ಪುಟಿನ್ ಹುಡುಗರ ಅಬ್ಬರ, ಬೆದರಿ ಹೋದ ಉಕ್ರೇನ್!

ರಷ್ಯಾ VS ಉಕ್ರೇನ್ ಯುದ್ಧದಲ್ಲಿ ರಷ್ಯಾ ತನ್ನ ಹಿಡಿತವನ್ನು ಮತ್ತಷ್ಟು ಹೆಚ್ಚು ಮಾಡಿದ್ದು, ಉಕ್ರೇನ್ ಪರದಾಟದ ನಡುವೆ ಪುಟಿನ್ ಹುಡುಗರು ಅಬ್ಬರಿಸಲು ಶುರು ಮಾಡಿದ್ದಾರೆ. ಇದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಹೊಸ ತಲೆನೋವು ತಂದಿದ್ದರೆ, ರಷ್ಯಾ ಮಾತ್ರ ಪುಟಿನ್ ನೇತೃತ್ವದಲ್ಲಿ ಇಡೀ ಉಕ್ರೇನ್ ನೆಲವನ್ನು ಕಬ್ಜಾ ಮಾಡಲು ಸ್ಕೆಚ್ ಹಾಕುತ್ತಿದೆ. ಈ ಮೂಲಕ ಉಕ್ರೇನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

2022 ರಲ್ಲಿ ಶುರುವಾದ ರಷ್ಯಾ VS ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ಮುಗಿದು ಹೋಗಿ, ಎಲ್ಲಾ ಶಾಂತವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಆಗಿದ್ದೆಲ್ಲಾ ಉಲ್ಟಾ ಅಂತಾ ಹೇಳಬಹುದು. ಯಾಕಂದ್ರೆ ಕೆಲವೇ ದಿನಗಳು ಬಿಡಿ ಈಗಾಗಲೇ 2 ವರ್ಷ ಪೂರೈಸಿರುವ ಈ ಯುದ್ಧ ಇನ್ನೂ 20 ವರ್ಷ ಕಳೆದರು ಮುಗಿಯುವ ಲಕ್ಷಣ ಕಾಣ್ತಿಲ್ಲ. ಒಂದು ಕಡೆ ಉಕ್ರೇನ್ ಪರವಾಗಿ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ನಿಂತಿದ್ದರೆ, ಇನ್ನೊಂದು ಬದಿಯಲ್ಲೀಗ ಚೀನಾ & ಉತ್ತರ ಕೊರಿಯಾ ಬೆಂಬಲ ಪಡೆದು ರಷ್ಯಾ ತನ್ನ ಹೋರಾಟ ಮುಂದುವರಿಸಿದೆ. ಹೀಗಾಗಿ ಪರಿಸ್ಥಿತಿ ಹಿಡಿತಕ್ಕೆ ಸಿಗದಷ್ಟು ಜಾರಿ ಹೋಗಿದ್ದು, ರಷ್ಯಾ ಭಾಗಶಃ ಯುದ್ಧದಲ್ಲಿ ತನ್ನ ವಿಜಯ ಪತಾಕೆ ಹಾರಿಸಿದೆ.

Russian Military Is Got More Grip In War Against The Ukraine

ಅಮೆರಿಕ ಏನು ಮಾಡಬಹುದು?

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಅಮೆರಿಕ ಕೂಡ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದು, ಆರ್ಥಿಕವಾಗಿ ಕೂಡ ಸಂಕಷ್ಟ ಎದುರಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ತೆ ಉಕ್ರೇನ್ ಸೇನೆಗೆ ಅಪಾಯ ತರಲಿದೆ. ಅದನ್ನ ಬಿಟ್ಟರೆ ರಷ್ಯಾ ವಿರುದ್ಧ ಅಮೆರಿಕ ಮತ್ತಷ್ಟು ಕಠಿಣವಾದ ಕ್ರಮ ಕೈಗೊಳ್ಳಬಹುದೇ ವಿನಃ ಇದರ ಹೊರತಾಗಿ ಬೇರೆ ಏನೂ ಮಾಡಲು ಆಗಲ್ಲ. ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ಗೆ ಮತ್ತಷ್ಟು ನೆರವು ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ಕೂಡ, ಇದೀಗ ಬಯಲಾಗುತ್ತಿದೆ.

ಯುರೋಪ್ ದೇಶಗಳಲ್ಲಿ ಭಯ!

ಹೀಗೆ ಉಕ್ರೇನ್ & ರಷ್ಯಾ ನಡುವೆ ಘೋರ ಯುದ್ಧ ನಡೆಯುವ ಸಮಯದಲ್ಲೇ ಯುರೋಪ್ ದೇಶಗಳು ಭಯದಲ್ಲಿ ನಲುಗಿ ಹೋಗಿವೆ. ಯಾಕಂದ್ರೆ ಯಾವ ಸಮಯದಲ್ಲಿ ಈ ಯುದ್ಧವು ಮತ್ತೊಂದು ಮಹಾಯುದ್ಧ ಆಗುತ್ತೋ? ಎಂಬ ಅತಂಕ ಕಾಡುತ್ತಿದೆ. ಯಾಕಂದ್ರೆ ಈ ಹಿಂದೆ 1ನೇ & 2ನೇ ಮಹಾಯುದ್ಧಗಳು ಆರಂಭ ಆಗಿದ್ದು ಇದೇ ಯುರೋಪ್ ಖಂಡದಲ್ಲಿ. ಇದೇ ಕಾರಣಕ್ಕೆ ಇದೀಗ ಮತ್ತೊಂದು ಮಹಾಯುದ್ಧದ ಭಯ ಕೂಡ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+