ಭ್ರಷ್ಟಾಚಾರದ ಆರೋಪ; ಸೌದಿ ಅರೇಬಿಯಾ ಮಿಲಿಟರಿ ಕಮ್ಯಾಂಡರ್ ವಜಾ
ರಿಯಾದ್, ಸೆ. 1: ಸೌದಿ ಅರೇಬಿಯಾ ಮಿಲಿಟರಿಯ ಉನ್ನತ ಕಮ್ಯಾಂಡರ್ ಹಾಗೂ ಅವರ ಪುತ್ರನ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಉನ್ನತಾಧಿಕಾರಿ ಸೇರಿದಂತೆ ಹಲವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಹೇಳಿದೆ.
Recommended Video
ರಾಜ ಮನೆತನದ ಹಿರಿಯ ಸದಸ್ಯ, ಜಂಟಿ ಸೇನಾ ಕಮ್ಯಾಂಡರ್ ಪ್ರಿನ್ಸ್ ಫಹಾದ್ ಬಿನ್ ತುರ್ಕಿ, ಅಲ್ ಜೊಆಫ್ ಪ್ರಾಂತ್ಯದ ಉಪ ಆಮೀರ್(emir) ಅಬ್ದುಲ್ ಅಜೀಜ್ ಬಿಬ್ ಫಹಾದ್ ಎಂಬುವರನ್ನು ಹುದ್ದೆಗಳಿಂದ ವಜಾಗೊಳಿಸಲಾಗಿದ್ದು, ಇಬ್ಬರ ವಿರುದ್ಧ ತನಿಖೆ ಆರಂಭಗೊಂಡಿದೆ.
ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅಧಿಕಾರಿಗಳು, ನಾಗರಿಕರು, ರಕ್ಷಣಾ ಸಚಿವಾಲಯದ ಸಿಬ್ಬಂದಿಗಳನ್ನು ಕೂಡಾ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಕಿಂಗ್ ಸಲ್ಮಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಸೌದಿ ಹಾಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇತ್ತೀಚೆಗೆ ಸರಣಿ ಬಂಧನ ಪ್ರಕ್ರಿಯೆ ಮೂಲಕ ತನ್ನ ಆಡಳಿತಕ್ಕೆ ವಿರುದ್ಧ ಕಾರ್ಯನಿರ್ವಹಿಸುತ್ತಿರುವವರನ್ನು ಮಟ್ಟ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಯೆಮೆನ್ ನಲ್ಲಿ ಹೌತಿ ಬಂಡಾಯಕಾರರೊಡನೆ ಜಂಟಿ ಕಾರ್ಯಾಚರಣೆಯಲ್ಲಿ ಪ್ರಿನ್ಸ್ ಫಹಾದ್ ಅವರು ಸೌದಿ ಪಡೆಯ ಕಮ್ಯಾಂಡರ್ ಆಗಿದ್ದರು. ಈಗ ಅವರ ಜಾಗಕ್ಕೆ ಮುತ್ಲಾಕ್ ಬಿನ್ ಸಲೀಂರನ್ನು ಕೂರಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ, ಆಡಳಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಲಿ ಶಿಹಾಬಿ ವಿಶ್ಲೇಷಿಸಿದ್ದಾರೆ.
2017ರಿಂದ ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನ ಮುಂದುವರೆಸಲಾಗಿದ್ದು, ಸುಮಾರು 400 ಬಿಲಿಯನ್ ರಿಯಾಲ್ಸ್(107 ಬಿಲಿಯನ್ ಡಾಲರ್) ಜಪ್ತಿ ಮಾಡಲಾಗಿದು, ಹಲವರ ಬಂಧನವಾಗಿದೆ.











Click it and Unblock the Notifications