ಉಕ್ರೇನ್ ವಿರುದ್ಧ ರಷ್ಯಾ ಭೀಕರ ದಾಳಿ, 15 ಜನರು...
ಡಿನಿಪ್ರೊ: ರಷ್ಯಾ ತನ್ನ ಶತ್ರು ವಿರುದ್ಧ ಡೆಡ್ಲಿ ಅಟ್ಯಾಕ್ ಮುಂದುವರಿಸಿದೆ. ಉಕ್ರೇನ್ ದೇಶದ ನಗರ ಡಿನಿಪ್ರೊ ಮೇಲೆ ದಾಳಿ ನಡೆಸಿರುವ ರಷ್ಯಾ ಅಲ್ಲಿನ ಜನ ಜೀವನ ಛಿದ್ರ ಮಾಡಿದೆ. ಈ ನಡುವೆ ರಷ್ಯಾ ಕಡೆಯಿಂದ ಹಾರಿಬಂದ ಒಂದು ಮಿಸೈಲ್ ನೇರವಾಗಿ ಆಸ್ಪತ್ರೆ ಮೇಲೆ ಬಿದ್ದು ಚಿಕಿತ್ಸೆ ಪಡೆಯಲು ಬಂದಿದ್ದವರ ಜೀವವೇ ಹಾರಿ ಹೋಗಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಡಿನಿಪ್ರೊ ಉಕ್ರೇನ್‌ನ ಒಂದು ಸುಂದರ ನಗರ, ಆದ್ರೆ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಸುಂದರ ಸಿಟಿ ನರಕವಾಗಿದೆ. ಇಲ್ಲಿನ ಜನರು ಜೀವ ಉಳಿಸಿಕೊಳ್ಳಲು ತಮ್ಮ ಊರು ಬಿಟ್ಟು ಹೋಗಿದ್ದಾರೆ. ಇದೇ ಹೊತ್ತಲ್ಲಿ ರಷ್ಯಾ ಅಟ್ಯಾಕ್ ಹೆಚ್ಚಿಸಿದ್ದು ಸಿಕ್ಕ ಸಿಕ್ಕ ಕಡೆ ಮಿಸೈಲ್‌ಗಳು ಬೀಳುತ್ತಿವೆ. ಹೀಗೆ ರಷ್ಯಾ ಸೇನೆ ಹಾರಿಸಿದ ಕ್ಷಿಪಣಿ ಒಂದು ನೇರ ಡಿನಿಪ್ರೊ ನಗರದ ಆಸ್ಪತ್ರೆ ಮೇಲೆ ಬಿದ್ದಿದೆ (Russia Ukraine War). ಚಿಕಿತ್ಸೆ ಪಡೆಯಲು ಬಂದಿದ್ದವರ ಮೇಲೆ ಕ್ಷಿಪಣಿ ದಾಳಿಯಾಗಿದ್ದು, ಕನಿಷ್ಠ ಒಬ್ಬ ಮೃತಪಟ್ಟು 15 ಜನ ಸಾವು & ಬದುಕಿನ ನಡುವೆ ಹೋರಾಡುತ್ತಿದ್ದಾರೆ.

'ರಷ್ಯಾಗೆ ರಕ್ತದಾಹ' ಅಂತು ಉಕ್ರೇನ್!
ಡಿನಿಪ್ರೊ ಸಿಟಿ ಮೇಲೆ ರಷ್ಯಾ ಸೇನೆ ನಡೆಸಿರುವ ಕ್ಷಿಪಣಿ ದಾಳಿಗೆ ಆಕ್ರೋಶ ಹೊರಹಾಕಿರುವ ಉಕ್ರೇನ್, 'ಈ ದಾಳಿಯ ಮೂಲಕ ರಷ್ಯಾ ಭಯೋತ್ಪಾದಕರು ಮತ್ತೊಮ್ಮೆ ತಮ್ಮ ಸ್ಥಾನ ಏನು ಎಂಬುದನ್ನ ತೋರಿಸಿದ್ದು, ಮಾನವೀಯತೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ' ಅಂತಾ ಉಕ್ರೇನ್ ಆರೋಪಿಸಿದೆ. ಹಾಗೇ 'ರಷ್ಯಾ ರಕ್ತದಾಹ ಇನ್ನು ಕೂಡ ಕಡಿಮೆಯಾಗಿಲ್ಲ' ಅನ್ನುವಂತೆ ಉಕ್ರೇನ್ ಅಧ್ಯಕ್ಷ ಮಾತನಾಡಿದ್ದು, ಪರಿಸ್ಥಿತಿಯನ್ನು ಕಗ್ಗಂಟಾಗಿಸಿದೆ. ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಮುನ್ಸೂಚನೆ ಕೂಡ ಸಿಗುತ್ತಿದೆ.
ಅಮೆರಿಕ ಕೊಟ್ಟ ಅಸ್ತ್ರಗಳು ಏನಾದ್ವು?
ರಷ್ಯಾ & ಉಕ್ರೇನ್ ಯುದ್ಧ 456ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟುದಿನ ಪರೋಕ್ಷವಾಗಿ ಉಕ್ರೇನ್ ಪರ ನಿಂತಿದ್ದ ಅಮೆರಿಕ ನೇರವಾಗಿಯೂ ಸಹಾಯ ಮಾಡುತ್ತಿದೆ. ಉಕ್ರೇನ್‌ಗೆ ಭಾರಿ ಪ್ರಮಾಣದ ಅಸ್ತ್ರ ಪೂರೈಕೆ ಮಾಡಿದ ಆರೋಪ ಕೂಡ ಅಮೆರಿಕ ವಿರುದ್ಧ ಇದೆ. ಈ ಹೊತ್ತಲ್ಲಿ ರಷ್ಯಾ ಪಡೆಗಳು ಕೂಡ ಉಕ್ರೇನ್ ವಿರುದ್ಧ ತಮ್ಮ ದಾಳಿ ತೀವ್ರಗೊಳಿಸಿ ಸೇಡು ತೀರಿಸಿಕೊಳ್ಳುತ್ತಿವೆ. ಕಳೆದ 15 ದಿನದಿಂದ ಸುಮಾರು 30ಕ್ಕೂ ಹೆಚ್ಚು ರಷ್ಯಾದ ಕ್ಷಿಪಣಿಗಳನ್ನ ಹೊಡೆದು ಉರುಳಿಸಿದ್ದಾಗಿ ಉಕ್ರೇನ್ ಹೇಳಿತ್ತು. ಆದರೆ ಈಗ ಅದೆಲ್ಲಾ ಠುಸ್ ಪಟಾಕಿ ಆಗೋಗಿದೆ!

