shark attack: ಪ್ರವಾಸಿಗನನ್ನು ಕೊಂದು ತಿಂದ ಶಾರ್ಕ್, ತಂದೆ ಕಿರುಚಾಟ, ಗೆಳತಿ ಪ್ರಾಣಾಪಾಯದಿಂದ ಪಾರು-ವಿಡಿಯೋ
ಈಜಿಪ್ಟ್ ನ ಪ್ರಸಿದ್ಧ ರೆಸಾರ್ಟ್ ನಲ್ಲಿ ಅತ್ಯಂತ ನೋವಿನ ಘಟನೆಯೊಂದು ಬೆಳಕಿಗೆ ಬಂದಿದೆ. ಇದರ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿನ ಭಯಾನಕ ದೃಶ್ಯವನ್ನು ನೋಡಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. 23 ವರ್ಷದ ರಷ್ಯಾದ ಪ್ರವಾಸಿಗನನ್ನು ತನ್ನ ತಂದೆಯ ಮುಂದೆ ಈಜಿಪ್ಟ್ ನ ರೆಡ್ ಬೀಚ್ ರೆಸಾರ್ಟ್‌ನಲ್ಲಿ ಶಾರ್ಕ್ ವೊಂದು ಕೊಂದು ತಿಂದಿದೆ.
ಈ ದೃಶ್ಯ ಜನರಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ. ಮಗನನ್ನು ರಕ್ಷಿಸುವಂತೆ ತಂದೆ ಜೋರಾಗಿ ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಿ ಬಂದಿದೆ. ಆದರೆ ಕ್ಷಣಾರ್ದದಲ್ಲಿ ಶಾರ್ಕ್ ಆತನನ್ನು ತನ್ನ ತುತ್ತಾಗಿ ಮಾಡಿಕೊಂಡಿದೆ. ಶಾರ್ಕ್ ಅವನನ್ನು ಪದೇ ಪದೇ ನೀರಿಗೆ ಎಸೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆತ ಈಜಲು ಪ್ರಾರಂಭಿಸಿದಾಗ ಆತನನ್ನು ಶಾರ್ಕ್ ತನ್ನ ಕಡೆಗೆ ಎಳೆಯುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಹೀಗೆ ದೃಶ್ಯದಲ್ಲಿ ಸ್ವಲ್ಪ ಸಮಯದಲ್ಲೇ ಶಾರ್ಕ್ ಆತನ ಮೇಲೆ ದಾಳಿ ಮಾಡಿದೆ. ಅದರ ನಂತರ ಶಾರ್ಕ್ ಅವನನ್ನು ಕೊಂದು ತಿಂದು ಕಾಲ್ಕಿತ್ತಿದೆ.

Shark in question
— Nabila Jamal (@nabilajamal_) June 9, 2023
Moments before it was captured & killed by Egyptian authorities
Sad for the boy, but shark was only displaying it's primal instincts pic.twitter.com/ptPEmKsV4X
ತಂದೆ ಕಣ್ಣಮುಂದೆ ಮಗನನ್ನು ನುಂಗಿದ ಶಾರ್ಕ್
23 ವರ್ಷದ ವ್ಲಾದಿಮಿರ್ ಪೊಪೊವ್ ಗುರುವಾರ ಈಜಲು ಹೋಗಿದ್ದರು. ಆಗ ಹುಲಿ ಶಾರ್ಕ್ ಅವನನ್ನು ನೀರಿನಲ್ಲಿ ಕೊಂದಿದೆ. ಅಷ್ಟರಲ್ಲಿ ಆತನ ಗೆಳತಿಯ ಪ್ರಾಣ ಉಳಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪರಾರಿಯಾಗಿದ್ದಾಳೆ. ಪೊಪೊವ್ ಅವರ ತಂದೆ ಈ ಭೀಕರ ದಾಳಿಯನ್ನು ಬಹಳ ಹತ್ತಿರದಿಂದ ವೀಕ್ಷಿಸಿದ್ದಾರೆ. ಶಾರ್ಕ್ ಅವನನ್ನು ಹಿಡಿದಾಗ, ಅವರು ಕಿರುಚುತ್ತಾ ಅಳುತ್ತಾರೆ. ಆದರೆ ಆತನ ತಂದೆ ಕಣ್ಣ ಮುಂದೆ ಮಗನ ಪ್ರಾಣ ಹೋಗುತ್ತಿದ್ದರೂ ಆತನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಮಗ ಸಾಯುತ್ತಿರುವುದನ್ನು ಕಂಡು ತಂದೆ ಕುಸಿದುಬಿದ್ದಿದ್ದಾರೆ. ಸ್ವಲ್ಪ ಸಮಯದಲ್ಲೇ ಸಮುದ್ರದ ನೀರಿನ ಬಣ್ಣ ಕೆಂಪಾಗಿದೆ.
