ವಿಜ್ಞಾನವೇ ದೇವರೆಂದಿದ್ದ ಸ್ಟೀಫನ್ ಹಾಕಿಂಗ್ ನಡೆದು ಬಂದ ಹಾದಿ

Posted By:
Subscribe to Oneindia Kannada

ಇಂದು (ಮಾರ್ಚ್‌ 14) ವಿಶ್ವವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನರಾಗಿದ್ದಾರೆ. ಅಪ್ರತಿಮ ಭೌತಶಾಸ್ತ್ರಜ್ಞ, ಖಗೋಳ ವಿಜ್ಞಾನಿ, ಬ್ರಹ್ಮಾಂಡ ರೂಪಕ ತತ್ವದ ವಿಜ್ಞಾನಿ, ಪ್ರಾಧ್ಯಾಪಕ, ವಿಜ್ಞಾನ ಬರಹಗಾರ ಹೀಗೆ ಇನ್ನೂ ಹತ್ತು ಹಲವು ವಿಶೇಷಣಗಳನ್ನು ಅವರಿಗೆ ನೀಡಿದರೂ ಅವರ ಪ್ರತಿಭೆಯನ್ನು ಹಿಡಿದಿಡಲಾಗದು. ಅಂತಹಾ ಅಪರಿಮಿತ ಜ್ಞಾನ ಅವರದ್ದು.

ಭೌತವಿಜ್ಞಾನ, ಬ್ರಹ್ಮಾಂಡ ರೂಪತಳೆದ ಬಗೆಯ ಬಗ್ಗೆ ಅವರ ಸಂಶೋಧನೆ ಮೌಲ್ಯಕ್ಕೆ ನಿಲುಕದ್ದು. ಅವರ ಅಗಲಿಕೆ ಖಗೋಳಕ್ಕೂ ಭೂಮಿಗೂ ಇದ್ದ, ಅಮೂರ್ತ ಸತ್ಯಗಳಿಗೂ ಸಾಮಾನ್ಯ ಮನುಷ್ಯರಿಗೂ ಇದ್ದ ನಂಟೊಂದು ಕಡಿದಿದೆ ಎಂದೇ ಹೇಳಬಹುದೇನೋ. ವೈಜ್ಞಾನಿಕ ಕ್ಷೇತ್ರದಲ್ಲಿ ಇದೊಂದು ಶಾಶ್ವತ ನಿರ್ವಾತ. ಅವರ ಜೀವನ ನಡೆದು ಬಂದ ಹಾದಿಯ ಕಿರು ಪರಿಚಯ ಇಲ್ಲಿದೆ.

ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಸ್ಟೀಫನ್ ಹಾಕಿಂಗ್ ನಿಧನ

ಸ್ಟೀಫನ್ ಹಾಕಿಂಗ್ ಅವರ ಪೂರ್ಣ ಹೆಸರು ಸ್ಟೀಫನ್ ವಿಲಿಯಂ ಹಾಕಿಂಗ್. ಫ್ರಾಂಕ್ ಮತ್ತು ಇಸಾಬೆಲ್ಲಾ ಹಾಕಿಂಗ್ ಅವರ ಮೊದಲ ಮಗನಾಗಿ ಅವರು ಜನವರಿ 8 , 1942 ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ಜನಿಸಿದರು. ಸ್ಟೀಫನ್‌ಗೆ ಇಬ್ಬರು ತಂಗಿಯರು ಮತ್ತು ಒಬ್ಬ ದತ್ತು ತಮ್ಮ ಸಹ ಇದ್ದ. ಅವರ ಕುಟುಂಬ ಅತ್ಯಂತ ಬುದ್ದಿವಂತರ ಕುಟುಂಬ ಎಂದು ಆಗಲೇ ಲಂಡನ್ನಿನಾದ್ಯಂತ ಹೆಸರು ಗಳಿಸಿತ್ತು. ಸ್ಟೀಫನ್‌ ಎಳವೆಯಿಂದಲೂ ಪುಸ್ತಕದ ಹುಳ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಗಡಿಯಾರದಿಂದ ಕಂಪ್ಯೂಟರ್ ನಿರ್ಮಾಣ

