• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಮ್ರಾನ್ ಖಾನ್ ಗೆ ಹಾವಿನ ಚರ್ಮದ ಪಾದರಕ್ಷೆ ಉಡುಗೊರೆಗೆ ತಯಾರಿ, ದಂಡ ಜಡಿದ ಅಧಿಕಾರಿಗಳು

By ಅನಿಲ್ ಆಚಾರ್
|

ಈದ್-ಉಲ್-ಫಿತ್ರ್ (ರಮ್ಜಾನ್)ನ ಉಡುಗೊರೆಯಾಗಿ ಪ್ರಧಾನಿ ಇಮ್ರಾನ್ ಖಾನ್ ಗೆ ನೀಡಲು ಹೆಸರಾಂತ ಪಾಕಿಸ್ತಾನಿ ಶೂ ತಯಾರಕನೊಬ್ಬ ಹಾವಿನ ಚರ್ಮದಲ್ಲಿ ಪಾದರಕ್ಷೆ ತಯಾರಿಸಿದ್ದು, ಪಾಕಿಸ್ತಾನ ವನ್ಯಜೀವಿ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಅಧಿಕಾರಿಗಳು ಆತನಿಂದ ಅದನ್ನು ವಶಪಡಿಸಿಕೊಂಡಿದ್ದಾರೆ. ಆ ನಂತರ ಐವತ್ತು ಸಾವಿರ ರುಪಾಯಿಗಳ ದಂಡ ಪಾವತಿಸಿ, ಶೂ ತಯಾರಕ ವಾಪಸು ಪಡೆದುಕೊಂಡಿದ್ದಾನೆ.

ಪೇಶಾವರ ನಗರದ ಒಳಭಾಗದಲ್ಲಿರುವ ಜಹಾಂಗೀರ್ ಪುರದ ಬಜಾರ್ ನಲ್ಲಿ ನೂರುದ್ದೀನ್ ಶಿಂವಾರಿ ಮಳಿಗೆ ಮೇಲೆ ಖೈಬರ್ ಪಂಖ್ತುವಾದ ವನ್ಯಜೀವಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹಾವಿನ ಚರ್ಮದಲ್ಲಿ ಮಾಡಿದ್ದ ಪಾದರಕ್ಷೆ ವಶಕ್ಕೆ ಪಡೆದಿದ್ದರು. ಇಂಥ ಪಾದರಕ್ಷೆಗಳನ್ನು 'ಕಪ್ತಾನ್ ಸ್ಪೆಷಲ್ ಚಪ್ಪಲ್ಸ್' ಎಂದು ಕರೆಯಲಾಗುತ್ತದೆ.

ಈ ಹಾವಿನ ಚರ್ಮದ ಪಾದರಕ್ಷೆಗಳನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ನೀಡಲು ಆ ಶೂ ತಯಾರಕ ಬಯಸಿದ್ದ. ಎರಡು ಜತೆ ಇಂಥ ಪಾದರಕ್ಷೆ ತಯಾರಿಸಲು ಅಮೆರಿಕದಿಂದ ಈ ಹಾವಿನ ಚರ್ಮ ಕಳುಹಿಸಲಾಗಿತ್ತಂತೆ. ಒಂದು ಜೊತೆ ದಾನಿಗೆ ಹಾಗೂ ಮತ್ತೊಂದು ಜತೆ ಇಮ್ರಾನ್ ಖಾನ್ ಗೆ.

ಜಿಲ್ಲಾ ಅರಣ್ಯಾಧಿಕಾರಿ ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಹೋಗಿ ಪಾದರಕ್ಷೆಗಳನ್ನು ತೋರಿಸಲು ಕೇಳಿದ್ದಾರೆ. ಆ ನಂತರ ಅದನ್ನು ವಶಪಡಿಸಿಕೊಂಡು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆ ನಂತರ ಐವತ್ತು ಸಾವಿರ ರುಪಾಯಿ ದಂಡ ಪಾವತಿಸಿ, ಈ ರೀತಿ ಪ್ರಾಣಿ ಚರ್ಮದಿಂದ ಮತ್ತೆ ಪಾದರಕ್ಷೆ ತಯಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಮೇಲೆ ಶಿಂವಾರಿಗೆ ಹಿಂತಿರುಗಿದಲಾಗಿದೆ.

"ನನಗೆ ಪಾದರಕ್ಷೆ ಹಿಂತಿರುಗಿಸಲಾಗಿದೆ. ಈದ್ ಉಲ್ ಫಿತ್ರ್ ನ ಉಡುಗೊರೆಯಾಗಿ ಇಮ್ರಾನ್ ಖಾನ್ ಅವರಿಗೆ ಇದನ್ನು ನೀಡುತ್ತೇನೆ'' ಎಂದು ನೂರುದ್ದೀನ್ ಹೇಳಿದ್ದಾಗಿ ಡಾನ್ ನ್ಯೂಸ್ ಟಿವಿ ವರದಿ ಮಾಡಿದೆ.

English summary
Snake skin sandal to Pakistan PM Imran Khan as Eid gift made by famous shoe maker of Peshawar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X