Shark in question
— Nabila Jamal (@nabilajamal_) June 9, 2023
Moments before it was captured & killed by Egyptian authorities
Sad for the boy, but shark was only displaying it's primal instincts pic.twitter.com/ptPEmKsV4X
ವಿಡಿಯೋ ಕಂಡು ಬೆಚ್ಚಿಬಿದ್ದ ಪ್ರವಾಸಿಗರು
ಪೊಪೊವ್ ಕೆಲವೇ ತಿಂಗಳುಗಳ ಹಿಂದೆ ತನ್ನ ತಂದೆಯೊಂದಿಗೆ ಪ್ರವಾಸಕ್ಕಾಗಿ ಈಜಿಪ್ಟ್ ನ ಪ್ರಸಿದ್ಧ ರೆಸಾರ್ಟ್‌ಯೊಂದಕ್ಕೆ ತೆರಳಿದ್ದರು. ಅಲ್ಲಿ ತನ್ನ ಸಂಗಾತಿ ಹಾಗೂ ತಂದೆಯೊಂದಿಗೆ ಬೋಟಿಂಗ್ ಹೋಗಿದ್ದರು. ಈ ವೇಳೆ ಈಜಾಡಲು ನೀರಿಗೆ ಇಳಿದಿದ್ದಾರೆ. ಈ ಸಮಯವನ್ನು ಶಾರ್ಕ್ ಕಾದು ಕುಳಿತಿತ್ತು. ಆದರೆ ಶಾರ್ಕ್ ದಾಳಿ ಮಾಡುವ ಬಗ್ಗೆ ನೀರಿಗಿಳಿದವರ ಗಮನಕ್ಕೆ ಬಂದಿದೆ. ನೀರಿಗಿಳಿದಿದ್ದ ತಂದೆ ಹಾಗೂ ಸಂಗಾತಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ ದುರಾದೃಷ್ಟವಶಾತ್ ಪೊಪೊವ್ ಅವರನ್ನು ರಕ್ಷಣೆ ಮಾಡಲು ಆಗಲೇ ಇಲ್ಲ. ಬೋಟ್‌ನಿಂದ ದೂರದಲ್ಲಿದ್ದ ಪೊಪೊವ್ ಹತ್ತಿರಕ್ಕೆ ಶಾರ್ಕ್ ಸಾಗಿತ್ತು.
Russian man devoured by a tiger shark in Egypt, people watched as the terrible event unfolded.
— Daily Loud (@DailyLoud) June 9, 2023
“It’s eating his remains now,” one eyewitness said. pic.twitter.com/UdSvMcIX1o
ಪ್ರವಾಸಿಗರನ್ನು ಹೊತ್ತ ಮೂರು ಬೋಟ್‌ಗಳು ಆತನ ಸುತ್ತ ಇರುವುದು ವಿಡಿಯೋದಲ್ಲಿ ಕಾಣಬಹುದು. ಆದರೂ ಆತನ ರಕ್ಷಣೆ ಮಾಡುವುದು ಸಾಧ್ಯವಾಗಲಿಲ್ಲ. ಆತನನ್ನು ಸುತ್ತುವರೆದ ಶಾರ್ಕ್ ಆತನನ್ನು ನೀರಿನೊಳಗೆ ಎಳೆದಿದೆ. ಆತನು ಸಹಾಯಕ್ಕಾಗಿ ಒಂದೆರಡು ಬಾರಿ ನೀರಿನಿಂದ ಮೇಲೆಕ್ಕೆ ಏಳಿತ್ತಾನಾದರೂ ಶಾರ್ಕ್ ಆತನನ್ನು ನೀರಿನೊಳಗೆ ಎಳೆಯುತ್ತದೆ. ಕೊನೆಗೆ ಶಾರ್ಕ್ ಆತನನ್ನು ನುಂಗಿ ಹೋಗುವುದು ಕ್ಯಾಮಾರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ರೆಸಾರ್ಟ್‌ನ ಜೀವರಕ್ಷಕ ಸೇರಿದಂತೆ ಕೆಲವು ವೀಕ್ಷಕರು ಅವರನ್ನು ರಕ್ಷಿಸಲು ಧಾವಿಸಿದರು ಎಂದು ವರದಿಗಳು ತಿಳಿಸಿವೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಶಾರ್ಕ್ ತನ್ನ ಕೆಲಸವನ್ನು ಪೂರ್ಣಗೊಳಿಸೇ ಅಲ್ಲಿಂದ ನಿರ್ಗಮಿಸಿದೆ. ಘಟನೆಯ ಸಮಯದಲ್ಲಿ ಈ ವೀಡಿಯೊದಲ್ಲಿ ಮಹಿಳೆಯೊಬ್ಬರು 'ಓ ಮೈ ಗಾಡ್, ಓ ಮೈ ಗಾಡ್' ಎಂದು ಹೇಳುವುದು ಕೇಳಿಸುತ್ತದೆ. ನಾನು ನಡುಗುತ್ತಿದ್ದೇನೆ ಎಂದು ಸ್ಥಳದಲ್ಲಿದ್ದ ಒಬ್ಬರು ಹೇಳುವುದು ಕೇಳಿಸುತ್ತದೆ. ಶಾರ್ಕ್ ಪೊಪೊವ್ ತಂದೆ ಕಣ್ಣ ಮುಂದೆಯೇ ತಿಂದಿದೆ. ಇದೊಂದು ನಿಜಕ್ಕೂ ಭಯಾನಕ ದೃಶ್ಯವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications