ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕೊರಿಯಾ ಜಲಪ್ರದೇಶಕ್ಕೆ ಬಂದು ಬಿದ್ದ ಉತ್ತರ ಕೊರಿಯಾದ ಕ್ಷಿಪಣಿ

|
Google Oneindia Kannada News

ಸಿಯೋಲ್, ನವೆಂಬರ್ 02: ಉತ್ತರ ಕೊರಿಯಾ ಬುಧವಾರದಂದು 10ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. ಈ ಪೈಕಿ ಒಂದು ಕ್ಷಿಪಣಿಯು ಉತ್ತರ ಕೊರಿಯಾ ನೀರಿನಲ್ಲಿ ಬಿದ್ದಿದ್ದು, ಇದು ಪರಿಣಾಮಕಾರಿ ಪ್ರಾದೇಶಿಕ ಆಕ್ರಮಣ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್ ಹೇಳಿದ್ದಾರೆ.

ದಕ್ಷಿಣ ಕೊರಿಯಾದ ದ್ವೀಪರಾಷ್ಟ್ರ ಉಲ್ಲೆಉಂಗೋದಲ್ಲಿ ವಾಯುದಾಳಿ ನಡೆಯುವ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆ ನಿವಾಸಿಗಳನ್ನು ಪಾತಾಳದ ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು.

ಸರ್ವಾಧಿಕಾರಿ ಘೋಷಣೆ: ಕೊರೊನಾ ವೈರಸ್ ವಿರುದ್ಧದ ಯುದ್ಧ ಗೆದ್ದ ಉತ್ತರ ಕೊರಿಯಾ!ಸರ್ವಾಧಿಕಾರಿ ಘೋಷಣೆ: ಕೊರೊನಾ ವೈರಸ್ ವಿರುದ್ಧದ ಯುದ್ಧ ಗೆದ್ದ ಉತ್ತರ ಕೊರಿಯಾ!

ಜಪಾನ್ ಸಮುದ್ರ ಎಂದು ಕರೆಯಲ್ಪಡುವ ಪೂರ್ವ ಸಮುದ್ರ ಭಾಗದಲ್ಲಿ ದಕ್ಷಿಣ ಕೊರಿಯಾ ಕೂಡ ಕೆಲ ಗಡಿಯನ್ನು ಮುಚ್ಚಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್‌ಗೆ ಹೋಗುವ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Seoul Issues Evacuation Warnings For Island After North Korea Missile Lands Close To Its Waters

ಬಂಕರ್ ಗಳಲ್ಲಿ ಆಶ್ರಯ:

ಎರಡು ರಾಷ್ಟ್ರಗಳ ನಡುವಿನ ವಾಸ್ತವಿಕ ಗಡಿಯನ್ನು ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯು ದಾಟಿದ್ದು, ಉಲ್ಲೆಉಂಗೋ ದ್ವೀಪದ ನಿವಾಸಿಗಳ ಸುರಕ್ಷತೆ ಬಗ್ಗೆ ನಿಗಾ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಬಂಕರ್ ಗಳಲ್ಲಿ ಆಶ್ರಯ ಪಡೆದುಕೊಳ್ಳುವ ಅಪರೂಪದ ದೃಶ್ಯ ಕಂಡು ಬರುತ್ತಿದೆ.

1953ರಲ್ಲಿ ನಡೆದ ಕೊರಿಯನ್ ಯುದ್ಧದ ನಂತರದಲ್ಲಿ ಪೆನಿನ್ಸುಲಾವನ್ನು ವಿಭಜನೆ ಮಾಡಲಾಗಿತ್ತು. ಈ ಬೆಳವಣಿಗೆ ನಂತರದಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಕ್ಷಿಪಣಿಯು ದಕ್ಷಿಣ ಕೊರಿಯಾದ ಜಲಪ್ರದೇಶಕ್ಕೆ ಬಂದು ಇಳಿದಿದೆ ಎಂದು ಸೇನೆಯು ಹೇಳಿದೆ. ಉತ್ತರ ಕೊರಿಯಾವು ಕ್ಷಿಪಣಿಯ ಮೂಲಕ ಪರಿಣಾಮಕಾರಿ ಪ್ರಾದೇಶಿಕ ಆಕ್ರಮಣಕ್ಕೆ ಪ್ರಚೋದನೆಯನ್ನು ನೀಡುತ್ತಿದೆ. ಗಡಿ ವಿಭಜನೆ ನಂತರ ಮೊದಲ ಬಾರಿಗೆ ಉತ್ತರ ಮಿತಿ ರೇಖೆಯನ್ನು ದಾಟಿಕೊಂಡು ಬಂದಿರುವುದನ್ನು ಅಧ್ಯಕ್ಷ ಯೂನ್ ಕಚೇರಿಯು ಗಮನಿಸಿದೆ.

