್ದಾರೆ. ಜತೆಗೆ ಇಂಥ ಮಹಾನ್ ವ್ಯಕ್ತಿಯ ಭೇಟಿಗೆ ಅವಕಾಶ ಸಿಕ್ಕಿದ್ದಕ್ಕಾಗಿ ಧನ್ಯಳಾಗಿದ್ದೇನೆ. ಒಳನೋಟವುಳ್ಳ ರಾಹುಲ್ ಹಾಗೂ ಇತರೆ ವಿಶಿಷ್ಟ ವ್ಯಕ್ತಿಗಳ ​ಜತೆ ರಾತ್ರಿ ಕಳೆದಿದ್ದು ಸಾರ್ಥಕ ಎಂಬರ್ಥದಲ್ಲಿ ಟ್ವೀಟ್​ ಮಾಡಿದ್ದಾರೆ.

ನಾನಾ ಭಾಗಗಳ ಚಿಂತಕ ಹಾಗೂ ಮೇಧಾವಿಗಳೊಂದಿಗೆ ಭೇಟಿ ಮಾಡುವ ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ ಎಂದೂ ನಟಿ ನಥಾಲಿಯಾ ರಾಮೋಸ್ ಎಂದೂ ನಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.

ರಾಹುಲ್​ ಗಾಂಧಿಯ ಕಾಲೆಳೆಯುತ್ತಿದ್ದಾರೆ

ರಾಹುಲ್​ ಗಾಂಧಿಯ ಕಾಲೆಳೆಯುತ್ತಿದ್ದಾರೆ

ಯುಎಸ್ ನಲ್ಲಿ ರಾಹುಲ್ ಭಾಷಣದ ಜತೆಗೆ ನಟಿ ನಥಾಲಿಯಾ ರಮೋಸ್ ಇರುವ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳ ಟ್ರೆಂಡಿಂಗ್ ಚರ್ಚೆ ವಿಷಯ. ಎಲ್ಲರೂ ಕುತೂಹಲದಿಂದ ಯಾರೀಕೆ? ಇಲ್ಯಾಕೆ ಈ ರೀತಿ ರಾಹುಲ್ ರನ್ನು ಹೊಗಳಿ ಬರೆದಿದ್ದಾಳೆ ಎಂದು ಪ್ರಶ್ನಿಸಿದ್ದಾರೆ

ಯಾರೀಕೆ ನಥಾಲಿಯಾ?

ಯಾರೀಕೆ ನಥಾಲಿಯಾ?

ನಥಾಲಿಯಾ ನೋರ್ಹಾ ರಮೋಸ್ ಕೊಹೆನ್ -ಸ್ಪಾನೀಷ್ -ಆಸ್ಟ್ರೇಲಿಯಾ ದಂಪತಿಯ ಪುತ್ರಿ, ಸದ್ಯ ಯುಎಸ್ ಪೌರತ್ವ ಹೊಂದಿರುವ ನಟಿ. 2007ರಲ್ಲಿ ಬ್ರಾತ್ಜ್ ಚಿತ್ರದಲ್ಲಿ ಯಾಸ್ಮಿನ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದವರು. ಹಲವು ಟಿವಿ ಸರಣಿಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ನಥಾಲಿಯಾ ಮಾಡಿದ ಟ್ವೀಟ್

ರಾಹುಲ್ ಗಾಂಧಿ ಜತೆಗಿನ ಚಿತ್ರ ಹಾಕಿ ನಥಾಲಿಯಾ ಅವರು ಸೆ. 14ರಂದು ಮಾಡಿದ ಟ್ವೀಟ್ ಇಲ್ಲಿದೆ.

ರಾಹುಲ್ ಹಿಂದೆ ಬೀಳಬೇಡಿ

ಅಯ್ಯೋ! ರಾಹುಲ್ ಹಿಂದೆ ಬೀಳಬೇಡಿ ಮೇಡಂ, ರಾಹುಲ್ ಗಾಂಧಿ ಬಳಿ ಹಣವಿಲ್ಲ ಎಂದು ಟ್ವೀಟ್ ಮಾಡಿದ ಸಾರ್ವಜನಿಕರು.

ಏನೈತಿ ಒಳಗೆ ಏನೈತಿ

ರಾಹುಲ್ ಬಗ್ಗೆ ಟ್ವೀಟ್ ಹಾಗೂ ಇನ್ ಸ್ಟಾ ಗ್ರಾಮ್ ನಲ್ಲಿ ಪುರಾಣ ಬರೆದಿರುವ ನಥಾಲಿಯಾ ರನ್ನು ವಿವಿಧ ರೀತಿಯಲ್ಲಿ ಪ್ರಶ್ನಿಸಿದ್ದಾರೆ. insights ಎಂದರೆ ಏನು ಅಂಥದ್ದು ಏನು ನಿಮಗೆ ಹೇಳಿಕೊಟ್ಟರು ಎಂದು ಕೇಳಿದ್ದಾರೆ.

ಕುಟುಂಬ ರಾಜಕೀಯ ಬಗ್ಗೆ

ಕುಟುಂಬ ರಾಜಕೀಯದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಬಗ್ಗೆ ಕಾಲೆಯುತ್ತಿರುವ ಮಂದಿ, ನಥಾಲಿಯಾ ಅವರಿಗೆ ಮುಂದಿನ ಭಾರತದ ಪ್ರಧಾನಿ ಯಾರಾಗಬಹುದು ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+