3ನೇ ಮಹಾಯುದ್ಧ: ರಷ್ಯಾ ಅಧ್ಯಕ್ಷರ ಕೊಲೆಗೆ ಉಕ್ರೇನ್ ಸ್ಕೆಚ್?

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಜೋರಾಗಿದೆ, ಅತ್ತ ಜಗತ್ತು 3ನೇ ಮಹಾಯುದ್ಧದ ಆತಂಕದಲ್ಲೇ ದಿನದೂಡುತ್ತಿರುವಾಗ ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಉಕ್ರೆನ್ ಸ್ಕೆಚ್ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಪುಟಿನ್ ಮನೆ ಮೇಲೆ ಹಾರಾಡಿದ್ದ ಉಕ್ರೇನ್ ಡ್ರೋನ್ ಹೊಡೆದುರುಳಿಸಿದ್ದೀವಿ ಅಂತಾ ರಷ್ಯಾ ತಿಳಿಸಿದೆ. ಹಾಗಾದರೆ ಉಕ್ರೇನ್‌ಗೆ ಈಗ ರಷ್ಯಾ ಒಂದು ಗತಿ ಕಾಣಿಸುತ್ತಾ? ಮುಂದೆ ಓದಿ.

1 ವರ್ಷದಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಲೇ ಇದೆ

ಈ ನಡುವೆ ಇತ್ತೀಚೆಗೆ ರಷ್ಯಾ ತನ್ನ ಸೇನಾ ಕಾರ್ಯಚರಣೆ ತೀವ್ರಗೊಳಿಸಿ, ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಪುಟಿನ್ ಮನೆ ಮೇಲೆ ಡ್ರೋನ್ ಹಾರಾಡಿದೆ. ಅನುಮಾನಾಸ್ಪದ ರೀತಿಯಲ್ಲಿ ಡ್ರೋನ್ ಪುಟಿನ್ ಮನೆ ಬಳಿ ಎಂಟ್ರಿ ಕೊಟ್ಟಿದ್ದೇ ತಡ, ಮುಲಾಜೆ ನೋಡದೆ ರಷ್ಯಾ ಸೇನೆ ಅದನ್ನ ಹೊಡೆದು ಉರುಳಿಸಿದೆಯಂತೆ. ತಕ್ಷಣ ರಷ್ಯಾ ಅಧ್ಯಕ್ಷ ಪುಟಿನ್ ಮನೆಗೆ ಏನಾಯ್ತು? ಪುಟಿನ್ ಜೀವಕ್ಕೆ ಅಪಾಯ ಇದೆಯಾ? ಎಂಬ ಪ್ರಶ್ನೆ ಕಾಡ್ಗಿಚ್ಚಿನಂತೆ ಜಗತ್ತಿನಾದ್ಯಂತ ಹರಡಿತ್ತು.

Russian president Vladimir Putins house attacked by drones in kremlin

2 ಉಕ್ರೇನ್ ಡ್ರೋನ್ ಉಡೀಸ್!

ಪುಟಿನ್ ಅವರ ಕ್ರೆಮ್ಲಿನ್ ಮನೆ ಮೇಲೆ ಶಸ್ತ್ರಾಸ್ತ್ರ ತುಂಬಿಕೊಂಡ 2 ಡ್ರೋನ್‌ಗಳು ಬರುವುದನ್ನ ಗಮನಿಸಿದ ತಕ್ಷಣ ರಷ್ಯಾ ಸೇನೆ ಅವುಗಳನ್ನ ಹೊಡೆದು ಉರುಳಿಸಿದೆ. ತಕ್ಷಣ ಅಗತ್ಯ ಕ್ರಮಕೈಗೊಂಡ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗೇ ಪುಟಿನ್ ಅವರ ಕ್ರೆಮ್ಲಿನ್ ನಿವಾಸಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ. ಈ ನಡುವೆ ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಲು ಯತ್ನಿಸಿದ ಪ್ರಸಂಗವನ್ನ ನಾವು ಯೋಜಿತ ಭಯೋತ್ಪಾದಕ ದಾಳಿ ಎಂದು ಪರಿಗಣಿಸುವುದಾಗಿ ರಷ್ಯಾ ಘೋಷಿಸಿದೆ. ಹಾಗಾದ್ರೆ ಉಕ್ರೇನ್ ಕಥೆ ಮುಂದೆ ಹೇಗೆ?

3 ಪುಟಿನ್ ಶತ್ರುಗಳಿಗೆ ಮಾರಿಹಬ್ಬ ಗ್ಯಾರಂಟಿ?

ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಉಕ್ರೇನ್ ವಿರುದ್ಧ ಯಾವುದಾದರು ಬಲವಾದ ಕಾರಣ ಸಿಗಲಿ ಎಂದು ಕಾಯುತ್ತಿತ್ತು. ಪರಿಸ್ಥಿತಿ ಹಿಡಿತಕ್ಕೆ ಸಿಕ್ಕರೆ ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಸನ್ನದ್ಧವಾಗಿತ್ತು ರಷ್ಯಾ ಸೇನೆ. ಈಗ ಸ್ವತಃ ಉಕ್ರೇನ್ ಮಹಾ ಅಪರಾಧ ಮಾಡಿದಂತೆ ತೋರುತ್ತಿದೆ. ಇದೇ ಕಾರಣವನ್ನು ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ. ಹಾಗೇ ತಮ್ಮ ಶತ್ರುಗಳಿಗೆ ಪುಟಿನ್ ಮಾರಿಹಬ್ಬ ಮಾಡಿಸೋದು ಪಕ್ಕಾ.

4 ಗಡಿಯಲ್ಲಿ ಅಲರ್ಟ್ ಘೋಷಿಸಿದ ರಷ್ಯಾ

ಕೆಲವು ದಿನಗಳಿಂದ ರಷ್ಯಾ ಗಡಿಯಲ್ಲಿ ಉಕ್ರೇನ್ ಭೀಕರ ದಾಳಿ ನಡೆಸುತ್ತಿತ್ತು. ಪರಿಣಾಮ ರಷ್ಯಾದ ಗಡಿ ಭಾಗದಲ್ಲಿರುವ ಹಳ್ಳಿಗಳು ನಾಶವಾಗುತ್ತಿದ್ದವು. ಇಷ್ಟೆಲ್ಲಾ ನಡೆದರೂ ರಷ್ಯಾ ಸೇನೆ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ತಣ್ಣಗೆ ಕೂತಿದ್ದರು. ಆದರೆ ಈಗ ರಷ್ಯಾ ಅಧ್ಯಕ್ಷರನ್ನೇ ಟಾರ್ಗೆಟ್ ಮಾಡಿ ಉಕ್ರೇನ್ ಎಲ್ಲೋ ಮಹಾ ಎಡವಟ್ಟು ಮಾಡಿರುವ ರೀತಿ ಕಾಣಿಸ್ತಿದೆ. ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ ಸೇನೆಗೆ ಸನ್ನದ್ಧವಾಗಿರಲು ಆದೇಶಿಸಿದ್ದು, ಶಸ್ತ್ರಾಸ್ತ್ರಗಳನ್ನ ಸಿದ್ಧಗೊಳಿಸುತ್ತಿದೆ. ಇದು ಮುಂದೆ ಮಹಾ ವಿನಾಶಕ್ಕೆ ಮುನ್ನುಡಿ ಬರೆಯೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ಒಟ್ನಲ್ಲಿ ರಷ್ಯಾ ಅಧ್ಯಕ್ಷರ ಮನೆ ಮೇಲೆ ಉಕ್ರೇನ್‌ಗೆ ಸೇರಿದ ಡ್ರೋನ್ ಹಾರಾಡಿ, ದಾಳಿಗೆ ಯತ್ನಿಸಿದೆ ಎಂಬ ಸುದ್ದಿ ಈಗ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಕ್ರಿಯೇಟ್ ಮಾಡಿದೆ. ಮತ್ತೊಂದ್ಕಡೆ ರಷ್ಯಾ ಸೇನೆ ತನ್ನ ಶತ್ರುಗಳ ಬಲಿಗಾಗಿ ತೊಡೆತಟ್ಟಿ ನಿಂತಿದ್ದು, ಈಗಾಗಲೇ ಯುದ್ಧದಲ್ಲಿ ಬಸವಳಿದ ಉಕ್ರೇನ್ ಸೇನೆಗೆ ಮತ್ತೊಂದು ಸವಾಲು ಶೀಘ್ರದಲ್ಲೇ ಎದುರಾಗಲಿದೆ. ಉಕ್ರೇನ್ ಮತ್ತೊಮ್ಮೆ ಮೈಗೆ ಎಣ್ಣೆ ಹಚ್ಚಿಕೊಳ್ಳಬೇಕಿದೆ. ಹಾಗೇ ಪುಟಿನ್ ನಿವಾಸದ ಸುತ್ತ ಭದ್ರತೆ ಮತ್ತಷ್ಟು ಬಿಗಿಗೊಳಿಸಿ, ರಷ್ಯಾ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+