ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕೇ?: ಟ್ವಿಟರ್‌ನಲ್ಲಿಯೇ ಸಮೀಕ್ಷೆ ಆರಂಭಿಸಿದ ಎಲಾನ್‌ ಮಸ್ಕ್‌

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್‌ 19: ಟ್ವಿಟರ್‌ ಅನ್ನು ಖರೀದಿ ಮಾಡಿದ ಉದ್ಯಮಿ ಎಲಾನ್‌ ಮಸ್ಕ್‌ ಹಲವು ಬದಲಾವಣೆಗಳು ಮಾಡಿದ್ದಾರೆ. ಇದು ಟ್ವಿಟರ್‌ ಸಂಸ್ಥೆ ಕೋಲಾಹಲವನ್ನೇ ಉಂಟುಮಾಡಿದೆ. ಟ್ವಿಟರ್‌ನಲ್ಲಿ ಜಾರಿಯಾದ ಹೊಸ ನೀತಿಗಳ ಪರಿಣಾಮ ಹಲವರು ನೌಕರಿ ತೊರೆದಿದ್ದಾರೆ, ಇನ್ನು ಹಲವರನ್ನು ಸಂಸ್ಥೆಯೇ ತೆಗೆದುಹಾಕಿದೆ. ಇದು ಜಗತ್ತಿನಾದ್ಯಂತ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

ಟ್ವಿಟರ್‌ನಲ್ಲಾದ ಬದಲಾವಣೆಗಳಿಂದ ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ. ಇದು ಕಂಪನಿಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ ಎಂದು ಸ್ವತಃ ಎಲಾನ್ ಮಸ್ಕ್‌ ಹೇಳಿದ್ದಾರೆ. ಇದರಿಂದ ಬೇಸತ್ತಿರುವ ಮಸ್ಕ್‌ ಟ್ವಿಟರ್‌ನಲ್ಲಿಯೇ ಸಮೀಕ್ಷೆಯೊಂದನ್ನು ಆರಂಭಿಸಿದ್ದಾರೆ.

'ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ?' ಎಂದು ಲಕ್ಷಾಂತರ ಟ್ವಿಟರ್‌ ಬಳಕೆದಾರರನ್ನು ಪ್ರಶ್ನಿಸಿದ್ದಾರೆ.

Should I Step Down?: Elon Musk Starts New Twitter Poll

ಈ ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದು ಮಸ್ಕ್ ತಿಳಿಸಿದ್ದಾರೆ.

ಮುಂದಿನ ಪ್ರಮುಖ ನೀತಿ ಬದಲಾವಣೆಗಳಿಗಾಗಿ ಸಮೀಕ್ಷೆ ನಡೆಯಲಿದೆ. ನಾನು ಬಳಕೆದಾರರಿಗೆ ಕ್ಷೆಮ ಯಾಚಿಸಲಿದ್ದೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Facebook, Instagram ಮತ್ತು Mastodon ಸೇರಿದಂತೆ ಇತರ ನಿರ್ದಿಷ್ಟ ಸಾಮಾಜಿಕ ಮಾಧ್ಯಮಗಳನ್ನು ಪ್ರಚಾರ ಮಾಡಲು ಬಳಸುವ ಖಾತೆಗಳನ್ನು ನಿಷೇಧಿಸುವುದಾಗಿ ಟ್ವಿಟರ್‌ ಭಾನುವಾರ ಘೋಷಿಸಿದೆ. ಇದಾದ ನಂತರ, ಎಲಾನ್‌ ಮಸ್ಕ್‌ ಸಮೀಕ್ಷೆ ಆರಂಭಿಸಿದ್ದಾರೆ.

'ನಮ್ಮ ಅನೇಕ ಬಳಕೆದಾರರು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೂ, ನಾವು ಇನ್ನು ಮುಂದೆ ಟ್ವಿಟರ್‌ನಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಉಚಿತ ಪ್ರಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಟ್ವಿಟರ್‌ ಹೇಳಿಕೊಂಡಿದೆ.

'ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ತೆರೆಯಲಾಗಿರುವ ಖಾತೆಗಳನ್ನು ತೆಗೆದುಹಾಕುತ್ತೇವೆ. ಕೆಳಗಿನ ಪ್ಲಾಟ್‌ಫಾರ್ಮ್‌ಗಳ ಲಿಂಕ್‌ಗಳು ಅಥವಾ ಬಳಕೆದಾರರ ಹೆಸರುಗಳನ್ನು ಒಳಗೊಂಡಿರುವ ಖಾತೆಗಳನ್ನು ತೆಗೆದುಹಾಕುತ್ತೇವೆ: Facebook, Instagram, Mastodon, Truth Social, Tribel, Nostr ಮತ್ತು Post' ಎಂದು ಟ್ವಿಟರ್‌ ತಿಳಿಸಿದೆ

Should I Step Down?: Elon Musk Starts New Twitter Poll

ಇದಲ್ಲದೆ, ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಿಂದ ಕ್ರಾಸ್-ಪೋಸ್ಟ್ ಮಾಡಲು ಅನುಮತಿ ನೀಡಲಾಗಿದೆ ಎಂದು ಟ್ವಿಟರ್ ಹೇಳಿದೆ.

ಹಲವು ಪ್ರಮುಖ ಪತ್ರಕರ್ತರ ಖಾತೆಗಳನ್ನು ಟ್ವಿಟರ್‌ನಿಂದ ಅಮಾನತುಗಳಿಸಲಾಗಿದೆ. ಈ ವಿಚಾರವೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಹ ಎಲಾನ್‌ ಮಸ್ಕ್‌ ನಿರ್ಧಾರದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಿಂದ ಪತ್ರಕರ್ತರನ್ನು ಅಮಾನತುಗೊಳಿಸಿದ್ದಕ್ಕೆ ಗುಟೆರೆಸ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗುಟೆರೆಸ್‌ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

ವಾಕ್ ಸ್ವಾತಂತ್ರ್ಯದ ಜಾಗ ಎಂದು ಪ್ರತಿಪಾದಿಸುವ ವೇದಿಕೆಯಲ್ಲಿ ಮಾಧ್ಯಮದ ಧ್ವನಿಯನ್ನು ಮೌನಗೊಳಿಸಬಾರದು ಎಂದು ಅವರು ತಿಳಿಸಿದ್ದಾರೆ.

ವಿಶ್ವದಾದ್ಯಂತ ಪತ್ರಕರ್ತರು ಸೆನ್ಸಾರ್‌ಶಿಪ್, ಬೆದರಿಕೆಗಳು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕ್ರಮವು ಅಪಾಯಕಾರಿಯಾಗಿದೆ ಎಂದು ವಿಶ್ವಸಂಸ್ಥೆ ವಕ್ತಾರರು ಹೇಳಿದ್ದಾರೆ.

English summary
After making a flurry of policy changes on Twitter in the past few days, Twitter Chief Executive Officer Elon Musk has started a poll on the microblogging website asking millions of users "should I step down as head of Twitter?",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X