ಅಂತರರಾಷ್ಟ್ರೀಯ ಗಡಿಯನ್ನು ತೆರೆದ ಸೌದಿ ಅರೇಬಿಯಾ: ವಿಮಾನಯಾನ ಪುನರಾರಂಭ
ರಿಯಾದ್, ಜನವರಿ 03: ಬ್ರಿಟನ್‌ನಲ್ಲಿ ಕಂಡು ಬಂದ ಕೊರೊನಾವೈರಸ್ ಹೊಸ ರೂಪಾಂತರದ ಭಯದಿಂದ ಮುಚ್ಚಿದ್ದ ತನ್ನ ಅಂತರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಸೌದಿ ಅರೇಬಿಯಾ ಭಾನುವಾರ ಘೋಷಿಸಿದೆ. ಇದರ ಜೊತೆಗೆ ತನ್ನ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಪುನರಾರಂಭಿಸಿದೆ.
ಅಧಿಕೃತ ಸೌದಿ ಪತ್ರಿಕಾ ಸಂಸ್ಥೆಯ ಪ್ರಕಾರ '' ಕೊರೊನಾವೈರಸ್ ಹೊಸ ರೂಪಾಂತರಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಹಾಕಲು ಸರ್ಕಾರ ಆದೇಶಿಸಿದೆ'' ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಈವರೆಗೆ 3,63,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6,200 ಕ್ಕೂ ಹೆಚ್ಚು ಸಾವುಗಳು ಕೂಡ ಇವೆ. ಇದು ಗಲ್ಫ್ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಪ್ರಕರಣ ಹೊಂದಿದ ದೇಶವಾಗಿದ್ದು, ಚೇತರಿಕೆ ಪ್ರಮಾಣದಲ್ಲೂ ಮುಂದಿದೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಡಿಸೆಂಬರ್ 21ರಂದು ಅಂತರರಾಷ್ಟ್ರೀಯ ವಿಮಾನಯಾನ ಮತ್ತು ಗಡಿ ಪ್ರವೇಶ ಮತ್ತು ಬಂದರುಗಳ ಮೂಲಕ ಪ್ರವೇಶವನ್ನು ಸ್ಥಗಿತಗೊಳಿಸಿತು.
ಸೌದಿ ರೀತಿಯಲ್ಲೇ ನಿಷೇಧವನ್ನು ಹೇರಿದ್ದ ಇತರೆ ಕೊಲ್ಲಿ ರಾಷ್ಟ್ರಗಳಾದ ಒಮನ್ ಮತ್ತು ಕುವೈತ್ ಕೂಡ ಇತ್ತೀಚೆಗೆ ನಿರ್ಬಂಧವನ್ನು ಹಿಂಪಡೆದಿದೆ.












Click it and Unblock the Notifications