ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಬಿಯಾದಲ್ಲಿ ಅಪಹೃತರಾಗಿದ್ದ 7 ಭಾರತೀಯರ ಬಿಡುಗಡೆ

|
Google Oneindia Kannada News

ಟ್ರಿಪೋಲಿ, ಅಕ್ಟೋಬರ್ 12: ಲಿಬಿಯಾದಲ್ಲಿ ಅಪಹೃತರಾಗಿದ್ದ 7 ಭಾರತೀಯರು ಸುರಕ್ಷಿತರಾಗಿ ಬಿಡುಗಡೆಗೊಂಡಿದ್ದಾರೆಂದು ತುನಿಷಿಯಾದ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

ಇದೀಗ ಅಪಹರಣಕ್ಕೊಳಗಾಗಿದ್ದ ಎಲ್ಲಾ 7 ಮಂದಿ ಭಾರತೀಯರನ್ನು ಸುರಕ್ಷಿತದಿಂದ ಬಿಡುಗಡೆ ಮಾಡಿಸಲಾಗಿದೆ ಎಂದು ತುನಿಷಿಯಾದ ಭಾರತೀಯ ರಾಯಭಾರಿ ಅಧಿಕಾರಿ ಪುನೀರ್ ರಾಯ್ ಕುಂಡಲ್ ಅವರು ಹೇಳಿದ್ದಾರೆ.

ಲಿಬಿಯಾದಲ್ಲಿ ಅಪಹೃತರಾದ 7 ಭಾರತೀಯರು ಸುರಕ್ಷಿತವಾಗಿದ್ದಾರೆ ಲಿಬಿಯಾದಲ್ಲಿ ಅಪಹೃತರಾದ 7 ಭಾರತೀಯರು ಸುರಕ್ಷಿತವಾಗಿದ್ದಾರೆ

ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರಪ್ರದೇಶದ ಮೂಲದವರಾಗಿದ್ದ 7 ಮಂದಿ ಭಾರತೀಯರು ಲಿಬಿಯಾದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ಸೆಪ್ಟೆಂಬರ್ 14 ರಂದು ಭಾರತಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಶ್ವೆರಿಫ್ ಎಂಬ ಸ್ಥಲದಲ್ಲಿ ಅಪಹರಿಸಲಾಗಿತ್ತು.

Seven Indian Nationals Kidnapped In Libya Released

ಲಿಬಿಯಾದಲ್ಲಿ ಭಾರತೀಯ ರಾಯಭಾರಿ ಕಚೇರಿಯಿಲ್ಲ. ಹೀಗಾಗಿ ಲಿಬಿಯಾದಲ್ಲಿ ಭಾರತೀಯರ ಕುರಿತು ತುನಿಷಿಯಾದ ರಾಯಭಾರಿ ಅಧಿಕಾರಿಗಳೇ ನಿಗಾವಹಿಸಲಿದ್ದಾರೆ.

ಬಿಯಾದಲ್ಲಿ ಸ್ಥಳೀಯ ಬಂಡಾಯಕೋರರ ಗುಂಪೊಂದು ಭಾರತೀಯ ಮೂಲದ 7 ಜನರನ್ನು ಅಪಹರಿಸಿತ್ತು. ಅವರನ್ನು ಬಿಡುಗಡೆ ಮಾಡಬೇಕಾದರೆ 20 ಸಾವಿರ ಡಾಲರ್‌ಗೆ ನೀಡುವಂತೆ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿತ್ತು.

ಅಪಹರಣವಾದವರನ್ನು ಬಿಹಾರ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಮಹಾರಾಜ ಗಂಜ್, ಕುಶಿನಗರ , ದಿಯೋರಿಯಾ, ಗುಜರಾತಿನ ಅಮ್ರೇಲಿ ನಿವಾಸಿಗಳು ಎಂದು ಗುರುತಿಸಲಾಗಿದೆ.

English summary
The 7 Indian nationals who were kidnapped in Libya have been released the ambassador to Tunisia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X