ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇರಿಲ್ಯಾಂಡ್ ಶೂಟೌಟ್: ಟ್ರಂಪ್ ಗೆ ಟ್ವಿಟ್ಟಿಗರ ಮಂಗಳಾರತಿ!

|
Google Oneindia Kannada News

ಮೇರಿಲ್ಯಾಂಡ್, ಜೂನ್ 29: ಅಮೆರಿಕದ ಮೇರಿಲ್ಯಾಂಡ್ ನ ಕ್ಯಾಪಿಟಲ್ ಗೆಜೆಟ್ ದಿನಪತ್ರಿಕೆ ಕಚೇರಿಯಲ್ಲಿ ಸಂಭವಿಸಿದ ಶೂಟೌಟ್ ಗೆ ಐವರು ಬಲಿಯಾಗಿದ್ದು, ಈ ಘಟನೆಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಘಟನೆಯನ್ನ ಖಂಡಿಸಿ, ಮಡಿದವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಆದರೆ ಹಲವರು, ಟ್ರಂಪ್ ಅವರ ನೀತಿಗಳೇ ಇಂಥ ಹಿಂಸೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಜರೆದಿದ್ದಾರೆ.

ಅಮೆರಿಕದ ನ್ಯೂಸ್ ರೂಂ ನಲ್ಲಿ ಶೂಟೌಟ್: ಐವರು ಬಲಿಅಮೆರಿಕದ ನ್ಯೂಸ್ ರೂಂ ನಲ್ಲಿ ಶೂಟೌಟ್: ಐವರು ಬಲಿ

ಮೇರಿ ಲ್ಯಾಂಡ್ ನ ಅನ್ನಾಪೊಲಿಸ್ ನಲ್ಲಿರುವ 'ಕ್ಯಾಪಿಟಲ್ ಗೆಜೆಟ್' ಎಂಬ ವೃತ್ತಪತ್ರಿಕೆ ಕಚೇರಿಗೆ ಗನ್ ಮ್ಯಾನ್ ವೊಬ್ಬ ಹಠಾತ್ ಪ್ರವೇಶಿಸಿ ಗಾಜಿನ ಬಾಗಿಲು ಒಡೆದು ಗುಂಡು ಹಾರಿಸಿದ್ದಾನೆ. ಇದರಿಂದ ಸ್ಥಳದಲ್ಲೇ ಐವರು ಮೃತರಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಶಂಕಿತ ಜರೋಡ್ ವಾರೆನ್ ರಾಮೋಸ್ ಎಂಬ 38 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.

ಕೆಲ ವರ್ಷಗಳ ಹಿಂದೆ ಈ ವ್ಯಕ್ತಿ ಕ್ಯಾಪಿಟಲ್ ಗೆಜೆಟ್ ದಿನಪತ್ರಿಕೆಯ ಮೇಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಮತೆ ದಾವೆ ಹೂಡಿದ್ದರು ಎಂಬುದು ಇದೇ ಸಂದರ್ಭದಲ್ಲಿ ಬಯಲಾಗಿದೆ. ಘಟನೆ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆ ವಿನಾಶಕಾರಿ

ಪತ್ರಕರ್ತರು ಪ್ರಜಾಪ್ರಭುತ್ವವನ್ನು ಕಾಪಾಡುವಂತೆ, ಸಮಾನತೆ ಮೂಡಿಸುವಂತೆ ಬರೆಯುತ್ತಾರೆ. ಆದರೆ ತಮ್ಮ ವೃತ್ತಿಧರ್ಮ ಪಾಲಿಸುವ ಸಂದರ್ಭದಲ್ಲೇ ಪ್ರಾಣ ಕಳೆದುಕೊಳ್ಳುತ್ತಾರೆ. ಅನ್ನಾಪೊಲಿಸ್ ನಲ್ಲಿ ಇಂದು ನಡೆದ ಘಟನೆ ನಿಜಕ್ಕೂ ವಿನಾಶಕಾರಿ. ಎಲ್ಲಾ ಸಂತ್ರಸ್ಥರಿಗೂ ಅವರ ಕುಟುಂಬಕ್ಕೂ ನಮ್ಮ ಪ್ರಾರ್ಥನೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಟ್ವೀಟ್ ಮಾಡಿದ್ದಾರೆ.

