• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಸೌದಿ ಯುವರಾಜ: ಬೃಹತ್ ಪ್ರಮಾಣದ ಹೂಡಿಕೆಗೆ ಒಲವು

|

ಬೀಜಿಂಗ್, ಫೆಬ್ರವರಿ 21: ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭಾರತದ ಪ್ರವಾಸದ ಬಳಿಕ ಗುರುವಾರ ಚೀನಾಕ್ಕೆ ಭೇಟಿ ನೀಡಿದ್ದಾರೆ.

ಸೌದಿ ಯುವರಾಜನಿಗೆ ಚಿನ್ನ ಲೇಪಿತ ಗನ್ ಉಡುಗೊರೆ ನೀಡಿದ ಪಾಕ್!

ಎರಡು ದಿನಗಳ ಕಾಲ ಚೀನಾದಲ್ಲಿ ಇರಲಿರುವ ಯುವರಾಜ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಸೌದಿ ಪತ್ರಕರ್ತ, ಮೊಹಮ್ಮದ್ ಅವರ ಕಟು ಟೀಕಾಕಾರ ಜಮಾಲ್ ಖಶ್ನೋಗಿ ಅವರ ಹತ್ಯೆಯ ವಿವಾದದ ಬಳಿಕವೂ ಸೌದಿ ಮೈತ್ರಿಯನ್ನು ಮುಂದುವರಿಸಲು ನಿರ್ಧರಿಸಿರುವುದು ಕುತೂಹಲ ಮೂಡಿಸಿದೆ.

ಪ್ರಧಾನಿ ಮೋದಿ ಮನವಿ ಮೇರೆಗೆ ಸೌದಿ ಜೈಲಿಂದ 850 ಕೈದಿಗಳ ಬಿಡುಗಡೆ

ಉಭಯ ದೇಶಗಳು ಆರ್ಥಿಕ ಸಂಬಂಧವನ್ನು ವೃದ್ಧಿಸಿಕೊಳ್ಳಲು ಮಾತುಕತೆ ನಡೆಸಲಿವೆ. ತೂಗುಯ್ಯಾಲೆಯಲ್ಲಿರುವ ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್‌ಐ) ಜಾಗತಿಕ ವಾಣಿಜ್ಯ ಮೂಲಸೌಕರ್ಯ ಯೋಜನೆಗೆ ಸೌದಿಯ ನೆರವು ಪಡೆದುಕೊಳ್ಳುವುದು ಪ್ರಮುಖ ಕಾರ್ಯಸೂಚಿಯಾಗಿರಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾ ಬಳಿ ಸಾಕಷ್ಟು ಬಂಡವಾಳವಿದ್ದು, ಅದನ್ನು ಹೂಡಿಕೆ ಮಾಡಲು ಲಾಭಕರ ಸ್ಥಳಗಳನ್ನು ಕಂಡುಕೊಳ್ಳಬೇಕಿದೆ. ಚೀನಾವು ಬೃಹತ್ ಮಾರುಕಟ್ಟೆ ಹೊಂದಿದ್ದು, ಇಲ್ಲಿನ ಪರಿಸರವು ಸಾಕಷ್ಟು ಸುಧಾರಣೆ ಆಗುತ್ತಿರುವುದರಿಂದ ಇದು ಹೂಡಿಕೆಗೆ ಅತ್ಯುತ್ತಮ ಸ್ಥಳವಾಗಿದೆ ಎಂದು ಸೌದಿ ಅರೇಬಿಯಾದ ಇಂಧನ ಮತ್ತು ಕೈಗಾರಿಕಾ ಸಚಿವ ಖಾಲಿನ್ ಬಿನ್ ಅಬ್ಬುಲಜೀಜ್ ಅಲ್ ಫಾಲಿಹ್ ಹೇಳಿದ್ದಾರೆ.

English summary
Saudi crown prince Mohammed bin Salman arrived in Beijing on Thursday for two days visit. Two countries look to improve their economic ties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X