ಇರಾಕ್ : ಟ್ರಕ್ ಬಾಂಬ್ ದಾಳಿ, ಯಾತ್ರಾರ್ಥಿಗಳ ಮಾರಣಹೋಮ

Posted By:
Subscribe to Oneindia Kannada

ಬಾಗ್ದಾದ್, ಶುಕ್ರವಾರ 25 : ಇರಾಕ್ ನಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ 77ಕ್ಕೂ ಹೆಚ್ಚು ಶಿಯಾ ಯಾತ್ರಾರ್ಥಿಗಳು ಹತ್ಯೆಗೀಡಾಗಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಾಗ್ದಾದ್ ನಿಂದ 100 ಕಿ.ಮೀ. ದೂರದಲ್ಲಿರುವ ಹಿಲ್ಲಾ ಎಂಬ ಪ್ರದೇಶದಲ್ಲಿ ಪೆಟ್ರೋಲ್ ಸ್ಟೇಷನ್ ಮತ್ತು ಹೋಟೆಲ್ ಬಳಿ ದಾಳಿ ನಡೆದಿದ್ದು, ಇರಾನ್ ಮತ್ತು ಅಫಘಾನಿಸ್ತಾನದ ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ.

Shia pilgrims among 77 people killed in IS attack in Iraq

ಪುಣ್ಯಕ್ಷೇತ್ರ ಕರ್ಬಾಲಾದಲ್ಲಿ ಯಾತ್ರಾರ್ಥಿಗಳಿದ್ದ ನಾಲ್ಕು ಬಸ್ಸುಗಳು ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ ಎಂದು ಬಿಬಿಸಿ ವೆಬ್ ಸೈಟ್ ವರದಿ ಮಾಡಿದೆ.

ಸ್ಫೋಟಿಸಿದ ಟ್ರಕ್ ನಲ್ಲಿ ಅಮೋನಿಯಾ ನೈಟ್ರೇಟ್ ಮತ್ತು ಸ್ಫೋಟಕಗಳನ್ನು ತುಂಬಲಾಗಿದ್ದರಿಂದ ಭಾರೀ ಹಾನಿ ಸಂಭವಿಸಿದೆ. ಸ್ಫೋಟಕ್ಕೆ ಟ್ರಕ್ ಮತ್ತು ಬಸ್ ಛಿದ್ರಛಿದ್ರವಾಗಿವೆ. ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ಪೆಟ್ರೋಲ್ ಸ್ಟೇಷನ್ ಮತ್ತು ಹೋಟೆಲ್ ಗಳಿಗೆ ಕೂಡ ಹಾನಿಯಾಗಿದೆ.

ಇರಾಕ್ ನ ಉತ್ತರ ಭಾಗದಲ್ಲಿರುವ ಮೋಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಮೇಲೆ ಇರಾಕಿ ಸೈನಿಕರು ಮುಗಿಬಿದ್ದಿದ್ದಾರೆ. ಇದರ ಪ್ರತೀಕಾರವಾಗಿ ಉಗ್ರರು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shia pilgrims among 77 people killed in IS attack in Iraq
Please Wait while comments are loading...