Cannes Film Festival: ದೇಸಿ ಉಡುಗೆಯಲ್ಲಿ ಸಾರಾ ಮಿಂಚಿಂಗ್!
ಫ್ರಾನ್ಸ್: ಇಲ್ಲಿ ನಡೆಯುತ್ತಿರುವ ಕೇನ್ಸ್ ಚಿತ್ರೋತ್ಸವ ಕಲರ್ಫುಲ್ ಆಗಿದೆ. ಅದರಲ್ಲೂ ಸಾರಾ ಅಲಿ ಖಾನ್ ತಮ್ಮ ವಿಶಿಷ್ಟ ಉಡುಗೆ ಮೂಲಕ ನೆರೆದವರ ಗಮನ ಸೆಳೆದರು. ಸಾರಾ ಅಲಿ ಖಾನ್ ಅವರಿಗೆ ಇದು ಮೊದಲ ಕೇನ್ಸ್ ಚಿತ್ರೋತ್ಸವ ಕಾರ್ಯಕ್ರಮವಾಗಿದ್ದು, ಇಂಟರ್‌ನೆಟ್‌ನಲ್ಲಿ ಸಾರಾ ತೊಟ್ಟಿದ್ದ ಉಡುಗೆ ಕುರಿತು ಚರ್ಚೆ ಆರಂಭವಾಗಿದೆ. ಅಲ್ಲದೆ ತಮ್ಮ ನೆಚ್ಚಿನ ನಟಿ ಫೋಟೋವನ್ನ ಫ್ಯಾನ್ಸ್ ಶೇರ್ ಮಾಡಿಕೊಳ್ತಿದ್ದಾರೆ.
ಈ ಬಾರಿಯ ಕೇನ್ಸ್ ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರ ದಂಡೇ ಕಾಣಿಸಿಕೊಂಡಿದೆ. ಹಾಗೇ ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಲೆಹಂಗಾ ತೊಟ್ಟು ಈ ನಟಿ ರೆಡ್ ಕಾರ್ಪೆಟ್ ಮೇಲೆ ಮೊದಲ ಬಾರಿಗೆ ನಡೆದು ಬಂದಿದ್ದು ನೆರೆದವರ ಗಮನ ಸೆಳೆಯುವ ಜೊತೆಗೆ, ನಟಿಯ ಅಭಿಮಾನಿಗಳು ಫುಲ್ ಖುಷ್ ಆಗಿದ್ರು. ಜಗತ್ತಿನ ದೊಡ್ಡ ಚಿತ್ರೋತ್ಸವ ಕಾರ್ಯಕ್ರಮಗಳಲ್ಲಿ ಕೇನ್ಸ್ ಚಿತ್ರೋತ್ಸವ ಕೂಡ ಒಂದಾಗಿದ್ದು, ಜಗತ್ತಿನ ಮೂಲೆ ಮೂಲೆಯಿಂದ ನಟ, ನಟಿಯರು ಭಾಗವಹಿಸುತ್ತಾರೆ.

ದೇಸಿ ಉಡುಗೆ ತೊಟ್ಟಿದ್ದಕ್ಕೆ ಮೆಚ್ಚುಗೆ
ಸಾರಾ ಅಲಿ ಖಾನ್ ಭಾರತೀಯ ದೇಸಿ ಉಡುಗೆಯಲ್ಲಿ ಕಾಣಿಸಿಕೊಂಡು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಇನ್ನು ಹೀಗೆ ನಮ್ಮ ದೇಸಿ ಉಡುಗೆಯಲ್ಲಿ ಕಾಣಿಸಿಕೊಂಡು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ನಟಿ ಸಾರಾ ಅಲಿ ಖಾನ್ ಅವರ ಬಗ್ಗೆ ಅಭಿಮಾನಿಗಳು ಅದರಲ್ಲೂ ಪ್ರಮುಖವಾಗಿ ಭಾರತೀಯ ಅಭಿಮಾನಿಗಳು ಹೆಮ್ಮೆಯ ಮಾತನ್ನಾಡಿದ್ದಾರೆ. ಸಾಮಾನ್ಯವಾಗಿ ನಟಿಯರು ಇಂತಹ ಚಿತ್ರೋತ್ಸವದಲ್ಲಿ ಪಾಶ್ಚಿಮಾತ್ಯ ಉಡುಗೆ ತೊಟ್ಟು ಬರುತ್ತಾರೆ, ಆದರೆ ಸಾರಾ ಅಲಿ ಖಾನ್ ಮಾತ್ರ ದೇಸಿ ಉಡುಗೆ ತೊಟ್ಟು ಮಿಂಚಿದ್ದಾರೆ.
