• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?

|

ಬೀಜಿಂಗ್, ಫೆಬ್ರವರಿ 7: ಕೊರೊನಾ ವೈರಸ್ ಬಾವಲಿಗಳ ಮೂಲಕವೇ ವ್ಯಾಪಿಸುತ್ತಿವೆ ಎಂಬುದನ್ನು ಬಲವಾಗಿ ನಂಬಿರುವ ವಿಜ್ಞಾನಿಗಳು, ಮನುಷ್ಯರಿಗೆ ವೈರಸ್ ತಗುಲಲು ಇನ್ನೊಂದು ಪ್ರಾಣಿ ಕಾರಣ ಎಂದು ಹೊಸ ವಾದ ಮಂಡಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ಯಾಂಗೋಲಿನ್ ಚೀನಾದೆಲ್ಲೆಡೆ ನಾವಲ್ ಕೊರೊನಾ ವೈರಸ್ ಹರಡಲು ಬಾವಲಿ ಮತ್ತು ಮನುಷ್ಯನ ನಡುವಿನ ಕೊಂಡಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಥವಾ ಪ್ಯಾಂಗೋಲಿನ್‌ಗಳಲ್ಲಿಯೇ ಈ ವೈರಸ್ ಮೂಲ ಇರಬಹುದು ಎನ್ನಲಾಗಿದೆ. ಕೊರೊನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಬರುವವರೆಗೂ ವನ್ಯಪ್ರಾಣಿಗಳ ವ್ಯಾಪಾರಕ್ಕೆ ಚೀನಾ ಜನವರಿಯಲ್ಲಿ ತಾತ್ಕಾಲಿಕ ನಿಷೇಧ ಹೇರಿದೆ.

Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?

ವೈರಸ್ ಇಷ್ಟು ತೀವ್ರವಾಗಿ ಹರಡಲು ಯಾವ ಪ್ರಾಣಿ ಕಾರಣವಾಗಿರಬಹುದು ಎಂದು ಹುಡುಕಾಟದಲ್ಲಿರುವ ವಿಜ್ಞಾನಿಗಳು ವನ್ಯಪ್ರಾಣಿಗಳಿಂದ ಒಂದು ಸಾವಿರಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಈ ನಡುವೆ ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾಲಯವು ಚಿಪ್ಪುಗಳುಳ್ಳ ಸಸ್ತನಿ ಪ್ರಾಣಿ ಪ್ಯಾಂಗೋಲಿನ್, ಕೊರೊನಾ ವೈರಸ್ ಹರಡಲು ಮೂಲ ಕೊಂಡಿಯಾಗಿರಬಹುದು ಎಂಬ ಶಂಕೆಗೆ ಸಾಕಷ್ಟು ಪುಷ್ಟಿ ನೀಡುವ ಮಾಹಿತಿ ಸಿಕ್ಕಿರುವುದಾಗಿ ತಿಳಿಸಿದೆ.

ಬಾವಲಿಗಳ ಮೇಲೆ ಶಂಕೆ

ಬಾವಲಿಗಳ ಮೇಲೆ ಶಂಕೆ

ಕೊರೊನಾ ವೈರಸ್ ಕೇಂದ್ರ ಚೀನಾದ ವುಹಾನ್ ನಗರದ ಪ್ರಾಣಿ ಮಾಂಸ ಮಾರುಕಟ್ಟೆಯಿಂದಲೇ ಹರಡಿರುವುದು ಖಾತರಿಯಾಗಿದೆ. ಬಾವಲಿಗಳಿಂದ ಈ ವೈರಸ್ ಹರಡಿರಬಹುದು ಎಂದು ನಂಬಲಾಗಿದೆ. ಬಾವಲಿ ಸೂಪ್ ಮತ್ತು ಇತರೆ ಖಾದ್ಯಗಳ ಮೂಲಕ ವೈರಸ್ ತಗುಲಿದೆ ಎಂದಿದ್ದರೂ, ಮನುಷ್ಯರಿಗೆ ಈ ಸೋಂಕು ಹರಡಲು 'ಮಧ್ಯವರ್ತಿ'ಗಳೂ ಇದ್ದಾರೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತಿ ಹೆಚ್ಚು ಕಳ್ಳಸಾಗಣೆ

ಅತಿ ಹೆಚ್ಚು ಕಳ್ಳಸಾಗಣೆ

ಕೀಟಗಳನ್ನು ತಿಂದು ಬದುಕುವ ಪ್ಯಾಂಗೋಲಿನ್‌ಗಳಿಗೆ ಆಹಾರ ಮತ್ತು ಔಷಧಿಗಾಗಿ ಏಷ್ಯಾದಲ್ಲಿ ವಿಪರೀತ ಬೇಡಿಕೆ ಇದೆ. ಆದರೆ ಅಳಿವಿನಂಚಿನಲ್ಲಿರುವ ಪ್ಯಾಂಗೋಲಿನ್ ಮಾರಾಟಕ್ಕೆ ನಿಷೇಧವಿದೆ. ಹೀಗಾಗಿ ಅವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಕಳ್ಳಸಾಗಣೆಯಾಗುತ್ತಿರುವ ಪ್ರಾಣಿ ಪ್ಯಾಂಗೋಲಿನ್. ಏಷ್ಯಾ ಮತ್ತು ಆಫ್ರಿಕಾದ ಅರಣ್ಯಗಳಿಂದ ಕಳೆದ ದಶಕದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಪ್ಯಾಂಗೋಲಿನ್‌ಗಳನ್ನು ಕಳ್ಳಸಾಗಣೆ ಮಾಡಲಾಗಿದೆ.

ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?

ಶೇ 99ರಷ್ಟು ಹೋಲಿಕೆ

ಶೇ 99ರಷ್ಟು ಹೋಲಿಕೆ

ಪ್ಯಾಂಗೋಲಿನ್‌ಗಳಲ್ಲಿ ಕಂಡುಬಂದಿರುವ ವೈರಸ್‌ಗಳು ಕೊರೊನಾ ವೈರಸ್ ರೋಗಿಯಲ್ಲಿ ಕಂಡುಬರುವ ವೈರಸ್ ಗುಣಲಕ್ಷಣಗಳಿಗೆ ಶೇ 99ರಷ್ಟು ಸಾಮ್ಯತೆ ಹೊಂದಿವೆ. ಹೀಗಾಗಿ ವಿಪರೀತ ಕಳ್ಳಸಾಗಣೆಯಾಗುವ ಪ್ಯಾಂಗೋಲಿನ್‌ಗಳ ಸಂಪರ್ಕದಿಂದ ಬಾವಲಿಗಳಲ್ಲಿನ ವೈರಸ್‌ಗಳು ಮನುಷ್ಯನಿಗೂ ವ್ಯಾಪಿಸಿರಬಹುದು ಎಂದು ಅಭಿಪ್ರಾಯಪಡಲಾಗಿದೆ.

ಪ್ಯಾಂಗೋಲಿನ್ ಮಾಂಸ, ಔಷಧಕ್ಕೆ ಬಳಕೆ

ಪ್ಯಾಂಗೋಲಿನ್ ಮಾಂಸ, ಔಷಧಕ್ಕೆ ಬಳಕೆ

ಪ್ಯಾಂಗೋಲಿನ್‌ಗಳಿಗೆ ಚೀನಾ ಮತ್ತು ವಿಯೆಟ್ನಾಂಗಳಲ್ಲಿ ಭಾರಿ ಬೇಡಿಕೆ ಇದೆ. ಚೀನಾದಲ್ಲಿ ಪ್ಯಾಂಗೋಲಿನ್ ಮಾಂಸಕ್ಕೆ ಮುಗಿಬೀಳುತ್ತಾರೆ. ಇತರೆ ಅನೇಕ ದೇಶಗಳಲ್ಲಿಯೂ ಅದರ ಮಾಂಸಕ್ಕಾಗಿ ಕಳ್ಳಸಾಗಣೆ ನಡೆಯುತ್ತದೆ. ಹಾಗೆಯೇ ಅದರ ಮೇಲಿನ ಚಿಪ್ಪುಗಳನ್ನು ಸಾಂಪ್ರದಾಯಿಕ ಔಷಧಗಳನ್ನು ಬಳಸಲಾಗುತ್ತಿದೆ. ಆದರೆ ಅದರಿಂದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಮಾತ್ರ ಖಚಿತವಾಗಿಲ್ಲ.

ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ

ವೈರಸ್ ಕಾಣಿಸಿದ ಮಾತ್ರಕ್ಕೆ ಅದೇ ಕಾರಣವಲ್ಲ

ವೈರಸ್ ಕಾಣಿಸಿದ ಮಾತ್ರಕ್ಕೆ ಅದೇ ಕಾರಣವಲ್ಲ

ಪ್ಯಾಂಗೋಲಿನ್‌ಗಳ ಮೂಲಕವೇ ಬಾವಲಿಯ ವೈರಸ್ ಮನುಷ್ಯರಿಗೆ ಹರಡಿದೆ ಎಂಬ ವರದಿಯನ್ನು ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಶು ವೈದ್ಯಕೀಯ ವಿಭಾಗದ ಮುಖ್ಯಸ್ಥ ಜೇಮ್ಸ್ ವುಡ್ ನಿರಾಕರಿಸಿದ್ದಾರೆ. ಪ್ಯಾಂಗೋಲಿನ್‌ಗಳಲ್ಲಿ ಶೇ 99ರಷ್ಟು ಹೋಲಿಕೆಯುಳ್ಳ ವೈರಸ್ ಪತ್ತೆಯಾಗಿದೆ ಎಂಬ ಮಾತ್ರಕ್ಕೆ ವೈರಸ್ ಹರಡಲು ಅವುಗಳೇ ಕಾರಣ ಎಂದು ತೀರ್ಮಾನಿಸುವುದು ಬಾಲಿಶವಾಗುತ್ತದೆ ಎಂದು ಹೇಳಿದ್ದಾರೆ.

English summary
A study said the most trafficked scaly mammal Pangolins have spread coronavirus to humans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X