ಕುಮ್ಮಕ್ಕು ನೀಡುತ್ತಿರುವವರ್ಯಾರು?

ಕ್ಯಾಪಿಟಲ್ ಗೆಜೆಟ್ ಉದ್ಯೋಗಿಗಳನ್ನು 'ಜನರ ಶತ್ರುಗಳು' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದ 108 ಗಂಟೆಗಳಲ್ಲಿ ಈ ಘಟನೆ ನಡೆದಿರುವುದು ದುರಂತವೇ ಸರಿ! ಈಗ ಹೇಳಿ ಇಂಧ ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವವರು ಯಾರು? ಎಂದು ಬ್ರಿಯಾನ್ ಕ್ರೆಸೆನ್ಸ್ಟಿಯನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಹಿಂಸೆಯನ್ನು ಪ್ರಚೋದಿಸುತ್ತಿರುವ ಟ್ರಂಪ್

ಅನ್ನಾಪೊಲಿಸ್ ಶೂಟೌಟ್ ನ ಶಂಕಿತ ಆರೋಪಿ ಜಾರೋಡ್ ವಾರೆನ್ ರಾಮೋಸ್ ಆರು ವರ್ಷದ ಹಿಂದೆ ಕ್ಯಾಪಿಟಲ್ ಗೆಜೆಟ್ ಪತ್ರಿಕೆ ಮೇಲೆ ದಾವೆ ಹೂಡಿ ಸೋತಿದ್ದ. ಬಹುಶಃ ಟ್ರಂಪ್ ಹಿಂಸೆಗೆ ಕುಮ್ಮಕ್ಕು ನೀಡುವವರೆಗೂ ಅವನು ಈ ಶೂಟೌಟ್ ಬಗ್ಗೆ ಯೋಚಿಸಿಯೇ ಇರಲಿಲ್ಲ. ಪತ್ರಕರ್ತರ ವಿರುದ್ಧ ದಿನೇ ದಿನೇ ಹೇಳಿಕೆ ನೀಡುತ್ತಿರುವ ಟ್ರಂಪ್ ಮಾತೇ ಅವರಿಗೆ ಪ್ರಚೋದನೆ ನೀಡಿದೆ. ಇದಕ್ಕಿಂತ ಹೀನಾಯ ಸ್ಥಿತಿ ಏನಿದೆ ಎಂದಿದ್ದಾರೆ ಪಾಲ್ಮರ್ ರಿಪೋರ್ಟ್.

ಟ್ರಂಪ್ ನಿಮ್ಮ ಪ್ರತಿಕ್ರಿಯೆ ಏನು?

ಮೇರಿಲ್ಯಾಂಡ್ ನ್ಯೂಸ್ ರೂಂ ಶೂಟೌಟ್ ನಲ್ಲಿ ಹತರಾದ ಐವರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಟ್ರಂಪ್ ಅವರೇ? ಅಥವಾ ಈ ಕುರಿತು ಮೌನವಾಗಿಯೇ ಇದ್ದುಬಿಡುವುದಕ್ಕೂ ಯಾರದ್ದಾದರೂ ಬಳಿ ಹಣ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ ಮೈಕೆಲ್ ಸ್ಕೊಲ್ನಿಕ್.

ಸ್ವಾರ್ಥಕ್ಕಾಗಿ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಟ್ರಂಪ್!

ಅಕಸ್ಮಾತ್ ಈ ಡೊನಾಲ್ಡ್ ಟ್ರಂಪ್ ಏನಾದರೂ ನನ್ನೆದುರು ನಿಂತು, ಅನ್ನಾಪೊಲಿಸ್ ದುರಂತದಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರೆ ಆಗ ನೋಡಿಕೊಳ್ಳುತ್ತಿದೆ. ಈ ಮನುಷ್ಯ ತನ್ನ ಸಾರ್ಥಕ್ಕಾಗಿ ಅಮೆರಿಕದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರುತ್ತಿದ್ದಾರೆ ಎಂದು ದೂರಿದ್ದೆ ಡೇವಿಡ್ ಸೈಮನ್.

English summary
5 killed, several others 'gravely injured' in shooting at newspaper building in Maryland, America. Many people condemns this barbaric incident. One suspect arrested. Here are twitter comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X