ಮುಂದೆ ಏನಾಗುತ್ತೋ ರಷ್ಯಾಗೆ ಗೊತ್ತು!
ಉಕ್ರೇನ್‌ಗೆ ಈಗ ಅಮೆರಿಕ ಮಾತ್ರವಲ್ಲ ನ್ಯಾಟೋ ಅಂದ್ರೆ ಯುರೋಪ್‌ನ ಬಹುತೇಕ ರಾಷ್ಟ್ರಗಳು ನೆರವು ನೀಡುತ್ತಿವೆ. ಉಕ್ರೇನ್ ಯುದ್ಧದಲ್ಲಿ ಗೆದ್ರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಗೆಲುವು ಸಿಗುತ್ತೆ. ಪ್ರಮುಖವಾಗಿ ಯುರೋಪ್‌ನಲ್ಲಿ ಹೊಸ ಯುಗ ಸೃಷ್ಟಿಸಿ ಅಮೆರಿಕದ ಹಿಡಿತ ಬಿಗಿ ಮಾಡುವ ಸಂಭವ ಹೆಚ್ಚಾಗಿರುವ ಕಾರಣ ಉಕ್ರೇನ್ ಗೆಲುವಿಗೆ ಅಮೆರಿಕದ ಜೊತೆ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ಕೂಡ ಬಲವಾಗಿ ನಿಂತಿದೆ. ಅದರಲ್ಲೂ ನ್ಯಾಟೋ ಪಡೆ ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.
ಭೀಕರ ಯುದ್ಧ + ಆರ್ಥಿಕ ಮಹಾ ಕುಸಿತ!
ಕೊರೊನಾ ಕಂಟಕದ ಬಳಿಕ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ, ಇದರ ನಡುವೆ ಯುದ್ಧ ಬೇರೆ ಶುರುವಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಇನ್ನು ಅಮೆರಿಕದ ಪಾಡು ಕೇಳಬೇಕಿಲ್ಲ. ಈ ಕಷ್ಟದಲ್ಲೇ ಬ್ಯಾಂಕ್‌ಗಳು ಕೂಡ ಅಮೆರಿಕದಲ್ಲಿ ಬಾಗಿಲು ಹಾಕಿಕೊಂಡು ಹೋಗುತ್ತಿವೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ರಷ್ಯಾ ಸೋಲಿಸಿ, ಆದಷ್ಟು ಬೇಗ ಯುದ್ಧ ಮುಗಿಸುವ ಐಡಿಯಾ ಅಮೆರಿಕದ್ದು. ಆದ್ರೆ ಏನ್ ಮಾಡೋದು ರಷ್ಯಾ ಸೋಲುತ್ತಿಲ್ಲ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ವಾರ್ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ರಷ್ಯಾ ಸೇನೆಯು ತನ್ನ ಬಳಿ ಇರುವ ಅಸ್ತ್ರಗಳನ್ನ ಮತ್ತಷ್ಟು ವಿನಾಶಕ್ಕೆ ಬಳಸಿಕೊಳ್ಳುತ್ತಿದೆ. ಹೀಗೆ ಉಕ್ರೇನ್ ವಿರುದ್ಧ ಗೆಲುವನ್ನು ಸಾಧಿಸಲು ಪಣತೊಟ್ಟಿದೆ. ಇದೆಲ್ಲಾ ನೋಡುತ್ತಿದ್ದರೆ ರಷ್ಯಾ & ಉಕ್ರೇನ್ ಯುದ್ಧ ಇನ್ನೂ ಎಷ್ಟು ದಿನ ಕಾಲ ಮುಂದುವರಿಯುತ್ತೋ ಎಂಬ ಭೀತಿ ಜಗತ್ತನ್ನು ಕಾಡುತ್ತಿದೆ.












Click it and Unblock the Notifications