ನೇಪಾಳದ 40ನೇ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೆಬಾ ಆಯ್ಕೆ
ಕಾಠ್ಮಂಡು, ಜೂನ್ 6: ಭಾರತದ ನೆರೆಯ ರಾಷ್ಟ್ರ ನೇಪಾಳದ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೆಬಾ ಆಯ್ಕೆಯಾಗಿದ್ದಾರೆ.
ಇಂದು ನೇಪಾಳದ ಸಂಸತ್ ಸದಸ್ಯರು ಶೇರ್ ಬಹದ್ದೂರ್ ದೆಬಾರನ್ನು ಪ್ರಧಾನಿ ಹುದ್ದೆಗೆ ಅವಿರೊಧವಾಗಿ ಆಯ್ಕೆ ಮಾಡಿದ್ದಾರೆ. ಅವರು ನೇಪಾಳಿ ಕಾಂಗ್ರೆಸಿನ ಅಧ್ಯಕ್ಷರೂ ಹೌದು.[ಅಧಿಕಾರ ಹಸ್ತಾಂತರಕ್ಕಾಗಿ ಪ್ರಧಾನಿ ಹುದ್ದೆ ತೊರೆದ ಪ್ರಚಂಡ!]

ನೇಪಾಳದ 40ನೇ ಪ್ರಧಾನಿಯಾಗಿ ದೆಬಾ ಅಧಿಕಾರ ಸ್ವೀಕರಿಸಲಿದ್ದಾರೆ. ಪುಷ್ಪ ಕಮಲ್ ದಹಲ್ ಪ್ರಚಂಡ ಮಾರ್ಚ್ 27ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ದೆಬಾ ಆಯ್ಕೆಯಾಗಿದ್ದಾರೆ.
593 ಸದಸ್ಯ ಬಲದ ನೇಪಾಳ ಸಂಸತ್ತಿನಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಲು 297 ಮತಗಳು ಅಗತ್ಯವಾಗಿತ್ತು. ನೇಪಾಳ ಕಾಂಗ್ರೆಸ್ ಮತ್ತು ಮಾವೋವಾದಿಗಳ ಮೈತ್ರಿಕೂಟ 287 ಸದಸ್ಯರನ್ನು ಹೊಂದಿದ್ದು, ಇತರ 21 ಇತರ ಸದಸ್ಯರು ಬೆಂಬಲ ಸೂಚಿಸಿದ್ದರು. ಇದರಿಂದ ದೆಬಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
70 ವರ್ಷದ ದೆಬಾ ಈ ಹಿಂದೆ 1995ರಿಂದ 1997, 2001-2002 ಮತ್ತು 2004-2005ರ ನಡುವೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications