ಯೋಗ ಶಿಕ್ಷಣಕ್ಕೆ ಸೌದಿ ಅರೇಬಿಯಾದಿಂದ ಮಾನ್ಯತೆ

Subscribe to Oneindia Kannada

ರಿಯಾದ್, ನವೆಂಬರ್ 14: ಯೋಗ ಶಿಕ್ಷಣಕ್ಕೆ ಸೌದಿ ಅರೇಬಿಯಾ ಮಾನ್ಯತೆ ನೀಡಿದೆ; ಇದನ್ನು ಕ್ರೀಡೆ ಎಂದು ಅದು ಘೋಷಿಸಿದೆ.

ಯೋಗ ಕಲಿಸಿದ 'ಅಪರಾಧ'ಕ್ಕೆ ಮುಸ್ಲಿಂ ಮಹಿಳೆಗೆ ಜೀವಬೆದರಿಕೆ ಕರೆ!

ಸೌದಿ ಅರೇಬಿಯಾದ ವ್ಯಾಪಾರ ಮತ್ತು ಕೈಗಾರಿಕೆ ಇಲಾಖೆಯ ನಿಯಮದ ಪ್ರಕಾರ ಯೋಗ ತರಬೇತಿ ನೀಡುವವರು ಲೈಸನ್ಸ್ ಪಡೆಯಬೇಕಾಗಿದೆ.

Saudi Arabia aproves Yoga as a form of sports

ನೌಫ್ ಮರ್ವಾಯಿ ಈ ನಿಯಮದ ಅನುಸಾರ ಯೋಗ ಕಲಿಸಲು ಪರವಾನಿಗೆ ಪಡೆದ ಮೊದಲ ಯೋಗ ಶಿಕ್ಷಕರಾಗಿದ್ದಾರೆ. ಯೋಗ ಕಲಿಸುವುದಕ್ಕೂ ವೈಯಕ್ತಿಕ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮರ್ವಾಯಿ ನಂಬಿದ್ದಾರೆ.

ಇತ್ತೀಚೆಗಷ್ಟೇ ರಾಂಚಿಯ ಮುಸ್ಲಿಂ ಯುವತಿಯೊಬ್ಬರು ಯೋಗ ತರಬೇತಿ ನೀಡಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದರು. ಇದೇ ಸಂದರ್ಭದಲ್ಲಿ ಅದೇ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಯೋಗ ಅಳವಡಿಸಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Saudi Arabia on Tuesday approved teaching of Yoga and declared it as a sport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