ಭೀಕರ ಪ್ರವಾಹಕ್ಕೆ 90 ಜನ ಇನ್ನಿಲ್ಲ, ಏಷ್ಯಾ ಖಂಡದ ದೇಶಕ್ಕೆ ಮಹಾ ಆಪತ್ತು...
ಪ್ರಕೃತಿ ಮಾತೆ ಮುನಿದರೆ ಮುಂದೆ ಏನಾಗಬಹುದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಗುತ್ತಿದ್ದು, ಈ ವಾತಾವರಣದಲ್ಲಿ ಭೂಮಿ ತಾಯಿಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಾ ಇದೆ. ನೋಡ ನೋಡುತ್ತಿದ್ದಂತೆ ಇಡೀ ಭೂಮಿ ತುಂಬಾ ಮಳೆ, ಬಿಸಿಲು, ನೀರಿಗಾಗಿ ಹಾಹಾಕಾರ ಹೀಗೆ ಸಾವಿರಾರು ಪ್ರಾಕೃತಿಕ ಸಮಸ್ಯೆಗಳು ಎದುರಾಗುತ್ತಿವೆ. ಇದೇ ಸಮಯದಲ್ಲಿ ಭೀಕರ ಪ್ರವಾಹಕ್ಕೆ 90 ಜನ ಇನ್ನಿಲ್ಲ, ಏಷ್ಯಾ ಖಂಡದ ದೇಶಕ್ಕೆ ಮಹಾ ಆಪತ್ತು...
ಹೌದು, ಮಳೆಗಾಲದಲ್ಲಿ ಬಿಸಿಲು ಬರುತ್ತಿದೆ & ಚಳಿಗಾಲದಲ್ಲಿ ಮಳೆ ಸುರಿಯುತ್ತಿದೆ, ಇನ್ನು ಬೇಸಿಗೆ ವಿಷಯಕ್ಕೆ ಬಂದರೆ ಅದರ ಕಥೆಯೇ ಬೇಡ. ಹೀಗೆ ಮನುಷ್ಯರು ಮಾಡಿದ ಮಹಾನ್ ಆಪತ್ತಿನಿಂದ ಇದೀಗ ಅಲ್ಲೋಲ ಕಲ್ಲೋಲ ಭೂ ಗ್ರಹದ ಮೇಲೆ ಸೃಷ್ಟಿಯಾಗಿದೆ. ಇಂತಹ ಭಾರಿ ಸಂಕಷ್ಟದ & ಒತ್ತಡದ ಸಮಯದಲ್ಲಿ ಭಾರೀ ಮಳೆ ಪರಿಣಾಮ ಪ್ರವಾಹ & ಭೂಕುಸಿತ ಉಂಟಾಗಿ ವಿಯೆಟ್ನಾಂನಲ್ಲಿ ಘೋರ ಪರಿಸ್ಥಿತಿ ಎದುರಾಗಿದೆ. ಈ ದುರಂತದಲ್ಲಿ ಇದೀಗ 90 ಜನ ಮೃತಪಟ್ಟು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ.

343 ಮಿಲಿಯನ್ ಡಾಲರ್ ನಷ್ಟ
ಅಂದಹಾಗೆ ಪ್ರಾಕೃತಿಕ ವಿಕೋಪ ಹಾಗೂ ಸಾಲು ಸಾಲು ಚಂಡಮಾರುತದ ಪ್ರಭಾವದಿಂದ ಇದೀಗ ಭಾರಿ ಘೋರ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಪರಿಣಾಮ ಏಷ್ಯಾದ ಹಲವು ದೇಶಗಳಲ್ಲಿ ಭೀಕರ ಪ್ರವಾಹ ಎದುರಾಗುತ್ತಿದೆ. ಅದೇ ರೀತಿಯಾಗಿ, ಇದೀಗ ದಿಢೀರ್ ವಿಯೇಟ್ನಾಂ ದೇಶದಲ್ಲೂ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಹೀಗೆ ಭಾರಿ ಪ್ರವಾಹದ ಪರಿಣಾಮ 343 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೇ ಸಾವು ನೋವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿರುವ ಕಾರಣಕ್ಕೆ ಭಾರಿ ಆತಂಕ ಸೃಷ್ಟಿಯಾಗಿದೆ.












Click it and Unblock the Notifications