World War: ಜಗತ್ತಿನಲ್ಲಿ ಮತ್ತೊಂದು ಯುದ್ಧಕ್ಕೆ ಸದ್ದಿಲ್ಲದೆ ತಯಾರಿ?

ಈಗಾಗಲೇ ಜಗತ್ತು 2 ಭೀಕರ ಮಹಾಯುದ್ಧ ನೋಡಿದ್ದು ಮುಂದೆ ಎಂದೂ ಮಹಾಯುದ್ಧ ನಡೆಯಬಾರದು ಅಂತಾ ಜಗತ್ತಿನ ಶಕ್ತಿಶಾಲಿ ನಾಯಕರು ನಿರ್ಣಯ ಕೈಗೊಂಡಿದ್ದರು. ಆದ್ರೆ ಈ ನಿರ್ಣಗಳು ಅವರ ಜೊತೆಯಲ್ಲಿ ಹೊರಟು ಹೋದಂತೆ ಕಾಣುತ್ತಿದೆ. ಯಾಕಂದ್ರೆ ಜಗತ್ತು ಮತ್ತೆ ಹರಿದು ಹಂಚಿ ಹೋಗುತ್ತಿದ್ದು, ರಷ್ಯಾ & ಉಕ್ರೇನ್ ಹಾಗೂ ಪ್ಯಾಲೆಸ್ತೀನ್ & ಇಸ್ರೇಲ್ ನಡುವೆ ಯುದ್ಧ ಶುರುವಾಗಿದೆ. ಹೀಗಿದ್ದಾಗ ಸರ್ವಾಧಿಕಾರಿ ಕಿಮ್ ವಿಚಾರವೂ ಮುನ್ನೆಲೆಗೆ ಬಂದಿದೆ.

ಹೌದು, ಇಸ್ರೇಲ್ & ಹಮಾಸ್ ನಡುವೆ ಭೀಕರ ಕಾಳಗವು ನಡೆಯುವಾಗ ಉತ್ತರ ಕೊರಿಯಾ ಮತ್ತೆ ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಏಕೆಂದರೆ ರಷ್ಯಾದ ವಿದೇಶಾಂಗ ಸಚಿವರಾದ ಸೆರ್ಗೆ ಲಾವ್ರೊವ್ ದಿಢೀರ್ ಉತ್ತರ ಕೊರಿಯಾಗೆ ಭೇಟಿ ನೀಡಿದ್ದಾರೆ. ಅಲ್ದೆ ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆಗೆ ಮಹತ್ವದ ಮಾತುಕತೆ ಕೂಡ ನಡೆಸಿದ್ದಾರೆ. ಸೆರ್ಗೆ ಲಾವ್ರೊವ್ ಭೇಟಿ ಕುರಿತು ರಷ್ಯಾ ಮಾಧ್ಯಮಗಳು ವರದಿ ಮಾಡಿದ್ದು, ಇಸ್ರೇಲ್ & ಹಮಾಸ್ ಯುದ್ಧದ ನಡುವೆ ಈ ಭೇಟಿ ಗಮನ ಸೆಳೆದಿದೆ.

Russian Foreign Minister Sergey Lavrov discussed with Kim Jong Un

ಗಂಭೀರ ಚರ್ಚೆ ನಡೆಸಿದ ಕಿಮ್!

ಸುಮಾರು 1 ಗಂಟೆ ಕಾಲ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ & ಕಿಮ್ ಜಾಂಗ್ ಉನ್ ಮಧ್ಯೆ ಮಹತ್ವದ ಚರ್ಚೆ ನಡೆದಿದೆ. ಇತ್ತೀಚೆಗಷ್ಟೇ ರಷ್ಯಾಗೆ ತೆರಳಿದ್ದ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಉಕ್ರೇನ್ ವಿರುದ್ಧ ರಷ್ಯಾಗೆ ಬೆಂಬಲ ಘೋಷಿಸಿದ್ದನು. ಅಲ್ಲದೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರವನ್ನ ಕಿಮ್ ಜಾಂಗ್ ಉನ್ ರಷ್ಯಾ ಸೇನೆಗೆ ಸರಬರಾಜು ಮಾಡಿದ್ದಾನೆ ಎಂಬ ಆರೋಪ ಇದೆ. ಹೀಗೆ ಏನೇ ಆರೋಪಗಳು ಬಂದರೂ ರಷ್ಯಾ ಮಾತ್ರ ತನ್ನ ನೆಚ್ಚಿನ ಗೆಳೆಯ ಉತ್ತರ ಕೊರಿಯಾ ಸಂಬಂಧವನ್ನು ಬಿಟ್ಟುಕೊಡುತ್ತಿಲ್ಲ.

