ನೀವು ಕುಳ್ಳಗಿದ್ದರೆ ನಿಮಗೆ ಟೈಪ್2 ಮಧುಮೇಹ ರಿಸ್ಕ್ ಜಾಸ್ತಿಯಂತೆ
ಲಂಡನ್, ಸೆ. 11: ಡಯಬಿಟೊಲೊಜಿಯಾ ಎಂಬ ವಿಜ್ಞಾನ ಬರಹಗಳ ಸಂಗ್ರಹದಲ್ಲಿ ಒಂದು ಸಂಶೋಧನಾ ಲೇಖನ ಬಂದಿದೆ. ಇದರ ಪ್ರಕಾರ ಇತ್ತೀಚಿನ ಸಂಶೋಧನೆ, ಸಮೀಕ್ಷೆಯಂತೆ ಕುಳ್ಳಗಿರುವ ಪುರುಷ ಅಥವಾ ಮಹಿಳೆಯರಿಗೆ ಟೈಪ್ 2 ಮಧುಮೇಹ ಬರುವ ರಿಸ್ಕ್ ಜಾಸ್ತಿ ಎಂದು ತಿಳಿದು ಬಂದಿದೆ.
ಸಂಶೋಧಕರ ಪ್ರಕಾರ, ಕುಳ್ಳಗಿರುವವರಲ್ಲಿ ಪಿತ್ತಜನಕಾಂಗದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಶೇಖರವಾಗಿರುತ್ತದೆ. ಕಾರ್ಡಿಯೋ-ಮೆಟಬೊಲಿಕ್ ರಿಸ್ಕ್ ಹೆಚ್ಚಾಗಿರುತ್ತದೆ ಹೀಗಾಗಿ, ಎತ್ತರವಾಗಿರುವವರಿಗಿಂತ ಕುಳ್ಳಗಿರುವವರಲ್ಲಿ ಟೈಪ್ 2 ಡಯಾಬಿಟಿಸ್ ಅಪಾಯ ಹೆಚ್ಚಾಗಿದೆ ಎಂದು ಜರ್ಮನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ನ್ಯೂಟ್ರಿಷನ್ ನ ಸಂಶೋಧಕರು ಹೇಳಿದ್ದಾರೆ.
ವ್ಯಕ್ತಿಗಳ ವಯಸ್ಸು, ಜೀವನ ಶೈಲಿ, ಶಿಕ್ಷಣ, ಸೊಂಟದ ಸುತ್ತಳತೆ, ಬಯೋ ಮಾಸ್ ಇಂಡೆಕ್ಸ್ ಹೀಗೆ ಅನೇಕ ಅಂಶಗಳನ್ನು ಸಮೀಕ್ಷೆ ಸಂದರ್ಭದಲ್ಲಿ ಪರಿಗಣಿಸಲಾಗಿದ್ದು, ಪುರುಷರಲ್ಲಿ ಶೇ 41 ಹಾಗೂ ಮಹಿಳೆಯರಲ್ಲಿ ಶೇ33 ರಷ್ಟು ಹೆಚ್ಚು ರಿಸ್ಕ್ ಕಾಣಿಸಿಕೊಳ್ಳಬಹುದು. ಸ್ಥೂಲಕಾಯರಾಗಿದ್ದು ಪ್ರತಿ 10 ಸಿಎಂ ಅಧಿಕ ಎತ್ತರ ಹೊಂದಿದ್ದರೆ ಡಯಾಬಿಟಿಸ್ ರಿಸ್ಕ್ ಶೇ 36ರಷ್ಟು ಪುರುಷರಲ್ಲಿ ಹಾಗೂ ಶೇ 30ರಷ್ಟು ಮಹಿಳೆಯರಲ್ಲಿ ಕಡೀಮೆ ಎಂದು ವರದಿ ನೀಡಿದ್ದಾರೆ.

ಮಾನಸಿಕ ಒತ್ತಡ ಮಿತಿಮೀರಿದರೆ, ಸಿಟ್ಟು, ಆಕ್ರೋಶ, ಹತಾಶೆ ಮೊದಲಾದ ಭಾವನೆಗಳು ಎಲ್ಲೆ ಮೀರಿದರೆ, ಇಂತಹ ಮನಸ್ಥಿತಿ ಡಯಾಬಿಟಿಸ್ ಕಾಯಿಲೆಗೆ ಪ್ರಚೋದನೆ ನೀಡಬಹುದು. ಹೀಗಾಗಿ, ನಿಮ್ಮ ಎತ್ತರ ಎಷ್ಟೇ ಇರಲಿ, ದಿನ ನಿತ್ಯ ವ್ಯಾಯಾಮ ಅಗತ್ಯ ಎಂದು ಹೇಳಿದ್ದಾರೆ. ಪ್ರತಿನಿತ್ಯ ನಿಯಮಿತ ದರದಲ್ಲಿ ರೆಡ್ ವೈನ್ ಸೇವಿಸಿದ ಟೈಪ್ 2 ಡಯಾಬಿಟಿಸ್ ರೋಗಿಗಳು ಉತ್ತಮ ಸಮತೋಲಿತ ಆಹಾರ ಸೇವನೆ ಮೂಲಕ ಕಾರ್ಡಿಯೋಮೆಟಾಬಾಲಿಕ್ ತೊಂದರೆಯಿಂದ ಮುಕ್ತರಾಗಬಹುದು ಎಂದು ಈ ಹಿಂದೆ ಯುರೋಪಿಯನ್ ಸೈನ್ ಕಾಂಗ್ರೆಸ್ ನಲ್ಲಿ ವಿಜ್ಞಾನಿಗಳು ವಿಷಯ ಮಂಡನೆ ಮಾಡಿದ್ದರು.












Click it and Unblock the Notifications