ಫ್ರೀ ಆಗಿ ಕೊಟ್ಟರು ರಷ್ಯಾದ 'ಸ್ಪುಟ್ನಿಕ್ ವಿ' ಕೊರೊನಾ ಲಸಿಕೆ ತೆಗೆದುಕೊಳ್ಳುವವರು ಕಡಿಮೆ: ಸಮೀಕ್ಷೆ
ಮಾಸ್ಕೊ, ಡಿಸೆಂಬರ್ 08: ಕೋವಿಡ್-19 ನಿಯಂತ್ರಣಕ್ಕಾಗಿ ರಷ್ಯಾ ಅಭಿವೃದ್ಧಿಪಡಿಸಿರುವ 'ಸ್ಪುಟ್ನಿಕ್ ವಿ' ಕೋವಿಡ್ ಲಸಿಕೆಯನ್ನು ಉಚಿತವಾಗಿ ಕೊಟ್ಟರೂ ರಷ್ಯಾದಲ್ಲಿ ಶೇಕಡಾ 59ರಷ್ಟು ಮಂದಿ ಸ್ವೀಕರಿಸಲು ಸಿದ್ಧವಾಗಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.
ಸ್ವತಂತ್ರ ಮತದಾನ ಸಂಸ್ಥೆಯಾದ ಲೆವಾಡಾ ಕೇಂದ್ರವು ನಡೆಸಿದ ಸಮೀಕ್ಷೆ ಪ್ರಕಾರ 'ಸ್ಪುಟ್ನಿಕ್ ವಿ' ಕೋವಿಡ್ ಲಸಿಕೆ ಮೇಲೆ ರಷ್ಯಾದ ಅನೇಕ ಜನರಿಗೆ ನಂಬಿಕೆ ಇಲ್ಲ ಹೀಗಾಗಿ ಸಮೀಕ್ಷೆಯಲ್ಲಿ ಭಾಗಿಯಾದ ಶೇಕಡಾ 59 ರಷ್ಟು ಜನರು ಕೊರೊನವೈರಸ್ ಲಸಿಕೆ ಉಚಿತ ಮತ್ತು ಸ್ವಯಂಪ್ರೇರಿತವಾಗಿದ್ದರೂ ಸಹ ಅದನ್ನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಕೊರೊನಾವೈರಸ್ ಬಿಡುಗಡೆ ಮಾಡಿದ ಮೊದಲ ರಾಷ್ಟ್ರವಾದ ರಷ್ಯಾ ತನ್ನ 'ಸ್ಪುಟ್ನಿಕ್ ವಿ' ಕೋವಿಡ್ ಲಸಿಕೆಯನ್ನು ಶಿಕ್ಷಕರು, ವೈದ್ಯಕೀಯ ಕಾರ್ಯಕರ್ತರು ಮತ್ತು ಮಾಸ್ಕೋದಲ್ಲಿ 61 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾಮಾಜಿಕ ಸೇವಾ ಉದ್ಯೋಗಿಗಳಿಗೆ ಉಚಿತವಾಗಿ ನೀಡುತ್ತಿದೆ.

ಆದರೆ ರಷ್ಯಾದ ಲಸಿಕೆಯ ಮೇಲೆ ಅಲ್ಲಿನ ಸ್ಥಳೀಯ ಜನರಿಗೆ ನಂಬಿಕೆಯ ಕೊರತೆಯು ಅಡ್ಡಿಯನ್ನುಂಟುಮಾಡಿದೆ. ದೇಶವು ಈಗಾಗಲೇ ಪ್ರಬಲವಾದ ಕೊರೊನಾವೈರಸ್ ಸೋಂಕನ್ನು ಎದುರಿಸುತ್ತಿದ್ದು, ದಿನಕ್ಕೆ ಸುಮಾರು 500 ಸಾವುಗಳು ಸಂಭವಿಸುತ್ತವೆ.

ಕೊರೊನಾವೈರಸ್ ಲಸಿಕೆ ಬಳಕೆಗೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಸ್ಟ್‌ನಲ್ಲಿ ಘೋಷಿಸಿದ್ದರು. ಆದರೆ ಇದು ದೊಡ್ಡ ಪ್ರಮಾಣದ ವೈದ್ಯಕೀಯ ಪ್ರಯೋಗದಲ್ಲಿ ಅಭ್ಯರ್ಥಿಯನ್ನು ಪರೀಕ್ಷಿಸಿರಲಿಲ್ಲ. ಆದರೆ ಅದೇನೆ ಇದ್ದರೂ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪುಟಿನ್ ಹೇಳಿದರು.












Click it and Unblock the Notifications