80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ!

Written By:
Subscribe to Oneindia Kannada

ವಿಮಾನದಲ್ಲಿ ಪ್ರಯಾಣಿಸುವುದು ಒಂದು ಮುದ ನೀಡುವ ಅನುಭವ, ಆದರೆ ಆಗಸದಲ್ಲಿ ಲೋಹದ ಹಕ್ಕಿಯ ಜೊತೆ ಹಾರುತ್ತಿರಬೇಕಾದರೆ ಗಿಡುಗಗಳೂ ಜೊತೆಗಿದ್ದರೆ ಹೇಗಿರಬಹುದು ಅನುಭವ?

ದುಡ್ಡಿನ ಸುಪ್ಪತ್ತಿಗೆಯಲ್ಲೇ ಮಲುಗುವಷ್ಟು ಆಗರ್ಭ ಶ್ರೀಮಂತರಾಗಿರುವ ಸೌದಿ ಅರೇಬಿಯಾದ ರಾಜಮನೆತನದ ' ರಾಜಕುಮಾರ' ನೊಬ್ಬ, ಒಂದಲ್ಲಾ,. ಎರಡಲ್ಲಾ ಬರೋಬ್ಬರಿ 80 ಗಿಡುಗಗಳ ಜೊತೆ ವಿಮಾನದಲ್ಲಿ ಪ್ರಯಾಣಸಿದ್ದ ಎನ್ನುವ ಸುದ್ದಿ ಮತ್ತು ಫೋಟೋ ಈಗ ಸಾಮಾಜಿಕ ತಾಣದಲ್ಲಿ ಸುದ್ದಿ ಮಾಡುತ್ತಿದೆ.

ಇದೊಂದು ತೀರಾ ಅಪರೂಪದ ಘಟನೆಯೆಂದು ಅನಿಸಿದರೂ, ಮಧ್ಯಪ್ರಾಚ್ಯ ಭಾಗದಲ್ಲಿ ತರಬೇತಿ ನೀಡಿರುವ ಗಿಡುಗಗಳನ್ನು (ಫಾಲ್ಕನ್ಸ್) ಜೊತೆಗೆ ಕರೆದುಕೊಂಡು ಹೋಗುವುದು, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮತ್ತು ರಾಜಮನೆತನಕ್ಕೆ ಪ್ರತಿಷ್ಠೆಯ ವಿಷಯವಂತೆ. (ಸೌದಿ ಯುವರಾಜನಿಗೆ ಗಲ್ಲು ಶಿಕ್ಷೆ)

Saudi Arabia prince buys 80 plane tickets for unusual guests

ರೆಡ್ಡಿಟ್ ಅಂತರ್ಜಾಲ ಬಿಡುಗಡೆ ಮಾಡಿರುವ ಫೋಟೋ ಅವಲೋಕಿಸುವುದಾದರೆ, 80 ಗಿಡುಗಗಳನ್ನ ಹಾರಲಾಗದಂತೆ ರೆಕ್ಕೆಗಳನ್ನ ಕಟ್ಟಿ ವಿಮಾನದ ಸೀಟಿನ ಮೇಲೆ ಕೂರಿಸಲಾಗಿದೆ.

ಅರಬ್ ಗಣರಾಜ್ಯ, ವಿಮಾನದಲ್ಲಿ ಗಿಡುಗಗಳನ್ನು ಸಾಗಿಸಲು ' ಫಾರೆಸ್ಟ್ ಗ್ರೀನ್' ಎನ್ನುವ ಹೆಸರಿನ ವಿಶೇಷ ಪಾಸ್ಪೋರ್ಟ್ ಇದಕ್ಕಾಗಿಯೇ ವ್ಯವಸ್ಥೆ ಮಾಡಿದೆಯಂತೆ. ಈ ಪಾಸ್ಪೋರ್ಟ್ ಇದ್ದರೆ ಬಹ್ರೈನ್, ಕುವೈಟ್, ಒಮನ್, ಕತಾರ್, ಸೌದಿ ಅರೇಬಿಯಾ, ಪಾಕಿಸ್ತಾನ, ಸಿರಿಯಾ ಮತ್ತು ಮೊರೊಕ್ಕೊ ದೇಶಕ್ಕೆ ಪ್ರಯಾಣಿಸಬಹುದು.

ಗಿಡುಗ ಅರಬ್ ಗಣರಾಜ್ಯದ ರಾಷ್ಟ್ರೀಯ ಪಕ್ಷಿಯಾಗಿದ್ದು, ಗಿಡುಗಗಳಿಗಾಗಿಯೇ ಅಲ್ಲಿನ ಸರಕಾರ ತನ್ನ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ವಿಶೇಷ ಕೌಂಟರ್ ಅನ್ನು ತೆರೆದಿರುತ್ತದೆ ಎಂದು ಬ್ಯುಸಿನೆಸ್ ಇನ್ಸೈಡರ್ ಅಂತರ್ಜಾಲ ವರದಿ ಮಾಡಿದೆ.

ಸೌದಿಯ ರಾಜಕುಮಾರ ಎಂಬತ್ತು ಗಿಡುಗಗಳ ಜೊತೆ ಕತಾರ್ ಏರ್ವೇಸ್ ನಲ್ಲಿ ಸೋಮವಾರ ಬೆಳಗ್ಗೆ (ಜ 30) ಪ್ರಯಾಣಿಸುತ್ತಿದ್ದ ಎಂದು ಹೇಳಲಾಗುತ್ತಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಒಂದು ಗಿಡುಗಗಳನ್ನು ವಿಮಾನದಲ್ಲಿ ಸಾಗಿಸಲು 200-500 ಡಾಲರ್ ವರೆಗೆ ವ್ಯಯಿಸಬೇಕಾಗುತ್ತದೆ.

80 ಗಿಡುಗಗಳಿಗೆ ತಗಲುವ ವೆಚ್ಚವನ್ನು ಸೌದಿಯ ರಾಜಕುಮಾರ ಪಾವತಿಸಿದ್ದ ಎನ್ನುವ ಸುದ್ದಿಯಿದೆ. (ಚಿತ್ರಕೃಪೆ: ರೆಡ್ಡಿಟ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an unusual incident, Saudi Arabia prince buys 80 plane tickets for hawks. Unconfirmed report says, Prince traveled with hawks in Kuwait Airways on Monday (Jan 30)
Please Wait while comments are loading...