ಗಡಿಯಾರದಿಂದ ಕಂಪ್ಯೂಟರ್ ನಿರ್ಮಾಣ

ಸ್ಟೀಫನ್ ಹಾಕಿಂಗ್ ಅವರ ಪ್ರಾಥಮಿಕ ಮತ್ತು ಕಾಲೇಜು ಹಂತದ ಶಿಕ್ಷಣಗಳು ಲಂಡನ್‌ನಲ್ಲಿಯೇ ನಡೆದವು. ಮೊದಲಿಗೆ ಪಾಠಪ್ರವಚನಗಳಲ್ಲಿ ಅಷ್ಟೇನು ಚುರುಕಿರದಿದ್ದ ಸ್ಟೀಫನ್ ಆ ನಂತರ ಅತ್ಯುತ್ತಮ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿ ಗುರುತಿಸಿಕೊಂಡರು. ತಮ್ಮ ಕಾಲೇಜು ದಿನಗಳಲ್ಲಿ ತಮ್ಮ ಗಣಿತ ಶಿಕ್ಷಕರೊಂದಿಗೆ ಸೇರಿ ಕೈಗಡಿಯಾರ, ದೂರವಾಣಿ ಮತ್ತಿತರ ವಸ್ತುಗಳ ಬಿಡಿ ಭಾಗಗಳನ್ನು ಬಳಸಿ ಸರಳ ಕಂಪ್ಯೂಟರ್‌ ಒಂದನ್ನು ನಿರ್ಮಿಸಿದ್ದರು. ಕಾಲೇಜಿನಲ್ಲಿ ಸ್ಟೀಫನ್‌ನನ್ನು ಐನ್‌ಸ್ಟೈನ್ ಎಂದು ಕರೆಯಲಾಗಿತ್ತಿತ್ತು. ಐನ್‌ಸ್ಟೈನ್ ಹುಟ್ಟಿದ ದಿನವೇ ಸ್ಟೀಫನ್‌ ನಿಧನ ಹೊಂದಿರುವುದು ವೈಚಿತ್ರ್ಯ.

ಖಾಯಿಲೆ ಗುರುತು ಪತ್ತೆ

ಖಾಯಿಲೆ ಗುರುತು ಪತ್ತೆ

ಆ ನಂತರ ಅವರು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಭೌತ ವಿಜ್ಞಾನ ಅಭ್ಯಾಸ ಮಾಡಿದರು. ಅಲ್ಲಿಂದ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಕೆಂಬ್ರಿಡ್ಜ್ ವಿವಿಗೆ ತೆರಳಿದರು. ಅಲ್ಲಿ ಅವರಿಗೆ ಭೌತ ವಿಜ್ಞಾನ ಮತ್ತು ಕಾಸ್ಮೋಲೊಜಿ ವಿಷಯದ ಬಗ್ಗೆ ಹೆಚ್ಚು ಸಂಶೋಧನೆ ಮಾಡುವ ಅವಕಾಶ ಒದಗಿಬಂತು. ಕೆಂಬ್ರಿಡ್ಜ್‌ನಲ್ಲಿ ಕಲಿಯುವ ಸಮಯದಲ್ಲಿಯೇ ಅವರಿಗೆ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ ಅಥವಾ ಮೊಟಾರ್ ನ್ಯುರಿನೋ ಖಾಯಿಲೆ ಇರುವುದು ತಿಳಿದುಬಂತು. ಅವರು ಮಾತನಾಡಲು ಮತ್ತು ನಡೆಯಲು ಕಷ್ಟಪಡುವಂತಾಯಿತು.

ಕೃತಕ ಬುದ್ದಿಮತ್ತೆ ಮನುಕುಲಕ್ಕೆ ಹಾನಿಕಾರಕ : ಸ್ಟಿಫನ್ ಹಾಕಿಂಗ್

ಸ್ಟೀಫನ್‌ಗೆ ಮೂವರು ಮಕ್ಕಳು

ಸ್ಟೀಫನ್‌ಗೆ ಮೂವರು ಮಕ್ಕಳು

ಇದೇ ಸಮಯದಲ್ಲಿ ಅವರು ಜೇನ್ ವೈಲ್ಡ್ ಎಂಬುವರನ್ನು 1965ರಲ್ಲಿ ವಿವಾಹವಾದರು. ಆಗ ತಾನೆ ಮೋಟಾರ್ ನ್ಯುರಿನೋ ಖಾಯಿಲೆಗೆ ತುತ್ತಾಗಿದ್ದ ಸ್ಟೀಫನ್ ಅವರು 'ಮದುವೆ ನನಗೆ ಬದುಕಲು ಕಾರಣ ನೀಡಿತು' ಎಂದು ಆಶಾವಾಧದಿಂದ ನುಡಿದಿದ್ದರು. ಸ್ಟೀಫನ್ ಮತ್ತು ಜೇನ್ ಅವರಿಗೆ ರಾಬರ್ಟ್‌, ಲೂಸಿ ಮತ್ತು ಟಿಮೋಟಿ ಎಂಬ ಮೂರು ಮಕ್ಕಳು ಜನಿಸಿದರು.

ಮೋಟಾರ್ ನ್ಯುರಿನೋ ಖಾಯಿಲೆ

ಮೋಟಾರ್ ನ್ಯುರಿನೋ ಖಾಯಿಲೆ

ಸ್ಟೀಫನ್ ಹಾಕಿಂಗ್ ಅವರು ತಮ್ಮ ಜೀವನದ ಬಹುಕಾಲ ಖಾಯಿಲೆಯೊಂದಿಗೆ ಸೆಣಸಾಡುತ್ತಲೇ ಕಳೆದರು. ಅವರ ಹದಿ ವಯಸ್ಸಿನಲ್ಲೆಯೇ ಅವರಿಗೆ ಅಮಯೋಟ್ರೊಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಅಥವಾ ಮೋಟಾರ್ ನ್ಯುರಿನೋ ಖಾಯಿಲೆ ಇರುವುದು ಪತ್ತೆಯಾಯಿತು. ಅವರಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ, ಮಾತುಗಳು ಅಸ್ಪಷ್ಟವಾಗುತ್ತಾ ಹೋಯಿತು.

 'ಈಕ್ವಲೈಜರ್' ತಂದ ಹೊಸ ಹುರುಪು

'ಈಕ್ವಲೈಜರ್' ತಂದ ಹೊಸ ಹುರುಪು

1970 ಅಷ್ಟರಲ್ಲಿ ಅವರ ಮಾತು ಸಂಪೂರ್ಣ ಅಸ್ಪಷ್ಟವಾಗಿತ್ತು, ಅವರಿಗೆ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ, ಬರೆಯುವುದೂ ದೂರದ ಮಾತಾಗಿತ್ತು, ಹಾಗಾಗಿ ಅವರು ತಳ್ಳುಕುರ್ಚಿಯ ಸಹಾಯ ಪಡೆಯಲೇ ಬೇಕಾಯಿತು. ಆ ಸಮಯದಲ್ಲಿ ಅವರು ಅಂಗವಿಕಲರಿಗಾಗಿ ಧನ ಸಹಾಯ ಮಾಡುವ ಕಾರ್ಯಕ್ರಮಗಳನ್ನು ಮಾಡಲು ಪ್ರಾರಂಭಿಸಿದರು. ಆ ನಂತರ ವಾಲ್ಟರ್ ವಾಲ್ಟೋಜ್ ಎಂಬ ವ್ಯಕ್ತಿ ಸ್ಟೀಫನ್‌ಗಾಗಿ 'ಈಕ್ವಲೈಜರ್' ಎಂಬ ಅತ್ಯಾಧುನಿಕ ವೀಲ್‌ ಚೇರ್ ತಯಾರಿಸಿ ಕೊಟ್ಟ. ತಂತ್ರಜ್ಞಾನದಿಂದ ತುಂಬಿದ್ದ ಆ ವೀಲ್‌ಚೇರ್‌ ಮೂಲಕ ಸ್ಟೀಫನ್ ಅವರು ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ವೈಜ್ಞಾನಿಕ ಪುಸ್ತಕಗಳನ್ನೂ ಬರೆಯುತ್ತಿದ್ದರು.

ವಿಜ್ಞಾನವೇ ಎಲ್ಲಾ

ವಿಜ್ಞಾನವೇ ಎಲ್ಲಾ

ಧಾರ್ಮಿಕತೆ ಶುದ್ಧ ನಾನ್‌ಸೆನ್ಸ್ ಎನ್ನುತ್ತಿದ್ದ ಸ್ಟೀಫನ್ ಹಾಕೀಮಗ್ ನಂಬುತ್ತಿದ್ದುದು ವಿಜ್ಞಾನ ಒಂದನ್ನೇ 'ವಿಜ್ಞಾನದ ನಿಯಮಗಳೇ ಜಗತ್ತನ್ನು ಕಾಪಾಡುತ್ತಿರುವುದು, ಮತ್ತು ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಬದಲಾವಣೆಗೆ ಕಾರಣ' ಎಂದಿದ್ದ ಅವರು ಧಾರ್ಮಿಕತೆಯನ್ನು ಪಾಲಿಸಿದವರೇ ಅಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Scientist Stephen Hawking's early life, education, science Researches, his disability, marriage and many other things details.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