ಉತ್ತರ ಕೊರಿಯಾಗೆ ಸಂಪೂರ್ಣ ನೆರವು!

ಇನ್ನು ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಬೆಂಬಲ ನೀಡಿರುವ ಉತ್ತರ ಕೊರಿಯಾಗೆ ರಷ್ಯಾದ ಕಡೆಯಿಂದ ದೊಡ್ಡ ಉಡುಗೊರೆ ಸಿಕ್ಕಿದೆ. ಅದೇನೆಂದರೆ ಉತ್ತರ ಕೊರಿಯಾ ಅಭಿವೃದ್ಧಿಗಾಗಿ ಅಗತ್ಯ ಇರುವ ಎಲ್ಲ ವಿಷಯದಲ್ಲೂ ರಷ್ಯಾ ಬೆಂಬಲ ಘೋಷಿಸಿದೆ. ಅಲ್ಲದೆ ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಇದೀಗ ರಷ್ಯಾದ ವಿದೇಶಾಂಗ ಸಚಿವರು ಹಾಗೂ ಕಿಮ್ ಜಾಂಗ್ ಉನ್ ಮಾತುಕತೆ ನಡೆಸಿದ್ದಾರೆ.

ಈ ಮೂಲಕ ರಷ್ಯಾ ಮತ್ತೊಂದು ನಿಗೂಢ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಉತ್ತರ ಕೊರಿಯಾ & ರಷ್ಯಾ ಪಾಲಿಗೆ ಅಮೆರಿಕ ಶತ್ರು. ಹೀಗಾಗಿ ಶತ್ರುವಿನ ಶತ್ರು ಮಿತ್ರ ಎಂಬುದನ್ನು ರಷ್ಯಾದ ನಾಯಕರು ಸಾಬೀತು ಮಾಡುತ್ತಿದ್ದಾರೆ. ಅಲ್ಲದೆ ಸಂಕಷ್ಟದಲ್ಲಿ ಇರುವ ಉತ್ತರ ಕೊರಿಯಾದ ಜೊತೆ ಸೇರಿ ಅಮೆರಿಕದ ನಾಯಕರಿಗೆ ಸವಾಲು ಹಾಕುತ್ತಿದ್ದಾರೆ. ಆದರೆ ಈ ಬಗ್ಗೆ ಅಮೆರಿಕ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Russian Foreign Minister Sergey Lavrov discussed with Kim Jong Un

ಡೋಂಟ್ ಕೇರ್ ಅಂತಿದ್ದಾನೆ ಸರ್ವಾಧಿಕಾರಿ!

ಕಿಮ್ ಜಾಂಗ್ ಉನ್ ರಷ್ಯಾಗೆ ಹೋಗಿ ಬಂದ ಬಳಿಕ ದಕ್ಷಿಣ ಕೊರಿಯಾ ಕೂಡ ಗುಡುಗಿತ್ತು. ತನ್ನ 75ನೇ ಸೇನಾ ದಿನಾಚರಣೆ ಹಿನ್ನೆಲೆ ತನ್ನ ರಾಜಧಾನಿ ಸೋಲ್‌ನಲ್ಲಿ ಅದ್ಧೂರಿಯಾಗಿ ಸೇನಾ ಪರೇಡ್ ನಡೆಸಿತ್ತು. ಹೀಗೆ ಸೇನಾ ಕವಾಯತು ವೇಳೆ ದ.ಕೊರಿಯಾ ತನ್ನ ಉಗ್ರಾಣದಲ್ಲಿ ಇಟ್ಟಿದ್ದ ಭಯಾನಕ ಅಸ್ತ್ರ ತೆಗೆದು ಕಿಮ್‌ಗೆ ವಾರ್ನಿಂಗ್ ಕೊಟ್ಟು ಗುಡುಗಿತ್ತು. ಇದಿಷ್ಟೇ ಅಲ್ಲದೆ ಖುದ್ದು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ನೇರವಾಗಿ ಕಿಮ್ ಜಾಂಗ್ ಉನ್‌ಗೆ ವಾರ್ನ್ ಮಾಡಿದ್ದರು. ಉತ್ತರ ಕೊರಿಯಾದ ಸರ್ವಾಧಿಕಾರಿ ಪರಮಾಣು ಬಾಂಬ್ ಬಳಸಿದರೆ, ಆ ಕ್ಷಣ ಅವನ ಅಧಿಕಾರ ಕೊನೆಯಾಗಿ ಆಡಳಿತ ನಾಶವಾಗುತ್ತೆ ಎಂದು ಎಚ್ಚರಿಸಿದ್ದರು. ಆದರೆ ಕಿಮ್ ಜಾಂಗ್ ಉನ್ ಮಾತ್ರ ಈ ಎಚ್ಚರಿಕೆಗಳಿಗೆ ಹೆದರುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+