ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'2024ರ ವರೆಗೂ ಕೊರೊನಾ ಲಸಿಕೆಯ ಅಭಾವವಿರಲಿದೆ'

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: '2024ರವರೆಗೂ ಕೊರೊನಾ ಲಸಿಕೆಯ ಅಭಾವವಿರಲಿದೆ' ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ಪೂನವಾಲಾ ಹೇಳಿದ್ದಾರೆ.

ಕೊವಿಡ್ 19ನಿಂದ ಜಗತ್ತನ್ನು ನಿಯಂತ್ರಿಸಲು ಕನಿಷ್ಠ ನಾಲ್ಕೈದು ವರ್ಷಗಳು ಬೇಕು. 2024ರವರೆಗೂ ಕೊರೊನಾ ಲಸಿಕೆಯ ಕೊರತೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದುಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದು

ಔಷಧೀಯ ಸಂಸ್ಥೆಗಳು ಇಡೀ ವಿಶ್ವದ ಜನಸಂಖ್ಯೆಗೆ ಲಸಿಕೆ ನೀಡುವಷ್ಟು ವೇಗವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿಲ್ಲ.

Serum Institute Warns Of Shortage Of Coronavirus Vaccine For All Until 2024

ಪ್ರತಿಯೊಬ್ಬರೂ ಈ ವಿಶ್ವದಲ್ಲಿ ಲಸಿಕೆಯನ್ನು ಹೊಂದಬೇಕಿದ್ದರೆ ನಾಲ್ಕರಿಂದ ಐದು ವರ್ಷಗಳು ಬೇಕಾಗಬಹುದು.ಲಸಿಕೆಯನ್ನು ದೇಶದ 1.4 ಶತಕೋಟಿ ಜನರಿಗೆ ತುಪುವಂತೆ ಮಾಡಲು ಬೇಕಾದ ಅತ್ಯಾಧುನಿಕ ಕೋಲ್ಡ್‌ ಚೈನ್ ಮೂಲಸೌಕರ್ಯವಿಲ್ಲ ಎಂದು ಭಾರತದಲ್ಲಿ ಲಸಿಕೆ ವಿತರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಪೂಣೆ ಮೂಲದ ಔಷಧ ಕಂಪನಿಯೊಂದು 1.5 ಬಿಲಿಯನ್ ಪೋಲಿಯೋ ಲಸಿಕೆ ತಯಾರಿಗೆ ಮುಂದಾಗಿದೆ. 170 ದೇಶಗಳಿಗೆ ನೀಡಲಿದೆ. ಆ ಕಂಪನಿಯು ವಿವಿಧ ಐದು ಫಾರ್ಮಾ ಕಂಪನಿ ಜೊತೆ ಕೈಜೋಡಿಸಿದೆ.

Recommended Video

Sanjjanaa & Ragini to jail,ಕೊನೆಗೂ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲಿದ್ದಾರೆ ಸಂಜನಾ, ರಾಗಿಣಿ

ಎಸ್‌ಐಐ 1 ಬಿಲಿಯನ್ ಡೋಸ್ ಆಸ್ಟ್ರಾಜೆನೆಕಾ ಲಸಿಕೆಯನ್ನು ತಯಾರಿಸಲು ಮುಂದಾಗಿದೆ. ಅದರಲ್ಲಿ ಅರ್ಧದಷ್ಟನ್ನು ಭಾರತಕ್ಕೆ ನೀಡಲಿದೆ.ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಲಸಿಕೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ ಇದು ಸುರಕ್ಷಿತ ಎಂದು ತಿಳಿದುಬಂದಿದೆ.

English summary
Adar Poonawalla, the chief executive of Serum Institute of India (SII), has said that it would take at least four to five years to immunise the world against COVID-19, the disease caused by the novel coronavirus or SARS-CoV-2, said a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X