Get Updates
Get notified of breaking news, exclusive insights, and must-see stories!

ಸೌದಿ ಅರೇಬಿಯಾದಲ್ಲಿ ರಾಮನಾಮ ನಿಷೇಧ

ಲಂಡನ್, ಮಾರ್ಚ್ 15: ಮುಂದಿನ ತಿಂಗಳೇ ಶ್ರೀರಾಮನವಮಿ. ಅದು ಭಾರತೀಯರ ಭಕ್ತಿಭಾವದ ಹಬ್ಬ/ ಆಚರಣೆ. ಆದರೆ ಅತ್ತ, ಸೌದಿ ಅರೇಬಿಯಾದಲ್ಲಿ ರಾಮನಾಮ ಜಪಿಸುವುದಕ್ಕೆ ನಿಷೇಧ ಹೇರಲಾಗಿದೆ. ಯಾಕಪ್ಪಾ ಅಂದರೆ ಅಲ್ಲಿನ ರಾಜಾಡಳಿತ ಮತ್ತು ಸಂಸ್ಕೃತಿಗೆ ಧಕ್ಕೆಯೊದಗುತ್ತದೆ. ಹಾಗಾಗಿ ರಾಮನಾಮಕ್ಕೆ ಕೊಕ್ಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ದೇಶದ ಧರ್ಮ ಮತ್ತು ಸಂಸ್ಕೃತಿಗೆ ವಿರೋಧಾಭಾಸವಾಗುವ ಒಟ್ಟು 50 ಹೆಸರುಗಳನ್ನು ಸೌದಿ ಅರೇಬಿಯಾ ರಾಜಾಡಳಿತ ಗುರುತಿಸಿದ್ದು, ಆ ಹೆಸರುಗಳನ್ನು ದೇಶದ ಪ್ರಜೆಗಳು ತಮ್ಮ ಮಕ್ಕಳಿಗೆ ಇಡಬಾರದು ಎಂದು ಅಲ್ಲಿನ ಸರಕಾರ ಆದೇಶ ನೀಡಿದೆ. ಇದರಲ್ಲಿ ಭಾರತದ ರಾಮ ಮತ್ತು ಮಾಯಾ ನಾಮಕ್ಕೆ ಕತ್ತರಿಬಿದ್ದಿದೆ.

ಇಸ್ಲಾಂ ವಿರೋಧಿ ಮತ್ತು ಇಸ್ಲಾಮೇತರ ಹೆಸರುಗಳು ಇವಾಗಿವೆ. ಹಾಗಾಗಿ ನಮ್ಮ ಮಕ್ಕಳಿಗೆ ಈ ಐವತ್ತೂ ಹಸರುಗಳನ್ನು ನಮ್ಮ ಮಕ್ಕಳಿಗೆ ನಾಮಕರಣ ಮಾಡುವುದು ಬೇಡ ಎಂದು ಅಲ್ಲಿನ ಸರಕಾರ ಸ್ಪಷ್ಟಪಡಿಸಿದೆ. (3626 ರಾಮನ ಹೆಸರಲ್ಲಿ 3309 ಕೃಷ್ಣ ಹೆಸರಿನಲ್ಲಿ!)

saudi-arabia-interior-ministry-bans-50-names-including-rama-hindu-god

ಪಟ್ಟಿ ಹೇಗಿದೆಯೆಂದರೆ ಅದರಲ್ಲಿ Binyamin ಹೆಸರನ್ನೂ ನಿಷೇಧಿಸಲಾಗಿದೆ. ವಾಸ್ತವವಾಗಿ ಈ ಹೆಸರು ಇಸ್ಲಾಂ ಪ್ರವಾದಿ ಜಾಕೆಬ್ ಪುತ್ರನ ಹೆಸರು. ಅದಕ್ಕೂ ನಿಷೇಧ ಹೇರಲಾಗಿದೆ. ಏಕೆ ಅಂದರೆ ಇಸ್ರೇಲಿನ ಈಗಿನ ಪ್ರಧಾನಿ ಇದ್ದಾರಲ್ಲಾ ಬೆಂಜಮಿನ್ ನೆತನ್ಯಾಹು. ಆತನ ಹೆಸರು ಈ Binyamin ಜತೆಗೆ ತಳಕು ಹಾಕಿಕೊಂಡಿದೆ. ಹಾಗಾಗಿ ಅದು ನಮ್ಮ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಒಳಾಡಳಿತ ಸಚಿವಾಲಯ ಘೋಷಿಸಿದೆ.

Gulf News ವರದಿಯಲ್ಲಿ ಪ್ರಕಟವಾಗಿರುವ ನಿಷೇಧಿತ ಹೆಸರುಗಳ ಪಟ್ಟಿ ಹೀಗಿದೆ: Malaak (angel), Abdul Aati, Abdul Naser, Abdul Musleh, Binyamin (Arabic for Benjamin), Naris, Yara, Sitav, Loland, Tilaj, Barrah, Abdul Nabi, Abdul Rasool, Sumuw (highness), Al Mamlaka (the kingdom), Malika (queen), Mamlaka (kingdom), Tabarak (blessed), Nardeen, Sandy, Rama (Hindu god), Maline, Elaine, Inar, Maliktina, Maya, Linda, Randa, Basmala (utterance of the name of God), Jibreel (angel Gabriel), Abdul Mu'een, Abrar, Iman, Bayan, Baseel, Wireelam, Nabi (prophet), Nabiyya (female prophet), Amir (prince), Taline, Aram, Nareej, Rital, Alice, Lareen, Kibrial, Lauren.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+