ದ.ಕೊರಿಯಾದಿಂದ 57 ಕಿ.ಮೀ ದೂರದಲ್ಲಿ ಬಿದ್ದ ಕ್ಷಿಪಣಿ:

ಉತ್ತರ ಕೊರಿಯಾ ಉಡಾಯಿಸಿದ ಕ್ಷಿಪಣಿಯು ದಕ್ಷಿಣ ಕೊರಿಯಾದ ಕೇಂದ್ರ ಸ್ಥಾನದಿಂದ 57 ಕಿಲೋ ಮೀಟರ್ ದೂರದಲ್ಲಿ ಇರುವ ಜಲಪ್ರದೇಶದಲ್ಲಿ ಬಂದು ಇಳಿದಿದೆ ಎಂದು ಸೇನೆಯು ಹೇಳಿದೆ. ದಕ್ಷಿಣ ಕೊರಿಯಾದ ಜಲಪ್ರದೇಶದಲ್ಲಿ ಕ್ಷಿಪಣಿ ಬಿದ್ದಿರುವುದು ಅತ್ಯಂತ ಅಪರೂಪ ಹಾಗೂ ಅಸಹನೀಯ ಎಂದು ವಿವರಿಸುವ ಹೇಳಿಕೆಯನ್ನು ಸೇನೆ ಬಿಡುಗಡೆ ಮಾಡಿದೆ. ಈ ಪ್ರಚೋದನೆಗೆ ನಮ್ಮ ಸೇನೆಯು ಸರಿಯಾಗಿ ಪ್ರತಿಕ್ರಿಯೆ ನೀಡುವುದಾಗಿ ಪ್ರತಿಜ್ಞೆ ಮಾಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಕೊರಿಯಾದಿಂದ 10 ಕ್ಷಿಪಣಿ ಉಡಾವಣೆ:

ಉತ್ತರ ಕೊರಿಯಾದಿಂದ 3 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಲಾಗಿದೆ ಎಂಬುದನ್ನು ದಕ್ಷಿಣ ಕೊರಿಯಾ ಮಿಲಿಟರಿ ಜಂಟಿ ಮುಖ್ಯಸ್ಥರು ಹೇಳಿದರು. ಆದರೆ ಇಂದು ಪೂರ್ವ ಮತ್ತು ಪಶ್ಚಿಮಕ್ಕೆ ವಿವಿಧ ರೀತಿಯ 10 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಉಡಾವಣೆ ಮಾಡಿರುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್, ಉತ್ತರ ಕೊರಿಯಾದ ಪ್ರಚೋದನೆಗೆ ತಕ್ಕ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Seoul Issues Evacuation Warnings For Island After North Korea Missile Lands Close To Its Waters

ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆ ಬಗ್ಗೆ ಜಪಾನ್ ಕೂಡ ದೃಢಪಡಿಸಿದ್ದು, ಸಾಧ್ಯವಾದಷ್ಟು ಬೇಗ ರಾಷ್ಟ್ರೀಯ ಭದ್ರತಾ ಸಭೆಯನ್ನು ಕರೆಯಲು ಪ್ರಧಾನಮಂತ್ರಿ ಕಿಶಿಡಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕೊರಿಯಾದ ಜಲಪ್ರದೇಶಕ್ಕೆ ಇಳಿದ ಕ್ಷಿಪಣಿ:

ದಕ್ಷಿಣ ಕೊರಿಯಾದ ಮುಖ್ಯ ಭೂಭಾಗದ ಪೂರ್ವಕ್ಕೆ ಕೇವಲ 57 ಕಿಲೋಮೀಟರ್ ದೂರದಲ್ಲಿರುವ ಜಲಪ್ರದೇಶದಲ್ಲಿ ಬುಧವಾರ ಕ್ಷಿಪಣಿಯೊಂದು ಇಳಿದಿದೆ ಎಂದು ಮಿಲಿಟರಿ ಹೇಳಿದೆ. "ಯುಎಸ್-ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸವನ್ನು ವಿರೋಧಿಸಿ, 2010 ರಿಂದ ದಕ್ಷಿಣದ ವಿರುದ್ಧ ಪ್ಯೊಂಗ್ಯಾಂಗ್ ಅತ್ಯಂತ ಆಕ್ರಮಣಕಾರಿ ಮತ್ತು ಬೆದರಿಕೆಯ ಸಶಸ್ತ್ರ ಪ್ರದರ್ಶನವನ್ನು ನಡೆಸಿದೆ," ಎಂದು ಸೆಜಾಂಗ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಚಿಯೋಂಗ್ ಸಿಯೋಂಗ್-ಚಾಂಗ್ ತಿಳಿಸಿದರು.

ಈ ಹಿಂದೆ 2010ರ ಮಾರ್ಚ್ ತಿಂಗಳಿನಲ್ಲಿ ಉತ್ತರ ಕೊರಿಯಾದ ಜಲಾಂತರ್ಗಾಮಿ ನೌಕೆಯು ದಕ್ಷಿಣ ಕೊರಿಯಾದ ಚಿಯೋನಾನ್ ಮೇಲೆ ನುಗ್ಗಿ ಬಂದಿದ್ದು, ಕಡ್ಡಾಯ ಮಿಲಿಟರಿ ಸೇವೆಯಲ್ಲಿದ್ದ 16 ಮಂದಿ ಸೇರಿದಂತೆ ಒಟ್ಟು 46 ನಾವಿಕರು ಮೃತಪಟ್ಟಿದ್ದರು.

English summary
Seoul Issues Evacuation Warnings For Island After North Korea Missile Lands Close To Its Waters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X