ಉಕ್ರೇನ್ ಡ್ರೋನ್ ಘಟಕ ಉಡಾಯಿಸಲು ಕ್ಷಿಪಣಿ ದಾಳಿಗೆ ಸಿದ್ಧವಾದ ರಷ್ಯಾ ಮಿಲಿಟರಿ

ಉಕ್ರೇನ್ ಸೇನೆ ಇತ್ತೀಚೆಗೆ ರಷ್ಯಾ ಮೇಲೆ ನಡೆಸಿದ್ದ ಭೀಕರ ದಾಳಿಯಲ್ಲಿ ಭಾರಿ ದೊಡ್ಡ ನಷ್ಟವನ್ನ ಅನುಭವಿಸಿದೆ ಪುಟಿನ್ ಪಡೆ. ತೈಲ ಘಟಕ & ಗ್ಯಾಸ್ ಉತ್ಪಾದನಾ ಘಟಕಗಳ ಮೇಲೆ ಉಕ್ರೇನ್‌ನ ಸೇನೆ ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದು, ಸಾವಿರಾರು ಕೋಟಿ ರೂಪಾಯಿ ಲಾಸ್ ಆಗಿಬಿಟ್ಟಿದೆ. ಇದು ಉಕ್ರೇನ್ ವಿರುದ್ಧ ರಷ್ಯಾಗೆ ಇದ್ದ ಸಿಟ್ಟು ಮತ್ತಷ್ಟು ಹೆಚ್ಚಿಸಿದ್ದು, ಇದೀಗ ಇಸ್ಕಾಂಡರ್-ಎಂ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಶತ್ರುಗಳಿಗೆ ಉತ್ತರ ಕೊಡಲು ಮುಂದಾಗಿದೆ ರಷ್ಯಾ ಸೇನೆ.

ಜಗತ್ತಿನಾದ್ಯಂತ ಬರೀ ಯುದ್ಧ ಭಯವೇ ಕಾಡ್ತಿದ್ದು, ರಷ್ಯಾ ಮೇಲೆ ಉಕ್ರೇನ್ ದಾಳಿ ಮಾಡಿ ಕೆಣಕಿದೆ ಅಂತಾ ಇದೀಗ ಮರುದಾಳಿ ಆರಂಭಿಸಿದೆ ರಷ್ಯಾದ ಸೇನೆ. ತನ್ನ ಬಳಿ ಇರುವ ಭಯಾನಕ ಅಸ್ತ್ರಗಳ ರಾಶಿ ಹೊರಗೆ ತೆಗೆದು ಒಂದು ರೌಂಡ್ ಡ್ರಿಲ್ ಮಾಡಲು ಕೂಡ ರಷ್ಯಾ ಚಿಂತನೆ ನಡೆಸಿದೆ. ಹೀಗೆ ಇದ್ದಾಗ ಪರಮಾಣು ಅಸ್ತ್ರಗಳ ಜೊತೆಗೂ ಒಂದು ಸುತ್ತು ತನ್ನ ಶಕ್ತಿ ತೋರಿಸಲು ರಷ್ಯಾ ಮಿಲಿಟರಿ ಸಿದ್ಧವಾಗಿದೆ. ಇದೆಲ್ಲಾ ನಡೆಯುವಾಗಲೇ ಉಕ್ರೇನ್ ಎಡವಟ್ಟು ಮಾಡಿಕೊಂಡಿದ್ದು, ತನ್ನ ತಪ್ಪಿಗೆ ಈಗ ಉಕ್ರೇನ್ ಬೆಲೆ ತೆರುವ ಸಮಯ ಬಂದೇ ಬಿಟ್ಟಿದೆ.

Russian Military Conducts Iskander Missile Strike on Ukrainian Drone Base

ರಷ್ಯಾ ದಾಳಿಯಲ್ಲಿ 65 ಡ್ರೋನ್ ಉಡೀಸ್!‌

ಅಂದಹಾಗೆ ರಷ್ಯಾ ಈಗ ನಡೆಸಿರುವ ದಾಳಿಯಲ್ಲಿ 65 ಡ್ರೋನ್‌ಗಳು, ನಾಲ್ಕು ಟ್ರಕ್‌ಗಳು ಮತ್ತು 5 ಉಡಾವಣಾ ಘಟಕಗಳು ನಾಶವಾಗಿವೆ. ಇದರ ಜೊತೆಗೆ 30 ಉಕ್ರೇನಿಯನ್ ಸೈನಿಕರು ಕೂಡ ಬಲಿ ಆಗಿದ್ದಾರೆ ಎನ್ನಲಾಗಿದ್ದು, ಈ ದಾಳಿಯನ್ನು ಇನ್ನಷ್ಟು ಉಗ್ರವಾಗಿ ನಡೆಸಲು ರಷ್ಯಾ ಈಗ ಚಿಂತನೆ ನಡೆಸಿದೆ. ಈ ದಾಳಿ ರಷ್ಯಾ & ಉಕ್ರೇನ್ ನಡುವೆ ಮುಂದುವರಿಯುತ್ತಿರುವ ಯುದ್ಧದಲ್ಲಿ ಇನ್ನೊಂದು ಪ್ರಮುಖ ಆಘಾತವಾಗಿ ಪರಿಣಮಿಸಿದ್ದು, ನೋಡ ನೋಡುತ್ತಲೇ ನೂರಾರು ಕಟ್ಟಡಗಳು ನಾಶವಾಗಿ ಹೋಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+