ಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ

ರಿಯಾದ್, ಜೂನ್ 4: ಬದಲಾವಣೆಗಳಿಗೆ ಮುಸ್ಲಿಂ ದೇಶ ಸೌದಿ ಅರೇಬಿಯಾವೂ ತೆರೆದುಕೊಂಡಿದೆ. ಇದೇ ಮೊದಲ ಬಾರಿಗೆ ಸೌದಿ ಮಹಿಳೆಯೊಬ್ಬರಿಗೆ ಚಾಲನಾ ಪರವಾನಿಗೆ ನೀಡಿದೆ.

ಸೌದಿ ಅರೇಬಿಯಾದಲ್ಲಿ ಇಲ್ಲಿಯವರೆಗೆ ಮಹಿಳೆಯರು ವಾಹನ ಚಲಾಯಿಸುವುದು ಅಪರಾಧವಾಗಿತ್ತು. ವರ್ಷಗಳ ಕೆಳಗೆ ಕದ್ದು ವಾಹನ ಚಲಾಯಿಸಿದ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹಾಕಿದ ಮಹಿಳೆಯನ್ನೂ ಅಲ್ಲಿನ ಪೊಲೀಸರು ಬೆನ್ನತ್ತಿದ್ದರು.

ಆದರೆ ಇಂದು, "ಮಹಿಳೆಯರ ಮೊದಲ ಗುಂಪೊಂದು ಸೌದಿ ಚಾಲನಾ ಪರವಾನಿಗೆ," ಪಡೆದುಕೊಂಡಿದೆ ಎಂದು ಅಲ್ಲಿನ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

Saudi Arabia starts issuing driving licences to women

ಸೌದಿ ಅರೇಬಿಯಾ ಹೊರತುಪಡಿಸಿ ಜಗತ್ತಿನ ಎಲ್ಲಾ ದೇಶಗಳಲ್ಲೂ ವಾಹನ ಚಲಾಯಿಸಲು ಮಹಿಳೆಯರಿಗೆ ಅವಕಾಶವಿದೆ. ಇದೀಗ ತನ್ನ ದೇಶದಲ್ಲಿದ್ದ ನಿಷೇಧವನ್ನು ಇದೇ ಜೂನ್ 24ರಂದು ಹಿಂತೆಗೆದುಕೊಳ್ಳಲು ಅಲ್ಲಿನ ಆಡಳಿತ ನಿರ್ಧರಿಸಿದೆ.

ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ದೇಶವನ್ನು ಆಧುನೀಕರಣಗೊಳಿಸಲು ಮುಂದಾಗಿದ್ದು, ಅದಕ್ಕೆ ಪೂರಕವಾಗಿ ದೇಶದಲ್ಲಿ ಉದಾರೀಕರಣ ನೀತಿ ಜಾರಿಗೆ ಇಚ್ಛಿಸಿದ್ದಾರೆ. ಇದರ ಭಾಗವಾಗಿ ಮಹಿಳೆಯರೀಗ ರಸ್ತೆಯಲ್ಲಿ ವಾಹನ ಚಲಾಯಿಸುವ ಹಕ್ಕು ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+