ಚಿತ್ರೋತ್ಸವಕ್ಕೆ 76 ವರ್ಷಗಳ ಇತಿಹಾಸ
ಹೌದು, ಕೇನ್ಸ್ ಚಿತ್ರೋತ್ಸವ ಶುರುವಾಗಿದ್ದು 76 ವರ್ಷಗಳ ಹಿಂದೆ. ಹೀಗೆ ಸುಮಾರು ಮುಕ್ಕಾಲು ಶತಮಾನಗಳ ಇತಿಹಾಸ ಕೇನ್ಸ್ ಚಿತ್ರೋತ್ಸವಕ್ಕೆ ಇದೆ. 1946ರ ಸೆಪ್ಟೆಂಬರ್ 20ರಂದು ಮೊದಲ ಬಾರಿಗೆ ಕೇನ್ಸ್ ಚಿತ್ರೋತ್ಸವದ ಸಮಾರಂಭ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಸುಮಾರು 76 ವರ್ಷಗಳಿಂದ ಕೇನ್ಸ್ ಚಿತ್ರೋತ್ಸವ ನಡೆದುಕೊಂಡು ಬರುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು ಮಾತ್ರವಲ್ಲ, ಅಭಿಮಾನಿಗಳಿಗೂ ಕೇನ್ಸ್ ಚಿತ್ರೋತ್ಸವ ಅಂದ್ರೆ ಪ್ರಾಣ. ಯಾಕಂದ್ರೆ ಸಾಕಷ್ಟು ಗಮನ ಸೆಳೆಯುವ ಕೇನ್ಸ್ ಚಿತ್ರೋತ್ಸವದಲ್ಲಿ ನಟ, ನಟಿಯರ ಉಡುಗೆ ಸಖತ್ ಹೈಲೈಟ್.
ಒಟ್ನಲ್ಲಿ ನಟಿ ಸಾರಾ ಅಲಿ ಖಾನ್ ಈ ಬಾರಿ ಭಾರತದ ದೇಸಿಯ ಉಡುಗೆ ಮೂಲಕ ಗಮನ ಸೆಳೆದಿದ್ದಾರೆ. ನಟಿ ಸಾರಾ ಬಗ್ಗೆ ಅಭಿಮಾನಿಗಳು ಕೂಡ ಹೆಮ್ಮೆಯ ಮಾತುಗಳನ್ನ ಆಡುತ್ತಿದ್ದಾರೆ. ಸಾಮಾನ್ಯವಾಗಿ ನಟಿಯರು ಈ ರೀತಿಯ ಕಾರ್ಯಕ್ರಮದಲ್ಲಿ ಪಾಶ್ಚಿಮಾತ್ಯ ಉಡುಗೆ ಮೊರೆ ಹೋಗುತ್ತಾರೆ. ಆದ್ರೆ ಸಾರಾ ಅಲಿ ಖಾನ್ ಮಾತ್ರ ದೇಸಿ ಉಡುಗೆಯ ಮೊರೆ ಹೋಗುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಸಾರಾ ಅಲಿ ಖಾನ್ ಫೋಟೋ ಇಂಟರ್ನೆಟ್‌ನಲ್ಲಿ ಸುನಾಮಿ ಎಬ್ಬಿಸಿದ್ದು, ಅಭಿಮಾನಿಗಳ ಹೃದಯ ಕದ್ದಿದ್ದಾರೆ ಸಾರಾ ಅಲಿ ಖಾನ್.












Click it and Unblock the Notifications